Advertisement

ಸಿಂಗಾಪುರ್‌ ಓಪನ್‌: ಮಿಥುನ್‌ ಮಂಜುನಾಥ್‌, ಅಶ್ಮಿತಾ ಚಾಲಿಹಾ ಜಯ

11:12 PM Jul 13, 2022 | Team Udayavani |

ಸಿಂಗಾಪುರ್‌: ಬುಧವಾರ ಮೊದಲ್ಗೊಂಡ “ಸಿಂಗಾಪುರ್‌ ಓಪನ್‌ 500′ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಮಿಥುನ್‌ ಮಂಜುನಾಥ್‌ ಮತ್ತು ಅಶ್ಮಿತಾ ಚಾಲಿಹಾ ಅಮೋಘ ಗೆಲುವು ಸಾಧಿಸಿ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.

Advertisement

ಸ್ಟಾರ್‌ ಆಟಗಾರರಾದ ಪಿ.ವಿ. ಸಿಂಧು, ಸೈನಾ ನೆಹ್ವಾಲ್‌ ಮತ್ತು ಎಚ್‌.ಎಸ್‌. ಪ್ರಣಯ್‌ ಕೂಡ ಮೊದಲ ಸುತ್ತನ್ನು ಯಶಸ್ವಿಯಾಗಿ ದಾಟಿದ್ದಾರೆ. ಕೆ. ಶ್ರೀಕಾಂತ್‌ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ.

ಕೆ. ಶ್ರೀಕಾಂತ್‌ ಅವರನ್ನು ಕೆಡವಿ ದವರು ಬೇರೆ ಯಾರೂ ಅಲ್ಲ, ಭಾರತ ದವರೇ ಆದ ಮಿಥುನ್‌ ಮಂಜುನಾಥ್‌. ಅಂತರ 21-17, 15-21, 21-18. ಅಶ್ಮಿತಾ ಚಾಲಿಹಾ ಥಾಯ್ಲೆಂಡ್‌ನ‌ ಬುಸನನ್‌ ಮ್ರುಂಗಪಾನ್‌ ಅವರನ್ನು 21-16, 21-11 ನೇರ ಗೇಮ್‌ಗಳಲ್ಲಿ ಮಣಿಸಿದರು.

ಸಿಂಧು, ಸೈನಾ ಗೆಲುವು: ಪಿ.ವಿ. ಸಿಂಧು ಬೆಲ್ಜಿಯಂನ 36ನೇ ರ್‍ಯಾಂಕಿಂಗ್‌ ಆಟಗಾರ್ತಿ ಲಿಯಾನ್‌ ಟಾನ್‌ ಅವರಿಗೆ 21-15, 21-11 ಅಂತರದ ಸೋಲುಣಿಸಿದರು. “ಆಲ್‌ ಇಂಡಿಯನ್‌’ ಸ್ಪರ್ಧೆ ಯೊಂದರಲ್ಲಿ ಸೈನಾ ನೆಹ್ವಾಲ್‌ 21-18, 21-14ರಿಂದ ಮಾಳವಿಕಾ ಬನ್ಸೋಡ್‌ಗೆ ಸೋಲುಣಿಸಿದರು.

ಎಚ್‌.ಎಸ್‌. ಪ್ರಣಯ್‌ ಥಾಯ್ಲೆಂಡ್‌ನ‌ ಸಿತ್ತಿಕೋಮ್‌ ತಮ್ಮಸಿನ್‌ ಅವರನ್ನು 21-13, 21-16 ಅಂತರದಿಂದ ಸೋಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next