Advertisement

ಅರಣ್ಯ ಭೂಮಿ ವಿಚಾರದಲ್ಲಿ ಚುನಾಯಿತ‌ ಪ್ರತಿನಿಧಿಗಳು ಸತ್ತು ಹೋಗಿದ್ದಾರೆ: ಕಾಗೋಡು ತಿಮ್ಮಪ್ಪ

02:44 PM Sep 12, 2021 | Team Udayavani |

ಶಿರಸಿ: ಅರಣ್ಯ ಭೂಮಿ ವಿಚಾರದಲ್ಲಿ ಚುನಾಯಿತ‌ ಪ್ರತಿನಿಧಿಗಳು ಸತ್ತು ಹೋಗಿದ್ದಾರೆ.‌ ಸಾಗುವಳಿದಾರರಿಗೆ‌ ನ್ಯಾಯ ಸಿಗಲು ನಾನು‌‌ ನನ್ನ ಕೊನೇ ಉಸಿರುವ ತನಕ‌ ಹೋರಾಟ‌ ಮಾಡುತ್ತೇನೆ ಎಂದು‌ ಮಾಜಿ‌ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದರು.

Advertisement

ಅವರು ಅರಣ್ಯ‌ಭೂಮಿ ಹೋರಾಟಕ್ಕೆ‌ ಮೂರು ದಶಕ ಸಂದ ವೇಳೆ ಸುದ್ದಿಗೋಷ್ಠಿ ನಡೆಸಿ‌ ಮಾತನಾಡಿದರು.

ಅರಣ್ಯ ಅತಿಕ್ರಮಣದಾರರಿಗೆ‌ ನ್ಯಾಯ ಕೊಡುವಲ್ಲಿ ಅಧಿಕಾರಿಗಳು ಗೊಂದಲ ಸೃಷ್ಟಿಸಿದ್ದಾರೆ. ಅವರಿಂದಲೇ‌ ಸಮಸ್ಯೆ  ಆಗಿದೆ.‌ ಅಧಿಕಾರದಲ್ಲಿ ಇದ್ದವರಿಗೂ ಅಷ್ಟೇ ಬೇಕಾಗಿದೆ ಎಂದರು.

ಹಿಂದೆ ಗೇಣಿದಾರರಿಗೆ ನೂರಕ್ಕೆ ನೂರು ನ್ಯಾಯ ನೀಡುವಲ್ಲಿ ಯಶಸ್ವಿ ಆಗಿದ್ದೇನೆ ಎಂಬ ನೆಮ್ಮದಿ ಇದೆ. ಈ ಹೋರಾಟದ ನೆಲೆಗಟ್ಟಿನಲ್ಲಿಯೇ ಅರಣ್ಯ ಅತಿಕ್ರಮಣದರರ ಪರವಾಗಿ ಹೋರಾಟ‌ ನಡೆಸುತ್ತಿದ್ದೇವೆ.

ಇದನ್ನೂ ಓದಿ:ಡೊಂಬಿವಲಿ ಸಿರಿನಾಡ ವೆಲ್ಫೇರ್‌ ಅಸೋಸಿಯೇಶನ್‌: ಗಣೇಶ ಚತುರ್ಥಿ ಆಚರಣೆ

Advertisement

ಅರಣ್ಯ ಭೂಮಿ ಸಾಗವಳಿದಾರರಿಗೆ ಭೂ ಹಕ್ಕು ನೀಡಲು ಎಲ್ಲಾ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ ಎಂಬುದು ದುಃಖದ ಸಂಗತಿ. ಇಡೀ ರಾಷ್ಟ್ರದಲ್ಲಿಯೇ ಈ ಸಮಸ್ಯೆ ಇರುವುದು ನಮ್ಮ ದುರಂತ ಎಂದರು.

ಈ ಹೋರಾಟಕ್ಕೆ ಇನ್ನೂ ಮುಕ್ತಾಯ ಇಲ್ಲ. ರವೀಂದ್ರ‌ ನಾಯ್ಕ ಅವರ ಜೊತೆ ಸಾಯುವವರೆಗೂ ನಾನು ಹೋರಾಟ ನಡೆಸುತ್ತೇನೆ. 14 ಸಾವಿರ ಅರ್ಜಿಯನ್ನು ಸಹಾಯಕ ಆಯುಕ್ತ ತಿರಸ್ಕರಿಸುತ್ತಾರೆ. ಶೋಷಿತ ವರ್ಗದಿಂದ ಬಂದ ಅಧಿಕಾರಿಯೇ ಶೋಷಿತರ ಬಗ್ಗೆ ಕಾಳಜಿ ವಹಿಸದಿರುವುದು ದುರಂತ ಎಂದರು.

ಶೇ. 62.82 ರಷ್ಟು  ಅರ್ಜಿ ತಿರಸ್ಕೃತವಾಗಿದೆ. ಕೇವಲ ಶೇ.3 ಜನರಿಗೆ ಮಾತ್ರ ನ್ಯಾಯ ಸಿಕ್ಕಿದೆ. ಇನ್ನೂ ಸರ್ಕಾರದ ಕಣ್ಣು ತೆರೆಸಲು ಸಾಧ್ಯವಾಗುತ್ತಿಲ್ಲ. ಅರಣ್ಯದ ಒಳಗಡೆ ಬದುಕಿದವರು ಏನು ಮಾಡಬೇಕು ? ಎಂದೂ‌ ಕೇಳಿದರು.

ಹೋರಾಟಗಾರ ಏ. ರವೀಂದ್ರ‌ ಮಾತನಾಡಿ, ಹೋರಾಟಕ್ಕೆ ‌30 ಆದರೂ ನಮ್ಮ‌ ಉತ್ಸಾಹ‌ ಕುಗ್ಗಿಲ್ಲ. ಹೋರಾಟ‌ ನ್ಯಾಯ‌ ಸಿಗುವ ತನಕ ಹೋರಾಟ ನಡೆಸುವದಾಗಿ ಹೇಳಿದರು. ಇದೇ ವೇಳೆ ಕಾಗೋಡು‌ ತಿಮ್ಮಪ್ಪ ಅವರನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next