ಮುಂಬಯಿ : ಮೆಟ್ಟಿಲುಗಳಿಂದ ಬಿದ್ದ ನಂತರ ಖ್ಯಾತ ಗಾಯಕ ಜುಬಿನ್ ನೌಟಿಯಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಪ್ರತಿನಿಧಿ ಶುಕ್ರವಾರ ತಿಳಿಸಿದ್ದಾರೆ.
ಪ್ರತಿನಿಧಿಯು ಹೇಳಿಕೆಯಲ್ಲಿ, ನೌಟಿಯಲ್ ಅವರು “ಮೊಣಕೈ ಮುರಿತಕ್ಕೊಳಗಾಗಿದ್ದು,, ಅವರ ತಲೆಗೆ ನೋವಾಗಿದೆ” ಎಂದು ಹೇಳಿದ್ದಾರೆ.
33 ವರ್ಷ ವಯಸ್ಸಿನ ಗಾಯಕ ಬಲಗೈಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಮತ್ತು ವ್ಯಾಯಾಮ ಮಾಡದಂತೆ ಸೂಚಿಸಲಾಗಿದೆ ಎಂದು ಪ್ರತಿನಿಧಿ ತಿಳಿಸಿದ್ದಾರೆ.
“ರಾತನ್ ಲಂಬಿಯಾನ್,” “ಲುಟ್ ಗಯೆ”, “ಹುಮ್ನಾವಾ ಮೇರೆ”, “ತುಜೆ ಕಿತ್ನೆ ಚಾಹ್ನೆ ಲಗೇ ಹಮ್”, “ತುಮ್ ಹಿ ಆನಾ” ಮತ್ತು “ಬೇವಾಫಾ ತೇರಾ ಮಸೂನ್ ಚೆಹ್ರಾ” ನಂತಹ ಚಾರ್ಟ್‌ಬಸ್ಟರ್ ಟ್ರ್ಯಾಕ್‌ಗಳನ್ನು ಹಾಡಿ ನೌಟಿಯಲ್ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಅವರ ಹೊಸ ಹಾಡು “ಗೋವಿಂದಾ ನಾಮ್ ಮೇರಾ” ಚಿತ್ರದ “ಬಾನಾ ಶರಾಬಿ” ಬುಧವಾರ ಬಿಡುಗಡೆಯಾಗಿದೆ.