Advertisement

ತಾಯಿಯಾದ ಗಾಯಕಿ : ಶ್ರೇಯಾ ಘೋಷಾಲ್ ಮನೆಗೆ ಹೊಸ ಅತಿಥಿ ಆಗಮನ

06:23 PM May 22, 2021 | Team Udayavani |

ಬಹುಭಾಷಾ ಗಾಯಕಿ ಶ್ರೇಯಾ ಘೋಷಾಲ್ ಅವರ ಮನೆಗೆ ಇಂದು ಹೊಸ ಅತಿಥಿಯ ಆಗಮನವಾಗಿದೆ. ಇಂದು (ಮೇ.22) ಮಧ್ಯಾಹ್ನ ಗಂಡು ಮಗುವಿಗೆ ಶ್ರೇಯಾ ಘೋಷಾಲ್ ಜನ್ಮ ನೀಡಿದ್ದಾರೆ.

Advertisement

ಈ ಸಂತಸದ ವಿಚಾರವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ”ದೇವರ ಆಶೀರ್ವಾದದಿಂದ ಇಂದು ಮಧ್ಯಾಹ್ನ ಗಂಡು ಮಗು ಜನಿಸಿದೆ” ಎಂದು ಫೇಸ್‌ಬುಕ್‌ ಮೂಲಕ ಸಿಹಿ ಸುದ್ದಿ ಎಲ್ಲರ ಜೊತೆ ಹಂಚಿಕೊಂಡಿದ್ದಾರೆ.

”ದೇವರ ಆಶೀರ್ವಾದದಿಂದ ಇಂದು ಮಧ್ಯಾಹ್ನ ಗಂಡು ಮಗು ಜನಿಸಿದೆ. ಇಂತಹ ಸಂತಸದ ಕ್ಷಣವನ್ನು ಹಿಂದೆಂದೂ ಅನುಭವಿಸಿರಲಿಲ್ಲ. ಪತಿ ಶಿಲಾದಿತ್ಯ, ನಾನು ಮತ್ತು ಇಡೀ ಕುಟುಂಬ ಸಂತಸಗೊಂಡಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಕಾಳಜಿಗೆ ಧನ್ಯವಾದಗಳು” ಎಂದು ಘೋಷಾಲ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಗಾಯಕಿ ಶ್ರೇಯಾ ಘೋಷಾಲ್ ಹಾಗೂ ಪತಿ ಶಿಲಾದಿತ್ಯಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ‘ಬೇಬಿ ಶ್ರೇಯಾದಿತ್ಯ’ಗೆ ಸೆಲೆಬ್ರಿಟಿಗಳು, ತಾರೆಯರು, ಗಾಯಕರು, ಸಂಗೀತ ನಿರ್ದೇಶಕರುಗಳು ಶುಭ ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next