ಸಿಂಪಲ್ ಸುನಿ ನಿರ್ದೇಶನದ “ಅವತಾರ್ ಪುರುಷ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದರ ನಡುವೆಯೇ ನಿರ್ದೇಶಕ ಸಿಂಪಲ್ ಸುನಿ ಸದ್ದಿಲ್ಲದೆ ತಮ್ಮ ಹೊಸ ಚಿತ್ರದ ಕೆಲಸ ಶುರು ಮಾಡಿದ್ದಾರೆ. ಅಂದಹಾಗೆ, ಸುನಿ ನಿರ್ದೇಶನದ ಹೊಸಚಿತ್ರಕ್ಕೆ “ಒಂದು ಸರಳ ಪ್ರೇಮಕಥೆ’ ಎಂದು ಟೈಟಲ್ ಇಡಲಾಗಿದೆ ಎನ್ನಲಾಗುತ್ತಿದ್ದು, ಮೂಲಗಳ ಪ್ರಕಾರ ತಮ್ಮ ಹೊಸ ಚಿತ್ರದ ಅರ್ಧದಷ್ಟು ಚಿತ್ರೀಕರಣವನ್ನೂ ಸುನಿ ಸದ್ದಿಲ್ಲದೆ ಪೂರ್ಣಗೊಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ತಮ್ಮ ತಂಡದ ಜೊತೆ ಚಿಕ್ಕಮಗಳೂರಿನಲ್ಲಿ ಬೀಡು ಬಿಟ್ಟಿರುವ ಸುನಿ, ಪಶ್ಚಿಮ ಘಟ್ಟದ ಸುಂದರ ತಾಣಗಳಲ್ಲಿ ಈ ಹೊಸಚಿತ್ರದ ಚಿತ್ರೀಕರಣ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಮತ್ತೆ ಖಾಕಿ ತೊಟ್ಟ ಪ್ರಜ್ವಲ್ ದೇವರಾಜ್
ಇನ್ನು “ಒಂದು ಸರಳ ಪ್ರೇಮಕಥೆ’ ಸಿನಿಮಾದ ಟೈಟಲ್ಲೇ ಹೇಳುವಂತೆ, ಈ ಬಾರಿಯೂ ಸುನಿ ಮತ್ತೂಂದು ತಾಜಾ ಪ್ರೇಮಕಥೆಯನ್ನು ತಮ್ಮದೇ ಶೈಲಿಯಲ್ಲಿ ಪ್ರೇಕ್ಷಕರ ಮುಂದೆ ಹೇಳಲು ಹೊರಟಿದ್ದಾರಂತೆ.
Related Articles
ಒಟ್ಟಾರೆ ಈ ಹೊಸಚಿತ್ರ “ಒಂದು ಸರಳ ಪ್ರೇಮಕಥೆ’ ಟೈಟಲ್ ಬಗ್ಗೆಯಾಗಲಿ, ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆಯಾಗಲಿ ಸುನಿ ಇಲ್ಲಿಯವರೆಗೂ ಎಲ್ಲೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ಕುರಿತು ಸುನಿ ಹೆಚ್ಚಿನ ಮಾಹಿತಿ ನೀಡಿದ ಮೇಲಷ್ಟೇ ಹೊಸಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಸಿಗಲಿದೆ