Advertisement

Sirsi ಮಾರಿಕಾಂಬಾ ಜಾತ್ರೆ… ಗದ್ದುಗೆ ಏರಲು ಹೊರಟ ‘ಅಮ್ಮ’

09:23 AM Mar 20, 2024 | Team Udayavani |

ಶಿರಸಿ: ಅಮ್ಮನಿಗೆ ಉಘೇ, ಉಘೇ, ಭಕ್ತಿ ಭಾವದ ಪರಾಕಾಷ್ಠೆ, ಭಕ್ತರ ಭಾವೋನ್ಮಾದ, ಮಾರಿಕಾಂಬೆಗೆ ಜಯ ಜಯ ಎಂಬ ಘೋಷದ ಮಧ್ಯೆ ಸರ್ವಮಂಗಲೆಯ‌ ರಥೋತ್ಸವ ಶೋಭಾಯಾತ್ರೆಯ ಸಂಭ್ರಮದಲ್ಲಿ ಆರಂಭಗೊಂಡಿತು.

Advertisement

ಬುಧವಾರ ನಗರದ ಬನವಾಸಿ ರಸ್ತೆಯಲ್ಲಿನ ಮಾರಿಕಾಂಬಾ ದೇವಸ್ಥಾನದಿಂದ ಹೊರಟ ದೇವಿಯ ರಥೋತ್ಸವವನ್ನು ರಸ್ತೆಯ ಇಕ್ಕೆಲದಲ್ಲಿ ನಿಂತು ಭಕ್ತರು ಹರ್ಷೋದ್ಘಾರದಿಂದ ವೀಕ್ಷಿಸಿ ಬಾಳೆ ಹಣ್ಣು, ಹರಕೆ ಕೋಳಿ, ಕಡಲೆ‌ ಎಸೆದು ಹರಕೆ ಸಲ್ಲಿಸುತ್ತಿದ್ದಾರೆ.

ವಿಧವಾದ ಧಾರ್ಮಿಕ ಕಾರ್ಯಗಳ ಬಳಿಕ 7:25ಕ್ಕೆ ದೇವಿ ರಥವೇರಿದಳು. 8;57ರ ವೇಳೆಗೆ ರಥೋತ್ಸವ ಆರಂಭವಾಯಿತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ದೇವಿ ಬಿಡಕಿ ಬಯಲಿನಲ್ಲಿ ಗದ್ದುಗೆ ಏರಲಿದ್ದು, ಗುರುವಾರ ಬೆಳಿಗ್ಗೆ 5 ರಿಂದ 27ರ ಬೆಳಿಗ್ಗೆ 10ರ ತನಕ ವಿವಿಧ ಸೇವೆಗಳನ್ನು ಸಲ್ಲಿಸಲು ಅವಕಾಶವಿದೆ. ಮೂವತ್ತು ಸಾವಿರಕ್ಕೂ ಅಧಿಕ ಭಕ್ತರು ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next