ಚೆನ್ನೈ: ತಮಿಳುನಾಡು ಸರ್ಕಾರವು ಸೆಮಿಕಂಡಕ್ಟರ್ ಪಾರ್ಕ್ ನಿರ್ಮಿಸುವ ನಿಟ್ಟಿನಲ್ಲಿ ಸಿಂಗಾಪುರ ಮೂಲದ ಐಜಿಎಸ್‌ಎಸ್ ವೆಂಚರ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
Advertisement
ಐಜಿಎಸ್‌ಎಸ್ ಸಂಸ್ಥೆಯು ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ 25,000 ಕೋಟಿ ರೂ. ಹೂಡಿಕೆ ಮಾಡಲಿದೆ.
ಈ ಸೆಮಿಕಂಡಕ್ಟರ್ ಪಾರ್ಕ್‌ನಿಂದಾಗಿ 1,500 ಮಂದಿಗೆ ಉದ್ಯೋಗಾವಕಾಶ ಸಿಗಲಿದೆ. ಹಾಗೆಯೇ 25,000ಕ್ಕೂ ಅಧಿಕ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ.
300 ಎಕರೆ ಪ್ರದೇಶದಲ್ಲಿ ಪಾರ್ಕ್ ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರದಿಂದ 76,000 ಕೋಟಿ ರೂ. ಪ್ರಾಜೆಕ್ಟ್ ಸಂಯೋಜಿತ ಪ್ರೋತ್ಸಾಹ ಧನ(ಪಿಎಲ್‌ಐ)ಗೂ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ.
Related Articles
Advertisement