Advertisement

ಸಲಹಾ ಸಮಿತಿ ಸಭೆ ಕರೆಯಿರಿ

03:25 PM Nov 16, 2019 | Naveen |

ಸಿಂಧನೂರು: ತುಂಗಾಭದ್ರಾ ಸಲಹಾ ಸಮಿತಿಗಳ ಸಭೆಯನ್ನು ಕರೆದು, ರೈತರಿಗೆ ಎರಡನೆ ಬೆಳೆಗೆ ನೀರನ್ನು ಒದಗಿಸಿ ಕೊಡುವಂತೆ ಜಿಲ್ಲಾ ಪಂಚಾಯತ್‌ ಸದಸ್ಯ ಬಸವರಾಜ ಹಿರೇಗೌಡ್ರು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಒತ್ತಾಯಿಸಿದ್ದಾರೆ.

Advertisement

ಸಿಂಧನೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ತುಂಗಭದ್ರಾ ಜಲಾಶಯದಲ್ಲಿ ಸರಿ ಸುಮಾರು 101 ರಿಂದ 105 ಟಿಎಂಸಿ ಅಡಿಯಷ್ಟು ನೀರಿನ ಸಂಗ್ರಹವಿದ್ದು, ಎಡದಂಡೆಯ ರೈತರ ಎರಡನೆ ಬೆಳೆಗೆ ಬೇಕಾವಷ್ಟು ನೀರು ಸಂಗ್ರಹಗೊಂಡಿದೆ. ಇದರಿಂದ ರೈತರು ಎರಡನೇ ಬೆಳೆಗೆ ನೀರು ಬರುವ ಎಂಬ ವಿಶ್ವಾಸದಲ್ಲಿದ್ದಾರೆ. ಆದರೇ ಎಲ್ಲಿಂದ ಎಲ್ಲಿಯ ವರೆಗೂ ಎಡದಂಡೆ ನಾಲೆಗೆ ನೀರನ್ನು ಬಿಡಲಾಗುವುದು ಎಂಬ ಗೊಂದಲ ರೈತರಲ್ಲಿ ಉಂಟಾಗಿದೆ. ಕೂಡಲೇ ಸಂಬಂಧಿಸಿದ ಅ ಧಿಕಾರಿಗಳು ಐಸಿಸಿ ಸಭೆಯನ್ನು ಕರೆದು ರೈತರ ಸಂಕಷ್ಟವನ್ನು ಪರಿಹರಿಬೇಕೆಂದು ಆಗ್ರಹಿಸಿದ್ದಾರೆ.

ರಾಯಚೂರು ಹಾಗೂ ಕೊಪ್ಪಳ ಭಾಗದ ಅನೇಕ ರೈತರು ತುಂಗಾಭದ್ರಾ ಜಲಾಶಯವನ್ನೇ ನಂಬಿದ್ದಾರೆ. ಸುಮಾರ 4ವರ್ಷಗಳಿಂದ ರೈತರು ಒಂದೇ ಬೆಳೆಯನ್ನು ಬೆಳೆಯುವಂತಾಗಿದೆ. ಇದರಿಂದ ಜೀವನ ನಡೆಸುವುದು ತುಂಬಾ ದುಸ್ತರವಾಗಿದೆ. ಕೂಡಲೇ ಈ ಭಾಗದ ಶಾಸಕರು, ಮಾಜಿ ಶಾಸಕರು, ಸಂಸದರು ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನು ಕರೆದು ಕೂಡಲೇ ತುಂಗಾಭದ್ರಾ ಎಡದಂಡೆಯ ರೈತರ ಎರಡನೇ ಬೆಳೆಗೆ ನೀರನ್ನು ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಮರಿಯಪ್ಪ, ಶರಣಪ್ಪ, ಬಿ.ಎಸ್‌.ನೆಟ್ಟಕಲ್ಲಪ್ಪ, ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next