Advertisement

ಸದ್ಯದಲ್ಲೇ ಈ ದೇಶದಲ್ಲಿ ವೆರ್ವೆಟ್‌ ಕೋತಿಗಳ ವಂಶವೇ ನಿರ್ವಂಶವಾಗಲಿದೆಯಂತೆ…ಕಾರಣ ಇಲ್ಲಿದೆ

07:11 PM Jan 20, 2023 | Team Udayavani |

ಫಿಲಿಪ್ಸ್‌ಬರ್ಗ್‌: ಸದ್ಯದಲ್ಲೇ ಈ ದೇಶದಲ್ಲಿ ವೆರ್ವೆಟ್‌ ಕೋತಿಗಳ ಇಡೀ ವಂಶವೇ ನಿರ್ವಂಶವಾಗಲಿದೆ!

Advertisement

ದೇಶದ ರೈತರ ಬೆಳೆಗಳಿಗೆ ಕೋತಿಗಳು ತೀವ್ರ ಹಾನಿಯುಂಟು ಮಾಡಿದ್ದು, ಬೆಳೆಗಳನ್ನು ಸಂಪೂರ್ಣವಾಗಿ ನಾಶ ಪಡಿಸಿರುವ ಹಿನ್ನೆಲೆ ಸಾಕಷ್ಟು ನಷ್ಟವಾಗಿದೆ. ಇದರಿಂದ ತಮ್ಮ ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆ ಎಂದು ರೈತರು ಅವಲತ್ತುಕೊಂಡಿರುವುದರಿಂದ ಈ ಕೋತಿಗಳ ವಂಶವನ್ನೇ ನಾಶಗೊಳಿಸಲು ಕೆರೆಬಿಯನ್‌ ದೇಶ ಸಿಂಟ್‌ ಮಾರ್ಟಿನ್‌ ಆದೇಶ ಹೊರಡಿಸಿದೆ ಎಂದು ದಿ ಗಾರ್ಡಿಯನ್‌ ಪತ್ರಿಕೆ ವರದಿ ಮಾಡಿದೆ.

ಸರ್ಕಾರ ಮಂಗಗಳ ಸಂತತಿಯನ್ನೇ ನಾಶಪಡಿಸಲು ಆದೇಶಿಸಿದೆ. ನೇಚರ್‌ ಫೌಂಡೇಶನ್‌ ಸಂಸ್ಥೆ ಮುಂದಿನ 3 ವರ್ಷಗಳಲ್ಲಿ 450 ಕೋತಿಗಳಿಗೆ ದಯಾಮರಣ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರದ ನಿರ್ಣಯಕ್ಕೆ ಪ್ರಾಣಿ ದಯಾಸಂಘಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಬೆಳೆಗಳ ಮೇಲೆ ಕ್ರಿಮಿನಾಶಕ ಸಿಂಪಡಿಸುವುದೋ ಅಥವಾ ಮಂಗಗಳ ಸಂತಾನಹರಣ ಕ್ರಮವನ್ನೋ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿವೆ.

ಇದನ್ನೂ ಓದಿ: ಕಾರ್ಕಳ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆ

Advertisement
Advertisement

Udayavani is now on Telegram. Click here to join our channel and stay updated with the latest news.

Next