ಸಿಂಧನೂರು: ಇಡೀ ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡಿರುವ ಮಹಾಮಾರಿ ಕೋವಿಡ್ ಎಫೆಕ್ಟ್ನಿಂದಾಗಿ ಮಾವಿನ ಹಣ್ಣಿನ ಬೆಲೆಯು ಕುಸಿದಿದ್ದು, ಮಾವು ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ.
ಇದೀಗ ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಮಾವಿನ ಹಣ್ಣನ್ನು ಮಾರಲಿಕ್ಕೆ ವಾರದಲ್ಲಿ ಸೋಮವಾರ, ಗುರುವಾರ, ಶನಿವಾರದಂದು ವಾರದಲ್ಲಿ ಕೇವಲ ಮೂರು ದಿನ ಮಾತ್ರ ಮಾವಿನ ಹಣ್ಣು ಮಾರುವುದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೂ ಬೆಲೆ ಇಳಿಕೆ ಹೊಡೆತದಿಂದ ಮಾವು ಬೆಳೆಗಾರರು ಹಾಗೂ ಮಾರಾಟಗಾರರನ್ನು ಕಂಗಾಲಾಗಿಸಿದೆ. ಕೊಪ್ಪಳದಿಂದ ರಾಶಿಗಟ್ಟಲೆ ಮಾವಿನ ಹಣ್ಣುಗಳನ್ನು ಮಾರಲು ಮಾವು ಮಾರಾಟಗಾರರು ಇದೀಗ ಸಿಂಧನೂರು ನಗರಕ್ಕೆ ಬರುತ್ತಿದ್ದಾರೆ. ದಿನ ಒಂದಕ್ಕೆ 120 ಟನ್‌ನಷ್ಟು ಮಾವಿನ ಹಣ್ಣಿನ ವ್ಯಾಪಾರ ಮಾಡಿಕೊಂಡು ಹೋಗುತ್ತಿದ್ದಾರೆ.
ಈ ಮುಚೆ ದಿನ ಒಂದಕ್ಕೆ 125 ಟನ್‌ನಷ್ಟು ಮಾರಾಟವಾಗುತ್ತಿದ್ದ ಮಾವಿನ ವ್ಯಾಪಾರಕ್ಕೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಮಾವು ಮಾರಾಟ ಮಾಡುವುದಕ್ಕೆ ಕೇವಲ 3 ದಿನ ಕಲ್ಪಿಸಿರುವುದು ಮಾವು ಮಾರಾಟಗಾರರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ ಎನ್ನೋದು ಮಾವು ಮಾರಾಟಗಾರರ ಅಳಲಾಗಿದೆ. ಸರಕಾರವು ಮಾವು ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕೆಂಬ ಒತ್ತಾಯಗಳು ಎಲ್ಲೆಡೆ ಕೇಳಿ ಬರುತ್ತಿವೆ.
ಕೋವಿಡ್ ತಡೆಗೆ ಸರಕಾರ ಲಾಕ್ ಡೌನ್ ಘೋಷಿಸಿದೆ. ಈ ವೇಳೆ ಮಾವಿನ ಹಣ್ಣಿನ ವ್ಯಾಪಾರ ಸರಿಯಾಗಿ ಆಗುತ್ತಿಲ್ಲ. ಕೊಪ್ಪಳದಿಂದ ಸಿಂಧನೂರಿಗೆ ಟನ್‌ಗಟ್ಟಲೆ ಮಾವಿನ ಹಣ್ಣನ್ನು ತಂದು ಮಾರಾಟ ಮಾಡುತ್ತಿದ್ದರು ಮಾವಿನ ಹಣ್ಣುಗಳು ವ್ಯಾಪಾರವಾಗದೆ ಹಾಗೆಯೇ ಉಳಿಯುವಂತಾಗಿದೆ. ಕೂಡಲೇ ಸರಕಾರವು ಮಾವಿನ ಬೆಳೆಗಾರರು ಹಾಗೂ ಮಾರಾಟಗಾರರ ಮೇಲೆ ಗಮನ ಹರಿಸುವ ಕೆಲಸ ಮಾಡಬೇಕು.
ಹುಲುಗಪ್ಪ,
ಮಾವು ಮಾರಾಟಗಾರರು.
ಚಂದ್ರಶೇಖರ್ ಯರದಿಹಾಳ್