Advertisement

ಸಿಪ್‌ ಬೈ ಸಿಪ್‌ ಗಾಸಿಪ್‌…

06:45 AM Nov 08, 2017 | Harsha Rao |

ಒಬ್ಬಳು ಮಹಿಳೆ ವೃತ್ತಿಬದುಕಿನಲ್ಲಿ ಯಶಸ್ವಿಯಾಗುತ್ತಿದ್ದಾಳೆ, ಎಲ್ಲರ ಪ್ರಶಂಸೆಗೆ ಪಾತ್ರಳಾಗುತ್ತಿದ್ದಾಳೆ ಎಂದರೆ ಆಕೆಯ ಕುರಿತು ಗಾಸಿಪ್‌ಗ್ಳು ಈಗಾಗಲೇ ಆಫೀಸಿನ ಕಾರಿಡಾರು, ಮೂಲೆಗಳಲ್ಲಿ ಹರಿದಾಡಿರುತ್ತೆ ಎಂದೇ ಲೆಕ್ಕ. ವಿಪರ್ಯಾಸವೆಂದರೆ ಹರಡಿರುವ ಗಾಸಿಪ್ಪುಗಳಲ್ಲಿ ಹೆಚ್ಚಿನ ಕಾಣೆR ಹೆಂಗಸರಿಂದಲೇ ಬಂದಿರುತ್ತೆ. ಕೇಳಲು ಕ್ಲೀಷೆ ಎನ್ನಿಸಿದರೂ ಸಮೀಕ್ಷೆಗಳು ಸುಳ್ಳು ಹೇಳುವುದಿಲ್ಲವಲ್ಲ!
 - – –
“ಏಯ್‌, ಅದೇ ಆ ಹುಡುಗ ಇದ್ದಾನಲ್ಲಾ, ಅವನು ಇವಳ ಹಿಂದೆ ಬಿದ್ದಿದ್ದಾನಂತೆ’, “ರ್ರೀ, ಪಕ್ಕದ ಮನೆಯವರ ವಿಷಯ ಗೊತ್ತಾಯ್ತಾ ನಿಮ್ಗೆ?’, “ಅವಿÛಗೆ ಹೇಗೆ ಪ್ರಮೋಷನ್‌ ಸಿಗು¤ ಅಂತ ನಂಗೊತ್ತಿಲ್ವಾ…’ ಇಂಥ ಮಾತುಗಳನ್ನು ನೀವು ಗಂಡಸರ ಗುಂಪಿನಲ್ಲಿ ಕೇಳಲು ಸಾಧ್ಯವೇ ಇಲ್ಲ. ಹಾಗೆಂದು ಅವರಿಗೆ ಕ್ಲೀನ್‌ ಚಿಟ್‌ ನೀಡುತ್ತಿಲ್ಲ. ಆದರೆ ತಾಳೆ ಮಾಡಿ ನೋಡಿದಾಗ ಅವರ ನಡುವೆ ಗಾಸಿಪ್‌ಗ್ಳು ಹರಿದಾಡೋ ಸಾಧ್ಯತೆ ಹೆಂಗಸರಿಗಿಂತ ಕಡಿಮೆಯೇ. ಆದರೆ ಹೆಂಗಸರು ಹಾಗಲ್ಲ. ಮನೆ ಕೆಲಸದಾಕೆಯೇ ಇರಲಿ, ಉನ್ನತ ಹುದ್ದೆಯ ಮ್ಯಾನೇಜರ್ರೆà ಆಗಿರಲಿ; ಅವರವರ ಲೆವೆಲ್‌ನಲ್ಲಿ ಗಾಸಿಪ್‌ ಮಾಡಿಯೇ ತೀರುತ್ತಾರೆ. 

Advertisement

ಇನ್ನೊಂದು ಕುತೂಹಲದ ಸಂಗತಿಯೆಂದರೆ ಹೆಂಗಸರ ಬಹುತೇಕ ಗಾಸಿಪ್ಪುಗಳು ಮತ್ತೂಬ್ಬಳು ಹೆಂಗಸಿನ ಕುರಿತೇ ಆಗಿರುತ್ತವೆ. ಗಾಸಿಪ್‌ ಕೇವಲ ಟೈಂ ಪಾಸ್‌ ಮಾತ್ರವಲ್ಲ, ಪ್ರತಿಸ್ಪರ್ಧಿ ಹೆಣ್ಣನ್ನು ಸೋಲಿಸಲು ಬಳಸೋ ಶಕ್ತಿಶಾಲಿ ಆಯುಧವೂ ಹೌದು. ಕಚೇರಿಯಲ್ಲೇ ಇರಲಿ, ಮನೆಯಲ್ಲಿಯೇ ಇರಲಿ, ಒಬ್ಬಳು ಮಹಿಳೆ ಬೆಳೆಯುತ್ತಿದ್ದಾಳೆ, ಎಲ್ಲರ ಪ್ರಶಂಸೆ ಗಳಿಸುತ್ತಿದ್ದಾಳೆ ಎಂದರೆ ಆಕೆ ಕುರಿತು ಅನೇಕ ಗಾಸಿಪ್ಪುಗಳು ಚಾಲ್ತಿಗೆ ಬಂದಿರುತ್ತವೆ. 

“ಅಯ್ಯೋ ಬಿಡಿ! ಅವಳು, ನೀವಂದುಕೊಂಡಷ್ಟೇನೂ ಒಳ್ಳೆಯವಳಲ್ಲ’ ಅನ್ನೋ ತೇಲಿಕೆಯ ಮಾತಿನಿಂದ ಹಿಡಿದು, ಕೆಲ ಸಂದರ್ಭಗಳಲ್ಲಿ ಚಾರಿತ್ರ್ಯವಧೆಯೂ ನಡೆದು ಹೋಗುತ್ತದೆ. ಖಾಸಾ ಸ್ನೇಹಿತೆಯರು ಕೆಲವೊಮ್ಮೆ ತಮ್ಮ ಆಪ್ತ ಗೆಳತಿಯ ಕುರಿತು ಹಗುರಾಗಿ ಮಾತಾಡುವುದಿದೆ. ಸುಖಾಸುಮ್ಮನೆ ಸುಳ್ಳುಸುದ್ದಿ ಹರಡುವುದರಿಂದ ಕ್ಷಣಿಕ ತೃಪ್ತಿ ಸಿಗುತ್ತದೆ.  ಆ ಸಮಯದಲ್ಲಿ ತಾನು ಎಂಥಾ ಸಣ್ಣಬುದ್ಧಿಯ ಕೆಲಸ ಮಾಡುತ್ತಿದ್ದೇನೆ ಎಂಬುದರ ಅರಿವು ಅವರಿಗೆ ಇರುವುದಿಲ್ಲ.  
 

ಮಹಿಳೆಯರು ಗುಂಪಿನಲ್ಲಿ ಸೇರಿದಾಗ ಇನ್ನೊಬ್ಬ ಸ್ತ್ರೀಯ ಸೌಂದರ್ಯ, ಡ್ರೆಸ್ಸಿಂಗ್‌ ಸೆನ್ಸ್‌, ಖಾಸಗಿ ಜೀವನದ ಬಗ್ಗೆ ಗಾಸಿಪ್‌ ಮಾಡುತ್ತಾರೆ. ಆದರೆ ಪುರುಷರು ಹಾಗಲ್ಲ. ಅವರು ತಮ್ಮ ಪ್ರತಿಸ್ಪರ್ಧಿಯ ಅಂತಸ್ತು ಮತ್ತು ಸಾಮರ್ಥ್ಯದ ಬಗ್ಗೆ ಚರ್ಚಿಸುತ್ತಾರೆಯೇ ಹೊರತು, ಖಾಸಗಿ ಸಂಗತಿಗಳನ್ನು ಚರ್ಚಿಸುವುದರಲ್ಲಿ ಅವರಿಗೆ ಆಸಕ್ತಿ ಕಡಿಮೆ. ಮಹಿಳೆ, ನ್ಯೂಸ್‌, ಕೌಟುಂಬಿಕ ಸಮಸ್ಯೆ, ಬೇರೆಯವರ ಖಾಸಗಿ ವಿಷಯ, ಸೆಕ್ಸ್‌, ಗೆಳತಿಯ ಮೈಮಾಟ, ಧಾರಾವಾಹಿ, ಗೆಳತಿಯ ಬಾಯ್‌ಫ್ರೆಂಡ್‌/ ಗಂಡ, ಅತ್ತೆ, ಸೆಲಬ್ರಿಟೀಸ್‌… ಇವು ಮಹಿಳೆಯರ ಗಾಸಿಪ್‌ನ ಟಾಪ್‌ ಟೆನ್‌ ವಿಷಯಗಳು. ಆದರೆ ಗಂಡಸರ ಗುಂಪಿನಲ್ಲಿ ಸಂಬಳ, ಪ್ರಮೋಷನ್‌, ಬಾಸ್‌ಗಳ ಸುತ್ತಲೇ ಮಾತುಗಳು ಗಿರಕಿ ಹೊಡೆಯುತ್ತವೆ ಅನ್ನುತ್ತದೆ ಸಮೀಕ್ಷೆ. 

ಏನೇ ಇರಲಿ, ಕುತೂಹಲ ಎನ್ನುವುದು ಮನುಷ್ಯನ ಹುಟ್ಟುಗುಣ. ಆದರೆ ಇನ್ನೊಬ್ಬರ ಖಾಸಗಿ ಬದುಕಿನಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಕೆಟ್ಟ ಕುತೂಹಲ ಬೆಳೆಸಿಕೊಳ್ಳುವುದು, ಸುದ್ದಿಗಾಗಿ ಹಪಹಪಿಸುವುದು ರೋಗದ ಲಕ್ಷಣ. ಆದಷ್ಟು ಬೇಗ ಅದರಿಂದ ಮುಕ್ತರಾಗಲು ನಾವು ಪ್ರಯತ್ನಿಸಬೇಕು. 

Advertisement
Advertisement

Udayavani is now on Telegram. Click here to join our channel and stay updated with the latest news.

Next