Advertisement

ಸಿಂಗಾಪುರ್ ಓಪನ್ ಟೆನಿಸ್ ಟೂರ್ನಿ: ಫೈನಲ್‌ಗೆ ಪಿ.ವಿ. ಸಿಂಧು ಲಗ್ಗೆ

10:40 PM Jul 16, 2022 | Team Udayavani |

ಸಿಂಗಾಪುರ್‌: ಭಾರತದ ಏಕೈಕ ಆಶಾಕಿರಣವಾಗಿರುವ ಪಿ.ವಿ. ಸಿಂಧು “ಸಿಂಗಾಪುರ್‌ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾ ವಳಿಯ ಫೈನಲ್‌ ಪ್ರವೇಶಿಸಿದ್ದಾರೆ. ಈ ವರ್ಷದ 3ನೇ ಅಂತಾರಾಷ್ಟ್ರೀಯ ಪ್ರಶಸ್ತಿಯತ್ತ ದಿಟ್ಟ ಹೆಜ್ಜೆ ಇರಿಸಿದ್ದಾರೆ.

Advertisement

ಶನಿವಾರ ನಡೆದ ಸೆಮಿಫೈನಲ್‌ ಸೆಣಸಾಟದಲ್ಲಿ ಸಿಂಧು ಜಪಾನಿನ ಸಯೇನಾ ಕವಕಾಮಿ ಅವರನ್ನು 21-15, 21-7 ಅಂತರದಿಂದ ಸುಲಭದಲ್ಲಿ ಮಣಿಸಿದರು.

ರವಿವಾರದ ಫೈನಲ್‌ನಲ್ಲಿ ಪಿ.ವಿ. ಸಿಂಧು ಮತ್ತು ಚೀನದ ವಾಂಗ್‌ ಜಿ ಹಿ ಮುಖಾಮುಖಿ ಆಗಲಿದ್ದಾರೆ. 22 ವರ್ಷದ ವಾಂಗ್‌ ಜಿ ಹಿ ಏಷ್ಯನ್‌ ಚಾಂಪಿಯನ್‌ಶಿಪ್‌ ಚಿನ್ನದ ಪದಕ ವಿಜೇತೆಯಾಗಿದ್ದು, ಇನ್ನೊಂದು ಸೆಮಿಫೈನಲ್‌ನಲ್ಲಿ ಜಪಾನಿನ ಒಹೊರಿ ಅಯಾ ವಿರುದ್ಧ 21-14, 21-14 ಅಂತರದ ಗೆಲುವು ಸಾಧಿಸಿದರು.

ಅವಳಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿ.ವಿ. ಸಿಂಧು ಈ ವರ್ಷ ಎರಡು ಸೂಪರ್‌-300 ಪ್ರಶಸ್ತಿ ಜಯಿಸಿದ್ದಾರೆ. ಒಂದು, ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌; ಮತ್ತೊಂದು, ಸ್ವಿಸ್‌ ಓಪನ್‌. ಜತೆಗೆ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನೂ ಗೆದ್ದಿದ್ದಾರೆ.

3-0 ಗೆಲುವಿನ ದಾಖಲೆ
ಸಯೇನಾ ಕವಕಾಮಿ ವಿರುದ್ಧ ಸಿಂಧು 2-0 ಗೆಲುವಿನ ದಾಖಲೆಯೊಂದಿಗೆ ಆಡಲಿಳಿದಿದ್ದರು. ಇದೀಗ ಆಡಿದ ಮೂರೂ ಪಂದ್ಯಗಳಲ್ಲಿ ಗೆದ್ದಂತಾಗಿದೆ. ಕವಕಾಮಿ ಅವರನ್ನು ಕೊನೆಯ ಸಲ ಎದುರಿಸಿದ್ದು 2018ರ ಚೀನ ಓಪನ್‌ ಟೂರ್ನಿಯಲ್ಲಿ. ಕವಕಾಮಿ 2019ರ ಓರ್ಲಿಯನ್ಸ್‌ ಮಾಸ್ಟರ್ ಪ್ರಶಸ್ತಿ ಜಯಸಿದ್ದರು. ಅದೇ ವರ್ಷ ಸ್ವಿಸ್‌ ಓಪನ್‌ ಫೈನಲ್‌ ತಲುಪಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next