Advertisement

‘ಸಾವಿರಾರು ಅನಾಥರ ತಾಯಿ’ಪದ್ಮಶ್ರೀ ಪುರಸ್ಕೃತ ಸಿಂಧೂತಾಯಿ ಸಕ್ಪಾಲ್ ಇನ್ನಿಲ್ಲ

12:11 PM Jan 05, 2022 | Team Udayavani |

ಮುಂಬೈ: “ಸಾವಿರಾರು ಅನಾಥರ ತಾಯಿ’ ಎಂದೇ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪುರಸ್ಕೃತ ಸಿಂಧೂತಾಯಿ ಸಪ್ಕಾಲ್(74) ಮಂಗಳವಾರ ಪುಣೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಮಾರು 2 ಸಾವಿರದಷ್ಟು ಅನಾಥ ಮಕ್ಕಳನ್ನು ದತ್ತು ಸ್ವೀಕರಿಸಿ ಸಾಕುತ್ತಿದ್ದ ಸಿಂಧೂತಾಯಿ, ಕಳೆದ ತಿಂಗಳಷ್ಟೇ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

Advertisement

ಮಂಗಳವಾರ ರಾತ್ರಿ 8.30ರ ವೇಳೆಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ, “ಸಮಾಜಕ್ಕೆ ನೀಡಿರುವ ಅಮೂಲ್ಯ

ಕೊಡುಗೆಯಿಂದ ಅವರು ಎಂದೆಂದೂ ಸ್ಮರಣಾರ್ಹರಾಗಿರುತ್ತಾರೆ. ಅವರ ಪ್ರಯತ್ನದ ಫ‌ಲವಾಗಿ, ಸಾವಿರಾರು ಮಕ್ಕಳು ಉತ್ತಮ ಜೀವನ ಕಂಡುಕೊಂಡಿದ್ದಾರೆ. ಅವರ ಸಾವಿನಿಂದ ಬಹಳ ನೋವಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ. ಸಿಂಧೂತಾಯಿ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ 270ಕ್ಕೂ ಹೆಚ್ಚು ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು.

ಇದನ್ನೂ ಓದಿ : ತ.ನಾಡು- ಕರ್ನಾಟಕ ಗಡಿಭಾಗದಲ್ಲಿ ಬೀಡು ಬಿಟ್ಟ ಕಾಡಾನೆಗಳು : ಕಾಡಿಗಟ್ಟಲು ಅಧಿಕಾರಿಗಳ ಹರಸಾಹಸ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next