Advertisement

ಗ್ರ್ಯಾಮಿ ಅವಾರ್ಡ್ ಗೆದ್ದ ಮೊದಲ ತೃತೀಯ ಲಿಂಗಿ: ಸಂತಸದಿಂದ ಭಾವುಕರಾದ ಗಾಯಕಿ

12:54 PM Feb 06, 2023 | Team Udayavani |

ವಾಷಿಂಗ್ಟನ್:  ಲಾಸ್ ಏಂಜಲೀಸ್  ನಲ್ಲಿ  65ನೇ ವಾರ್ಷಿಕ ಗ್ರ್ಯಾಮಿ ಅವಾರ್ಡ್ಸ್‌ ಕಾರ್ಯಕ್ರಮ ನಡೆದಿದೆ. ಹತ್ತಾರು ಗಾಯಕರಿಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಸಂದಿದೆ. ಜರ್ಮನಿ ಮೂಲದ ಕಿಮ್ ಪೆಟ್ರಾಸ್ ಗ್ರ್ಯಾಮಿ ಅವಾರ್ಡ್‌ ಪಡೆದುಕೊಳ್ಳುವ ಮೂಲಕ ಇತಿಹಾಸ ಬರೆದಿದ್ದಾರೆ.

Advertisement

ಕಿಮ್ ಪೆಟ್ರಾಸ್ ತೃತೀಯ ಲಿಂಗಿಯಾಗಿದ್ದು, ಇಂಗ್ಲೆಂಡ್‌ ಮೂಲದ ಗಾಯಕ ಸ್ಯಾಮ್ ಸ್ಮಿತ್ ಅವರೊಂದಿಗೆ ಸೇರಿ ಹಾಡಿರುವ ʼಅನ್‌ ಹೋಲಿʼ (Unholy) ಹಾಡಿಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ʼಅನ್‌ ಹೋಲಿʼ ಅತ್ಯುತ್ತಮ ಪಾಪ್ ಜೋಡಿ/ಗುಂಪು ಪ್ರದರ್ಶನ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ಕಿಮ್ ಪೆಟ್ರಾಸ್ ಈ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಗ್ರ್ಯಾಮಿ ಗೆದ್ದ ಮೊದಲ ತೃತೀಯ ಲಿಂಗಿ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: 3ನೇ ಬಾರಿ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್‌ ಗೆದ್ದ ಭಾರತೀಯ ಸಂಗೀತ ಸಂಯೋಜಕ ರಿಕ್ಕಿ ಕೇಜ್

ನನಗೆ ಇದೊಂದು ಅವಿಸ್ಮರಣೀಯ ಪಯಣ. ನಾನು ತೃತೀಯ ಲಿಂಗಿಯಾದ ಕಾರಣ ಈ ಪ್ರಶಸ್ತಿಯನ್ನು ನಾನೇ ಸ್ವೀಕರಿಸಬೇಕೆಂದು ಸ್ಯಾಮ್‌ ಬಯಸಿದ್ದರು. ನಾನು ಈ ಸಂದರ್ಭದಲ್ಲಿ ಎಲ್ಲಾ ಮಹಾನ್‌ ತೃತೀಯ ಲಿಂಗಿಗಳಿಗೆ ಧನ್ಯವಾದವನ್ನು ಸಲ್ಲಿಸುತ್ತೇನೆ ಎಂದು ಸಂತಸವನ್ನು ವೇದಿಕೆ ಮೇಲೆ ಕಿಮ್ ಪೆಟ್ರಾಸ್ ಹಂಚಿಕೊಂಡರು.

Advertisement

2022 ರ ಅಕ್ಟೋಬರ್‌ ನಲ್ಲಿ ʼಅನ್‌ ಹೋಲಿʼ ಹಾಡು ರಿಲೀಸ್‌ ಆಗಿತ್ತು. ಯೂಟ್ಯೂಬ್‌ ನಲ್ಲಿ 123 ಮಿಲಿಯನ್‌ ಗೂ ಅಧಿಕ ವೀಕ್ಷಣೆ ಕಂಡಿದೆ. ಕಿಮ್ ಪೆಟ್ರಾಸ್  ಈ ಹಾಡನ್ನು ಸ್ನೇಹಿತೆಯಾಗಿದ್ದ 34 ವಯಸ್ಸಿನಲ್ಲೇ ಇಹಲೋಹ ತ್ಯಜಿಸಿದ ಸ್ಕಾಟಿಷ್ ಎಲೆಕ್ಟ್ರಾನಿಕ್ ಕಲಾವಿದೆ ಸೋಫಿಗೆ ಅರ್ಪಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next