Advertisement
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಮೇಯರ್ ಅವರ ಆಸ್ತಿ ಮೌಲ್ಯವು ಗುರುವಾರ 100.1 ಬಿಲಿಯನ್ ಡಾಲರ್‌ಗಳಿಗೆ(83.29 ಲಕ್ಷ ಕೋಟಿ ರೂ.) ಏರಿಕೆಯಾಗಿದೆ. ಲೋರಿಯಲ್ ಕಂಪನಿಯ ಷೇರುಗಳ ಮಾರುಕಟ್ಟೆ ಮೌಲ್ಯ ಏರಿಕೆ ಹಿನ್ನೆಲೆಯಲ್ಲಿ ಮೇಯರ್ ಆಸ್ತಿ ಹೆಚ್ಚಳಕ್ಕೆ ಕಾರಣವಾಯಿತು. ಪ್ರಸ್ತುತ ಮೇಯರ್ ಅವರು ಪ್ರಪಂಚದ 12ನೇ ಶ್ರೀಮಂತರಾಗಿದ್ದಾರೆ.
1998ರ ನಂತರ ಇದೇ ಮೊದಲ ಬಾರಿಗೆ ಲೋರಿಯಲ್ ಕಂಪನಿಯ ಆದಾಯ ದಾಖಲೆಯ ಏರಿಕೆ ಕಂಡಿದೆ. ಪ್ರಸ್ತುತ ಕಂಪನಿಯ ಮಾರುಕಟ್ಟೆ ಮೌಲ್ಯ 223 ಲಕ್ಷ ಕೋಟಿ ರೂ (268 ಬಿಲಿಯನ್ ಡಾಲರ್) ಆಗಿದೆ. ಮೇಯರ್(70) ಮತ್ತು ಅವರ ಕುಟುಂಬದವರು ಕಂಪನಿಯ ಷೇರುದಾರರಾಗಿದ್ದಾರೆ. ಗರಿಷ್ಠ ಶೇ.35ರಷ್ಟು ಷೇರುಗಳನ್ನು ಮೇಯರ್ ಹೊಂದಿದ್ದಾರೆ.