Advertisement

ಶಿವಾಜಿ ಮಹಾರಾಜರು ನಮಗೆಲ್ಲ ಮಾದರಿ

04:55 PM Mar 04, 2020 | Naveen |

ಸಿಂದಗಿ: ಹಿಂದೆ ಭವ್ಯ ಭಾರತ ಪರಕೀಯರ ಆಳ್ವಿಕೆಯಲ್ಲಿ ನಲುಗುತ್ತಿದ್ದ ಸಂದರ್ಭದಲ್ಲಿ ಸ್ವಾಭಿಮಾನಿ ಸ್ವಂತಂತ್ರ ಜೀವನಕ್ಕಾಗಿ, ಹಿಂದೂ ಸ್ವರಾಜ್ಯ ಸ್ಥಾಪನೆಗಾಗಿ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜ ಜೀವನ ನಮಗೆ ಮಾದರಿಯಾಗಿದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಡಾ| ಎಂ.ಬಿ. ಪಾಟೀಲ ಹೇಳಿದರು.

Advertisement

ತಾಲೂಕಿನ ಮಲಘಾಣ ಗ್ರಾಮದಲ್ಲಿ ಮರಾಠಾ ಸಮಾಜದವರು ಹಾಗೂ ಗ್ರಾಮಸ್ಥರು ಹಮ್ಮಿಕೊಂಡ ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೂ ಸ್ವರಾಜ್ಯ, ಮರಾಠಾ ಸಮ್ರಾಜ್ಯ ಕಟ್ಟುವ ಕನಸನ್ನು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಕಟ್ಟಿಕೊಂಡ ಶಿವಾಜಿ 92 ಪಂಗಡಗಳನ್ನು ಒಂದು ಗೂಡಿಸುವ ಕೆಲಸ ಮಾಡಿದ. ಒಗ್ಗಟ್ಟೇ ಬಲ ಎಂಬ ಮಂತ್ರವನ್ನು ಜಪಿಸಿದ. ಬಾಲ್ಯಾವಸ್ಥೆಯಲ್ಲಿ ತನ್ನ ತಾಯಿ ಜೀಜಾಬಾಯಿ ಅವರಿಂದ ಮೌಲ್ಯಾಧಾರಿತ ಶಿಕ್ಷಣ ಪಡೆದರು. ಜೀಜಾಬಾಯಿಯ ಆದರ್ಶ ಎಲ್ಲ ತಾಯಂದಿರರು ಅಳವಡಿಸಿಕೊಳ್ಳಬೇಕು ಎಂದರು.

ಶಿವಾಜಿ ಮಹಾರಾಜರು ಚಿಕ್ಕ ವಯಸ್ಸಿನಲ್ಲಿಯೇ ಸಾಮ್ರಾಜ್ಯ ಕಟ್ಟುವ ಕನಸನ್ನು ಕಂಡು ಗೆರಿಲ್ಲಾ ಮಾದರಿ ಸೈನ್ಯ ಕಟ್ಟಿ ಸಾಮ್ರಾಜ್ಯ ಸ್ಥಾಪಿಸಿದರು. ಅವರ ಆಳ್ವಿಕೆಯಲ್ಲಿ ನ್ಯಾಯ, ನೀತಿ ಮತ್ತು ಧರ್ಮದಿಂದ ಆಡಳಿತ ನಡೆಯುತ್ತಿದ್ದವು. ಅವರು ಮಾಡಿದ ಯುದ್ಧದಲ್ಲಿ ಯಾವ ಸಂದರ್ಭದಲ್ಲೂ ಧಾರ್ಮಿಕ ಸ್ಥಳಗಳನ್ನು ನಾಶ ಮಾಡಲಿಲ್ಲ, ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಎನ್ನಲಿಲ್ಲ ನೇರವಾಗಿ ಯುದ್ಧವೇ ಮಾಡಿ ನ್ಯಾಯಯುತವಾಗಿ ಪ್ರದೇಶಗಳನ್ನು ಗೆದ್ದು ಸಾಮ್ರಾಜ್ಯ ಸ್ಥಾಪನೆ ಮಾಡಿದ್ದಾರೆ. ಅವರ ಜೀವನ ಅರಿತುಕೊಂಡು ಅವರಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.

ಶಾಸಕ ಎಂ.ಸಿ. ಮನಗೂಳಿ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕ ರಮೇಶ ಭೂಸನೂರ, ಜಿಪಂ ಮಾಜಿ ಸದಸ್ಯ ಯಶವಂತರಾಯಗೌಡ ರೂಗಿ, ಮೈಸೂರಿನ ಮಾಜಿ ಶಾಸಕ ಮಾರುತಿರಾವ್‌ ಪವಾರ ಮಾತನಾಡಿ, ತಾಲೂಕಿನ ಮಲಘಾಣ ಗ್ರಾಮದಲ್ಲಿ ಹಿಂದೂ ಹೃದಯ ಸಾಮ್ರಾಟ್‌ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪುತ್ಥಳಿ ಸ್ಥಾಪನೆ ತಾಲೂಕಿನಲ್ಲಿ ಪ್ರಥಮವಾಗಿದೆ. ಶಿವಾಜಿ ದೇಶ ಪ್ರೇಮ, ಆದರ್ಶ, ಆಡಳಿತ ವೈಖರಿ, ಮೌಲ್ಯಗಳನ್ನು ನಾವು ಅರಿತು ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದರು.

Advertisement

ಪ್ರಾಚಾರ್ಯ ಸುನೀಲ ಜಾಧವ ಮಾತನಾಡಿ, ಗ್ರಾಮದ ಶಿವಾಜಿ ವೃತ್ತದಲ್ಲಿ 1.5 ಟನ್‌ ತೂಕದ 9.5 ಅಡಿ ಎತ್ತರದ ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆ ತಾಲೂಕಿನ ಮಲಘಾಣ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದೆ. ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆ ಸಿಂದಗಿ ತಾಲೂಕಿನಲ್ಲಿ ಪ್ರಥಮವಾಗಿದ್ದು ಹೆಮ್ಮೆ ವಿಷಯವಾಗಿದೆ ಎಂದು ಹೇಳಿದರು.

ಮರಾಠಾ ಸಮಾಜದ ಸುರೇಶ ಜಾಧವ, ಶ್ಯಾಮ ಚವ್ಹಾಣ, ಅಂಜುಮನ್‌ ಕಮಿಟಿ ಅಧ್ಯಕ್ಷ ರಸೂಲ್‌ಸಾಬ ಆಲಮೇಲ, ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್‌ ತಾಲೂಕಾಧ್ಯಕ್ಷ ಶ್ಯಾಮರಾವ್‌ ಚವ್ಹಾಣ, ಗ್ರಾಪಂ ಅಧ್ಯಕ್ಷ ದಾವಲಸಾಬ ಬಡೆಗಾರ, ಸದಸ್ಯರಾದ ಅರ್ಜುನ ಚವ್ಹಾಣ, ಶರಣು ಕಕ್ಕಳಮೇಲಿ, ಮರಾಠಾ ಸಮಾಜದ ಮಲಘಾಣದ ಅಧ್ಯಕ್ಷ ದಶರಥ ಚವ್ಹಾಣ, ಗೋಪಾಲ ಸಿಂಧೆ, ಶಿವಪ್ಪ ಮಾಶ್ಯಾಳ, ಮಹಾದೇವ ಕದಂ, ರಾಜು ಚವ್ಹಾಣ, ಅಮಿತ್‌ ಚವ್ಹಾಣ, ಸಂತೋಷ ಜಾಧವ, ಎಸ್‌.ಎಂ. ಚವ್ಹಾಣ, ಅರ್ಜುಣ ಚವ್ಹಾಣ, ವಿಠೊಬಾ ಕದಂ, ಮುದುಕು ಕದಂ, ದೌಲತರಾಯ ಸಿಂಧೆ, ಕುಮು ಸಿಂಧೆ, ವಿಠ್ಠಲ ಚವ್ಹಾಣ, ದತ್ತು ಚವ್ಹಾಣ, ನಿತಿನ ಚವ್ಹಾಣ, ಸಾಗರ ಜಾಧವ, ಅಶೋಕ ಜಾಧವ, ರಾಮು ಕದಂ, ವಿಠ್ಠಲ ಸಿಂಧೆ, ರಾವಜಿ ಚವ್ಹಾಣ, ಭೀಮರಾಯ ಸಿಂಧೆ, ಹನುಮಂತ ಹಿಪ್ಪರಗಿ, ಹನುಮಂತ ಬಡಿಗೇರ, ಗೋಲಪ್ಪ ಮಾಶ್ಯಾಳ, ವಿಠ್ಠಲ ಖೇಡಗಿ, ಎಂ.ಆರ್‌. ಬಿರಾದಾರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಮರಾಠಾ ಸಮಾಜ ಬಾಂಧವರು, ಗ್ರಾಮ ಹಾಗೂ ಸುತ್ತಲಿನ ಹಿಂದೂ-ಮುಸ್ಲಿಂ ಸಮುದಾಯದ ಜನತೆ, ಹಾಲಿ, ಮಾಜಿ ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು, ಗ್ರಾಮದ ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next