ಪುತ್ತೂರು: ಭಾರತದ ಸಂವಿ ಧಾನವು ಹಲವು ದೇಶಗಳ ಸಂವಿಧಾನಗಳ ಅಧ್ಯಯನದ ಬಳಿಕ ಸಿದ್ಧಗೊಂಡ ಕಾರಣ ದಿಂದ ಪರಮಶ್ರೇಷ್ಠವಾಗಿ ಗುರುತಿಸಿ ಕೊಂಡಿದೆ. ಜನರಿಂದಲೇ ಆಯ್ಕೆಯಾದ ಸರಕಾರ ನಮ್ಮನ್ನು ಆಳುತ್ತಿದ್ದು, ಸಂವಿಧಾನ ನೀಡಿದ ಎಲ್ಲ ಸವಲತ್ತು ಹಾಗೂ ಜವಾಬ್ದಾರಿಗಳನ್ನು ನಾವು ನೆನಪು ಮಾಡ ಬೇಕಾದುದು ಅಗತ್ಯ ಎಂದು ಪುತ್ತೂರು ಸಹಾಯಕ ಕಮಿಷನರ್ ಡಾ| ಯತೀಶ್ ಉಳ್ಳಾಲ್ ಹೇಳಿದರು.
ಅವರು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಬಳಿಕ ಸಂದೇಶ ನೀಡಿದರು. ನಾವು ಶಾಂತಿಯುತವಾಗಿ ಬದುಕಬೇಕಾದರೆ ಸೈನಿಕರನ್ನು ನೆನಪಿ ಸಬೇಕು. ಜತೆಗೆ ಕೋವಿಡ್ ವಾರಿಯರ್ ಸೇವೆಯೂ ಅತ್ಯಮೂಲ್ಯವಾಗಿತ್ತು ಎಂದರು. ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಮತ್ತು ಗೃಹರಕ್ಷಕ ದಳದಿಂದ ಪಥ ಸಂಚಲನ ನಡೆಯಿತು. ಬಳಿಕ ಪುರಭವನದಲ್ಲಿ ಸರಳ ಸಭಾ ಕಾರ್ಯಕ್ರಮ ನಡೆಯಿತು.
ಪುತ್ತೂರು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ನಗರಸಭೆ ಅಧ್ಯಕ್ಷ ಜೀವಂಧರ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಪುತ್ತೂರು ಡಿವೈಎಸ್‌ಪಿ ಡಾ| ಗಾನಾ ಪಿ. ಮಾತ ನಾಡಿದರು. ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಿದ ಒಟ್ಟು ಏಳು ಇಲಾಖೆ/ ವಿಭಾಗಗಳ ಆಯ್ದ 35 ಸಿಬಂದಿಯನ್ನು ಗೌರವಿಸಲಾಯಿತು.
ಆರೋಗ್ಯ ಇಲಾಖೆ ವತಿಯಿಂದ ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್‌ಕುಮಾರ್ ರೈ, ಇಲಾಖೆ ಸಿಬಂದಿ ಗೀತಾ, ಪದ್ಮನಾಭ, ಗಾಯತ್ರಿ ಮತ್ತು ಚಂದ್ರಾವತಿ, ಕಂದಾಯ ಇಲಾಖೆಯ ವಿಜಯ ವಿಕ್ರಮ, ಮಹೇಶ್ ಎಸ್., ಕಾಶಪ್ಪ ನ್ಯಾಮೇಗೌಡ, ಚೈತ್ರಾ ಡಿ.ನಾಯಕ್, ಉಮೇಶ್ ನಾಯಕ್, ಪುತ್ತೂರು ನಗರಸಭೆ ಸಿಬಂದಿ ರಾಧಾಕೃಷ್ಣ, ಅಮಿತ್, ಜಯಂತ್, ಪುರುಷೋತ್ತಮ ಮತ್ತು ಲೋಕೇಶ್, ತಾ.ಪಂ. ವ್ಯಾಪ್ತಿಯ ರವಿಚಂದ್ರ ಯು., ಶರೀಫ್, ಪದ್ಮಕುಮಾರಿ, ಹೊನ್ನಪ್ಪ ಮತ್ತು ಇಸಾಕ್, ಶಿಕ್ಷಣ ಇಲಾಖೆಯಿಂದ ಶಿವಪ್ಪ ರಾಥೋಡ್, ತಾರಾನಾಥ ಪಿ., ರಾಕೇಶ್ ಡಿ., ಸ್ಮಿತಾ ಕೆ.ಎನ್., ಚಕ್ರಪಾಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸುಮಿತ್ರಾ, ಪ್ರಮೀಳಾ, ಅರುಣಾ, ಜಾನಕಿ ಮತ್ತು ರೇವತಿ, ಪೊಲೀಸ್ ಇಲಾಖೆಯಿಂದ ಕೃಷ್ಣಪ್ಪ ಎಂ., ದಿನೇಶ್, ಯೋಗೀಂದ್ರ, ನಾರಾಯಣ್, ಸುರೇಶ್ ಶರ್ಮಾ ಅವರನ್ನು ಸಮ್ಮಾನಿಸಲಾಯಿತು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಉಪಸ್ಥಿತ ರಿದ್ದರು. ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ವಂದಿಸಿದರು.
ಸರ್ವ ಧರ್ಮಗಳ ಪವಿತ್ರ ಗ್ರಂಥ: ಮಠಂದೂರು :
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಂವಿಧಾನ ಶಿಲ್ಪಿ ಡಾ|ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ನಮ್ಮ ಸಂವಿಧಾನ ಇವತ್ತಿಗೂ ಭಾರತದ ಸರ್ವ ಧರ್ಮಗಳ ಪಾಲಿಗೆ ಪವಿತ್ರ ಧರ್ಮಗ್ರಂಥವಿದ್ದಂತೆ ಎಲ್ಲರಿಗೂ ನ್ಯಾಯ ಕೊಡಲು ಇದು ಸಮರ್ಥವಾಗಿದೆ ಎಂದರು.