Advertisement
ನ್ಯಾಶನಲ್ ಸೈಕ್ಲೋನ್ ರೆಸಿಸ್ಟ್ ಮಿಟಿಗೇಶನ್ ಪ್ರೊಜೆಕ್ಟ್ (ರಾಷ್ಟ್ರೀಯ ಚಂಡಮಾರುತ ಅಪಾಯ ಮುನ್ಸೂ ಚನೆ, ಉಪಶಮನ ಯೋಜನೆ -ಎನ್‌ಸಿಆರ್‌ಎಂಪಿ) ವತಿಯಿಂದ 26.92 ಕೋ.ರೂ. ವೆಚ್ಚದಲ್ಲಿ 26 ಸೈರನ್ ಟವರ್‌ಗಳನ್ನು ಅಳವಡಿಸುವ ಯೋಜನೆ ಇದಾಗಿದೆ.
ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ತಲಾ 8 ಹಾಗೂ ಉತ್ತರ ಕನ್ನಡದಲ್ಲಿ 10 ಪ್ರದೇಶಗಳನ್ನು ಸೈರನ್ ಟವರ್‌ಗೆ ಆಯ್ಕೆ ಮಾಡಲಾಗಿದೆ. ದಕ್ಷಿಣ ಕನ್ನಡದಲ್ಲಿ ಉಳ್ಳಾಲ, ಸೋಮೇಶ್ವರ, ತಣ್ಣೀರುಬಾವಿ, ಪಣಂಬೂರು, ಸುರತ್ಕಲ್, ಸಸಿಹಿತ್ಲು ಬೀಚ್‌ಗಳು ಹಾಗೂ ಹೊಸಬೆಟ್ಟು, ಉಡುಪಿಯಲ್ಲಿ ಪಡುಬಿದ್ರಿ, ಕಾಪು, ಮಲ್ಪೆ, ಕೋಡಿ, ಮಟ್ಟು, ಮರವಂತೆ, ಶಿರೂರು ಬೀಚ್‌ಗಳ ಬಳಿ ಹಾಗೂ ತೆಕ್ಟಟ್ಟೆ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಉತ್ತರ ಕನ್ನಡದಲ್ಲಿ ಮುರುಡೇಶ್ವರ ಬೀಚ್, ಎಕೋ ಬೀಚ್ ಪಾರ್ಕ್, ಓಂ ಮತ್ತು ಕುಡ್ಲೆ ಬೀಚ್ ನಡುವಣ ಪ್ರದೇಶ, ಗೋಕರ್ಣ ಬೀಚ್, ಆರ್.ಟಿ. ಬೀಚ್, ಮಂಕಿ, ಬೇಲೆಕೇರಿ, ಪುಜಾಗೇರಿ ಕಾಲೇಜು ಆವರಣ, ಶಿರಾಲಿ, ಚಿಟ್ಟಕುಳ ಗ್ರಾಮ ಪ್ರದೇಶ ಆಯ್ಕೆಯಾಗಿವೆ.
Related Articles
Advertisement
ಸೈರನ್ ಮೂಲಕ ಎಚ್ಚರಿಕೆಸಂಭಾವ್ಯ ಪ್ರಾಕೃತಿಕ ವಿಕೋಪಗಳ ಮುನ್ಸೂಚನೆ ಹವಾಮಾನ ಇಲಾಖೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಏಜೆನ್ಸಿಗಳಿಂದ ಲಭ್ಯವಾದ ಕೂಡಲೇ ಎಚ್ಚರಿಕೆ ಹಾಗೂ ಸಂದೇಶವನ್ನು ಈ ಮೆಗಾ ಟವರ್‌ಗಳಿಗೆ ರವಾನಿಸಲಾಗುತ್ತದೆ. ಸೈರನ್ ಟವರ್ ಮೂಲಕ ಸುತ್ತಲಿನ 10 ಕಿ.ಮೀ. ವರೆಗೆ ಸಂಭಾವ್ಯ ಅಪಾಯದ ಮುನ್ನೆಚರಿಕೆ ನೀಡಲಾಗುತ್ತದೆ. ಇದು ಸ್ಥಳೀಯವಾಗಿ ತ್ವರಿತ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲು ಹಾಗೂ ಪರಿಹಾರ ತಂಡಗಳಿಗೆ ಸೂಕ್ತ ಪರಿಹಾರ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ನೆರವಾಗುತ್ತದೆ. – ಕೇಶವ ಕುಂದರ್