Advertisement

Sirsi: ಕಾಡು ಹಂದಿಗಳ ಕಾಟಕ್ಕೆ 200ಕ್ಕೂ ಅಧಿಕ ಅಡಿಕೆ ಸಸಿ ನಾಶ… ಲಕ್ಷಾಂತರ ರೂ. ನಷ್ಟ

07:41 PM May 21, 2023 | Team Udayavani |

ಶಿರಸಿ: ಇತ್ತೀಚಿಗೆ ಗ್ರಾಮೀಣ ಭಾಗದಲ್ಲಿ ಕಾಡು ಹಂದಿಗಳ ಕಾಟ ಹೆಚ್ಚಾಗಿದ್ದು, ಅಪಾರ ಬೆಳೆ ನಷ್ಟ ಉಂಟಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ತಾಲೂಕಿನ ಸೊಪ್ಪಿನಮನೆಯಲ್ಲಿ 200 ಕ್ಕೂ ಅಧಿಕ ಅಡಿಕೆ ಸಸಿಗಳನ್ನು ಕಾಡು ಹಂದಿಗಳ ಗುಂಪು ನಾಶ ಮಾಡಿದ್ದು, ಲಕ್ಷಾಂತರ ರೂ. ನಷ್ಟವುಂಟಾಗಿದೆ.

Advertisement

ಕುಳವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬರೂರು ಗ್ರಾಮದ ಸೊಪ್ಪಿನಮನೆ ಊರಿನಲ್ಲಿ ಮಂಜುನಾಥ ಶೇಟ್ ಎಂಬುವರಿಗೆ ಸೇರಿದ ಸ.ನಂ. 45,46,47 ರ ಅಡಿಕೆ ತೋಟಕ್ಕೆ ಹಂದಿ ದಾಳಿ ಮಾಡಿದ್ದು, ಶನಿವಾರ ತಡರಾತ್ರಿ ಹಿಂಡು ಹಿಂಡಾಗಿ ಬಂದ ಹಂದಿಗಳ ಗುಂಪು ಸುಮಾರು 3 ಎಕರೆ ವ್ಯಾಪ್ತಿಯಲ್ಲಿ ಬೆಳೆಸಿದ್ದ ಅಡಿಕೆ ತೋಟವನ್ನು ನಾಶಪಡಿಸಿದೆ.

ಅಂದಾಜು 200 ಕ್ಕೂ ಅಧಿಕ ಗಿಡಗಳು ನಾಶವಾಗಿದೆ. ಮುಂದಿನ ವರ್ಷ ಪಸಲು ನೀಡುವಂತಹ ಗಿಡಗಳನ್ನು ಹಂದಿ ನಾಶ ಮಾಡಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ಪಟ್ಟ ಕಷ್ಟ ಮಣ್ಣು ಪಾಲಾದಂತಾಗಿದೆ. ಹಂದಿ ಹೊಡೆದರೆ ಅರಣ್ಯ ಇಲಾಖೆಯವರು ತಪ್ಪು ಎನ್ನುತ್ತಾರೆ. ಆದರೆ ಎಕರೆಗಟ್ಟಲೆ ಕೃಷಿ ಭೂಮಿ ನಾಶ ಪಡಿಸಿದ್ದಕ್ಕೆ ಯಾರು ಹೊಣೆ ? ಎಂದು ಮಾಲೀಕ ಮಂಜುನಾಥ ಶೇಟ್ ಪ್ರಶ್ನಿಸಿದ್ದಾರೆ.

ಲಕ್ಷಾಂತರ ರೂ. ಹಾನಿಯಾಗಿದ್ದು, ಮುಂದಿನ ಬೆಳೆಯೂ ನಾಶವಾಗಿದೆ. ಪುನಃ ನಾಲ್ಕೈದು ವರ್ಷ ಕಷ್ಟ ಪಡಬೇಕಾಗಿದೆ. ಆಗಲೂ ಇದೇ ಹಂದಿ ಕಾಟ ಎದುರಾಗಬಹುದು. ಕಾರಣ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯ ಗ್ರಾಪಂ ಸದಸ್ಯ ಸಂದೇಶ ಭಟ್ ಬೆಳಖಂಡ ಆಗ್ರಹಿಸಿದ್ದಾರೆ.

ಇನ್ನು ಹಂದಿ ಸೇರಿದಂತೆ ಇತರ ಕಾಡು ಪ್ರಾಣಿಗಳ ಕಾಟ ಮಲೆನಾಡು ಭಾಗದಲ್ಲಿ ಹೆಚ್ಚಾಗಿದ್ದು, ಅಡಿಕೆ, ಭತ್ತದ ಗದ್ದೆಗಳು ನಾಶವಾಗುವುದು ಸಾಮಾನ್ಯವಾಗಿದೆ. ಆದರೆ ಇಲಾಖೆಯಿಂದ ಮಾತ್ರ ಇದಕ್ಕೆ ಯಾವುದೇ ಸೂಕ್ತ ಪರಿಹಾರ ಬಾರದಿರುವುದು ರೈತರ ನಿದ್ದೆಗೆಡಿಸಿದೆ. ಇದರಿಂದ ಪ್ರಾಣಿ ಕಾಟ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

Advertisement

ಇದನ್ನೂ ಓದಿ: IPL ಹೈದರಾಬಾದ್ ವಿರುದ್ಧ ಮುಂಬೈ ಜಯಭೇರಿ ; ಗ್ರೀನ್ ಭರ್ಜರಿ ಶತಕ

Advertisement

Udayavani is now on Telegram. Click here to join our channel and stay updated with the latest news.

Next