Advertisement

ಜೈವಿಕ ಸಂಪನ್ಮೂಲ ಸಂರಕ್ಷಣೆಗೆ ಕ್ರಮ ಅಗತ್ಯ

05:36 PM May 24, 2022 | Team Udayavani |

ಶಿರಸಿ: ರಾಜ್ಯ ವಿಧಾನ ಮಂಡಳದವಿಶೇಷ ಸಭೆ-ಅಧಿ ವೇಶನ ಏರ್ಪಡಿಸಿರಾಜ್ಯದ ಜೈವಿಕ ಸಂಪನ್ಮೂಲಗಳ ಸ್ಥಿತಿಗತಿ,ನಿರ್ವಹಣೆ, ಸಂರಕ್ಷಣೆ, ಅಭಿವೃದ್ಧಿ ಬಗ್ಗೆವಿಶೇಷ ಚಿಂತನ-ಮಂಥನ, ತಜ್ಞರಜೊತೆಗೆ ಸಂವಾದ ಏರ್ಪಡಿಸಬೇಕುಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷಅನಂತ ಹೆಗಡೆ ಅಶೀಸರ ಹೇಳಿದರು.

Advertisement

ನಗರದ ಅರಣ್ಯ ಕಾಲೇಜಿನಲ್ಲಿಜೀವವೈವಿಧ್ಯ ದಿನಾಚರಣೆ ಹಸಿರುಸಮಾರಂಭ ಉದ್ಘಾಟಿಸಿ ಮಾತನಾಡಿದಅವರು, ಈ ನಿಟ್ಟಿನಲ್ಲಿ ವಿಧಾನಸಭಾಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಅವರಿಗೆ ಮನವಿ ಮಾಡಲಾಗುವುದುಎಂದರು. ಜೀವವೈವಿಧ್ಯ ಕಾಯ್ದೆಅಡಿಯಲ್ಲಿ ತಳಮಟ್ಟದಲ್ಲಿ ಗ್ರಾಮಪಂಚಾಯತಕ್ಕೆ ಜೈವಿಕ ಸಂಪತ್ತಿನ ರಕ್ಷಣೆಅಧಿ ಕಾರ ಸಿಕ್ಕಿದೆ. ಗ್ರಾಮಗಳ ನೈಸರ್ಗಿಕಸಂಪನ್ಮೂಲಗಳ ಬಳಕೆ, ನಿರ್ವಹಣೆ ಬಗ್ಗೆಸ್ಥಳೀಯ ಪಂಚಾಯತರಾಜ್‌ ಸಂಸ್ಥೆಗಳಜವಾಬ್ದಾರಿ ಹೆಚ್ಚಿದೆ.

ಭೂ ಕುಸಿತ ಪರಿಸ್ಥಿತಿತಡೆಯಲು ಜಿಲ್ಲಾಡಳಿತ ಗಂಭೀರಕ್ರಮ ಕೈಗೊಳ್ಳಬೇಕು. ಗ್ರಾಮಗಳಸಾಮೂಹಿಕ ಭೂಮಿ ಉಳಿಸಲು ಕ್ರಮಕ್ಕೆಮುಂದಾಗಬೇಕು ಎಂದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದಉಪ ಅರಣ್ಯ ಸಂರಕ್ಷಣಾ ಧಿಕಾರಿಅಜ್ಜಯ್ಯ ಮಾತನಾಡಿ, ಅಂತಾರಾಷ್ಟ್ರೀಯಜೀವವೈವಿಧ್ಯ ಸಮಾವೇಶ, ಒಪ್ಪಂದ,ಜೀವ ವೈವಿಧ್ಯ ದಾಖಲಾತಿ,ಕಾರ್ಯಕ್ರಮಗಳು ಹಾಗೂ ಕಾನೂನಿನಜಾರಿ ಹೇಗೆ ಎಂಬುದನ್ನು ವಿವರಿಸಿದರು.ತಾ.ಪಂ. ಇಂಜಿನೀಯರ ರಾಮಮೂರ್ತಿಮಾತನಾಡಿ, ಶಿರಸಿ ತಾ.ಪಂ.ಅನ್ನುರಾಜ್ಯದ ಮಾದರಿ ಜೀವವೈವಿಧ್ಯಸಮಿತಿ ಪಟ್ಟಿಯಲ್ಲಿ ಸೇರಿಸಲಾಗಿದೆ.

ಪಂಚಾಯತಗಳು ಜೀವವೈವಿಧ್ಯಸಮಿತಿಗಳ ಸಭೆ ನಡೆಸಿ ಕಾರ್ಯಚುರುಕುಗೊಳಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಅರಣ್ಯ ಕಾಲೇಜುಡೀನ್‌ ಡಾ| ಎ.ಜಿ.ಕೊಪ್ಪದ್‌ ಮಾತನಾಡಿ,ಗ್ರಾಮ ಮಟ್ಟದ ಜೈವಿಕ ಸಂಪತ್ತಿನಅಧ್ಯಯನಕ್ಕೆ ಅರಣ್ಯ ವಿದ್ಯಾರ್ಥಿಗಳನ್ನುತೊಡಗಿಸಲಾಗುವುದು ಎಂದರು. ಅರಣ್ಯವಿಜ್ಞಾನಿ ಡಾ|ವಾಸುದೇವ, ಡಾ|ಕೃಷ್ಣ,ಡಾ|ಉಪಾಧ್ಯ ಕೃಷಿ ವಿಜ್ಞಾನ ಕೇಂದ್ರದಡಾ|ರೂಪಾ ಪಾಟೀಲ, ಗಣಪತಿ ಕೆ.ಸಂವಾದದಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next