Advertisement
ಸೋಮವಾರ ಇಲ್ಲಿ ನಡೆದ ಜಿಎಸ್‌ಟಿ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಪಾರಿಗಳ ಅನುಕೂಲಕ್ಕಾಗಿ ಜಿಎಸ್‌ಟಿ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಣಗೊಳಿಸುವ ಪ್ರಯತ್ನ ನಡೆದಿದೆ. ಅದಕ್ಕೆ ಪೂರಕವಾಗಿ ಸಹಜ್, ಸುಗಮ್, ನಾರ್ಮಲ್ ರಿಟರ್ನ್ಸ್ ನಮೂನೆ ಬಳಕೆ ಎ.1ರಿಂದ ಜಾರಿಯಾಗಲಿದೆ.
ನೂತನ ಇ- ಇನ್‌ವಾಯ್ಸ ವ್ಯವಸ್ಥೆಯನ್ನು ಜನವರಿಯಿಂದ ಜಾರಿಗೊಳಿಸಲಾಗುತ್ತಿದೆ. ವಾರ್ಷಿಕ 500 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವವರು ಜ.1ರಿಂದ ಇ-ಇನ್‌ವಾಯ್ಸ ವ್ಯವಸ್ಥೆಯನ್ನು ಐಚ್ಛಿಕ ಮತ್ತು ಪ್ರಯೋಗಾರ್ಥ ಜಾರಿ ಮಾಡಬಹುದು. ಈ ವ್ಯವಸ್ಥೆಯಿಂದ ಮಾಸಿಕ 3ಬಿ ರಿಟರ್ನ್ಸ್ ಸಲ್ಲಿಸುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದರು.
Related Articles
ನಕಲಿ ಇನ್‌ವಾಯ್ಸ ಸೃಷ್ಟಿಸಿ ವಂಚಿಸುವುದನ್ನು ತಪ್ಪಿಸಲು ಆಧಾರ್ ಜೋಡಣೆ ಕಡ್ಡಾಯಗೊಳಿಸಲಾಗುತ್ತಿದೆ. ಜ. 1ರಿಂದ ಆಧಾರ್ ಜೋಡಣೆ ವ್ಯವಸ್ಥೆ ಜಾರಿಯಾಗಲಿದೆ. ಹೊಸದಾಗಿ ಜಿಎಸ್‌ಟಿ ನೋಂದಣಿ ಪಡೆಯುವವರು ಆಧಾರ್ ವಿವರ ಸಲ್ಲಿಸುವುದು ಕಡ್ಡಾಯ ಎಂದರು.
Advertisement
ಕೇಂದ್ರ ಸರಕಾರವು ರಾಜ್ಯಕ್ಕೆ ಅಕ್ಟೋಬರ್, ನವೆಂಬರ್ ತಿಂಗಳ ಜಿಎಸ್‌ಟಿ ಪರಿಹಾರ ಮೊತ್ತವನ್ನಷ್ಟೇ ಪಾವತಿಸಬೇಕಿದ್ದು, ಮಾಸಾಂತ್ಯದೊಳಗೆ ಬಾಕಿ ಪರಿಹಾರವು ಬಿಡುಗಡೆಯಾಗಲಿದೆ ಎಂದರು.