Advertisement
ಕಾರ್ನಾಡು ಹರಿಹರ ಕ್ಷೇತ್ರ ಹಯಗ್ರೀವ ಪಡ್ಡಿಲಾಯ ಅವರ ನೇತೃತ್ವದಲ್ಲಿ ವಿಶ್ವನಾಥ ಭಟ್ ಉಡುಪಿ ಅವರಿಂದ ಬ್ರಹ್ಮದರ್ಶನ ನಡೆಯಿತು. ಮುತ್ತಪ್ಪ ಕುಲಾಲ್ ಅವರಿಂದ ಕುಮಾರ ದರ್ಶನ ನಡೆಯಿತು. 13 ಮಂದಿ ಸಿರಿಗಳ ದರ್ಶನ ನಡೆಯಿತು.
ಜ. 21ರಂದು ವೇ| ಮೂ| ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ಮತ್ತು ದೇವಸ್ಥಾನದ ಪ್ರ. ಅರ್ಚಕ ಗೋಪಾಲಕೃಷ್ಣ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಸಂಜೆ ಕೊಯಿಲ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನ ಮಂಡಳಿಯಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ರಂಗಪೂಜೆ, ಬ್ರಹ್ಮದರ್ಶನ, ಕುಮಾರ ಸಿರಿಗಳ ದರ್ಶನ, ಬೈಲಾಂಡಿ ವರಾಹ ಗಗ್ಗರ ಸೇವೆ, ಮಹಮ್ಮಾಯಿ ದರ್ಶನ ಹಾಗೂ ಸುಡುಮದ್ದು ಪ್ರದರ್ಶನ ನಡೆಯಿತು. ಮಂಗಳವಾರ ಬೆಳಗ್ಗೆ ಕುಮಾರ, ಬೈಲಾಂಡಿ ವರಾಹ, ಮಹಮ್ಮಾಯಿ ಭೇಟಿ, ಮಂಗಳ ಪ್ರಸಾದ ವಿತರಣೆ ನಡೆಯಿತು. ಮಾಜಿ ಸಚಿವ ಬಿ. ರಮಾನಾಥ ರೈ, ಜಿ.ಪಂ. ಸದಸ್ಯರಾದ ಬಿ. ಪದ್ಮಶೇಖರ ಜೈನ್, ಎಂ. ತುಂಗಪ್ಪ ಬಂಗೇರ, ಪ್ರಮುಖ ರಾದ ಬೇಬಿ ಕುಂದರ್, ನ್ಯಾಯವಾದಿ ಸುರೇಶ್ ಶೆಟ್ಟಿ, ವಾಸ್ತುತಜ್ಞ ಬಿ.ಕೆ. ಮೋನಪ್ಪ ಆಚಾರ್ಯ, ಆಡಳಿತ ಮಂಡಳಿ ಸಮಿತಿ ಅಧ್ಯಕ್ಷ ಮೋಹನ್ ಶೆಟ್ಟಿ ನರ್ವಲ್ದಡ್ಡ ಮತ್ತು ಪದಾಧಿಕಾರಿಗಳಾದ ಶಂಕರ ಶೆಟ್ಟಿ ಬೆದ್ರ್ಮಾರು, ಸತೀಶ್ ಸಪಲ್ಯ ಮುಂಡಬೈಲು, ಡಿ.ಎಸ್. ಬೋಳೂರು, ಲೋಕನಾಥ ಶೆಟ್ಟಿ, ಡಾ| ರಾಮಕೃಷ್ಣ ಎಸ್. ಸನಂಗುಳಿ, ಕೆ. ಬೂಬ ಪೂಜಾರಿ, ಗಣೇಶ್ ಶೆಟ್ಟಿ, ಮಂಜುನಾಥ ಪೂಜಾರಿ ಮುಂಡಬೈಲು, ಸುಧೀರ್ ಶೆಟ್ಟಿ ಎರ್ಮೆನಾಡು, ದಯಾನಂದ ನಾಯ್ಕ, ಹರೀಶ್ ಶೆಟ್ಟಿ, ಮುರಳೀಧರ ಕೆದಿಲಾಯ, ಗಿರಿಜಾ ಶಂಕರ್ ಭಟ್ ಬಡಕೈಕೊಂಬು, ಕೊರಗ ಶೆಟ್ಟಿ ನರ್ವಲ್ದಡ್ಡ, ಬೂಬ ಸಪಲ್ಯ ಮುಂಡಬೈಲು, ವಸಂತ ಶೆಟ್ಟಿ ಕೇದಗೆ, ಡಾ| ಶಿವಪ್ರಸಾದ್ ಭಟ್ ಸನಂಗುಳಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.