Advertisement

ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ : ಯುವಕನ ಸಮಯ ಪ್ರಜ್ಞೆಯಿಂದ ಉಳಿಯಿತು ಜೀವ

04:02 PM Feb 22, 2022 | Team Udayavani |

ಶಿರಸಿ : ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಯುವಕನೋರ್ವನ ಸಮಯ ಪ್ರಜ್ಞೆಯಿಂದ ಜೀವ ಉಳಿದ ಘಟನೆ ಮಂಗಳವಾರ ನಡೆದಿದೆ.

Advertisement

ಬರ್ತಾ ಫರ್ನಾಂಡಿಸ್ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯಾಗಿದ್ದಾರೆ.

ಅನಾರೋಗ್ಯ ಮತ್ತು ಮಾನಸಿಕವಾಗಿ ನೊಂದ ವೃದ್ದೆ ಶಿರಸಿಯ ಪಶುಸಂಗೋಪನಾ ಇಲಾಖೆಗೆ ಸೇರಿದ್ದ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ, ಇದನ್ನು ಗಮನಿಸಿದ ಅಸ್ಪತ್ರೆ ಸಿಬ್ಬಂದಿ ಮತ್ತು ರಸ್ತೆಯಲ್ಲಿ ಸಾಗುತ್ತಿದ್ದ ಸಂಗೀತಾ ಮೊಬೈಲ್ ಶಾಪ್ ಸಿಬ್ಬಂದಿ ಸಚ್ಚಿನ್ ಶಿವಕುಮಾರ ಮತ್ತು ನಿತಿನ್
ಅವರ ಸಮಯಪ್ರಜ್ಞೆಯಿಂದ ಮಹಿಳೆ ಬದುಕುಳಿಯಲು ಸಾಧ್ಯವಾಗಿದೆ.

ಬರ್ತಾ ಫರ್ನಾಂಡಿಸ್ 15 ಅಡಿ ನೀರು ಇರುವ ಬಾವಿಯಿಗೆ ಬಿದ್ದರೂ ಬದುಕುಳಿದಿದ್ದುಅಚ್ಚರಿಯಾಗಿದೆ. ಗಣೇಶ ನಗರದ ದಿನೇಶ ಸಾರ್ವಜನಿಕರ ಸಹಕಾರದಿಂದ ಬಾವಿಗಿಳಿದು ಮಹಿಳೆ ಮೇಲೆತ್ತಲು ಸಹಕರಿಸಿದರು. ನಗರಠಾಣೆ ಪಿ ಎಸ್ ಐ ಮತ್ತು ಸಿಬ್ಬಂದಿ, 112 ಸಿಬ್ಬಂದಿ, ಈ ಸಂದರ್ಭದಲ್ಲಿದ್ದು ರಕ್ಷಣಾ ಕಾರ್ಯಕ್ಕೆ ಸಹಕರಿಸಿದ್ದಾರೆ ಅಲ್ಲದೆ ಅಗ್ನಿಶಾಮಕ ಸಿಬ್ಬಂದಿ ಮಹಿಳೆ ರಕ್ಷಣೆಗೆ ನೆರವಾದರು.

ಇದನ್ನೂ ಓದಿ : ಗಲಭೆಗೆ ಪ್ರಚೋದನೆ: SFJ ಸಂಘಟನೆ ಜತೆ ಸಂಪರ್ಕ ಹೊಂದಿದ Apps, ವೆಬ್ ಸೈಟ್ ಗೆ ಕೇಂದ್ರ ನಿರ್ಬಂಧ

Advertisement
Advertisement

Udayavani is now on Telegram. Click here to join our channel and stay updated with the latest news.

Next