Advertisement

ನಿರ್ಬಂಧದ ನಡುವೆ ಮಾರುಕಟ್ಟೆಗೆ ದುಬಾರಿ ಗಣಪ

05:27 PM Sep 07, 2021 | Team Udayavani |

ಕೋವಿಡ್‌ ಹಿನ್ನೆಲೆ ಅದ್ದೂರಿ ಗಣೇಶೋತ್ಸವಕ್ಕೆ ಕಡಿವಾಣ ಬಿದ್ದಿದ್ದರೂ ಕೋವಿಡ್‌ ನಿಯಮ ಪಾಲಿಸಿಕೊಂಡು ಗಣೇಶ ಚತುರ್ಥಿಯನ್ನು ಸರಳ ರೀತಿಯಲ್ಲಿ ಆಚರಿಸಲು ಅಭ್ಯಂತರವಿಲ್ಲ ಎಂದು ಸರ್ಕಾರ ಘೋಷಿಸುತ್ತಲೇ ತುಮಕೂರು ನಗರವೂ ಸೇರಿ ಜಿಲ್ಲೆಯಾದ್ಯಂತ ಮಾರುಕಟ್ಟೆಗಳಿಗೆ ಸೋಮವಾರ ಬಗೆ ಬಗೆಯ ಗಣೇಶ ಮೂರ್ತಿಗಳು ಲಗ್ಗೆ ಇಟ್ಟಿವೆ. ಎಲ್ಲೆಡೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳೇ ಹೆಚ್ಚು ಕಂಡುಬಂದಿದ್ದು, ಗಣೇಶ ಮೂರ್ತಿಯ ಬೆಲೆ ಸ್ವಲ್ಪ ಏರಿಕೆಯಾದರೂ ಖರೀದಿಗೆ ಜನಬರಲಾರಂಭಿಸಿದ್ದಾರೆ…

Advertisement

ತುಮಕೂರು: ಕೋವಿಡ್‌ ನಿಯಮ ಅನುಸರಿಸಿ ಗಣೇಶೋತ್ಸವ ವನ್ನು ಎಲ್ಲಾ ಕಡೆ ಆಚರಿಸಲು ಸರ್ಕಾರ ಅನುಮತಿ ನೀಡಿರುವ ಹಿನ್ನಲೆ ಕಲ್ಪತರು ನಾಡಿನ ಎಲ್ಲಾಕಡೆ ಬಗೆ ಬಗೆಯ ಗಣೇಶ ಮೂರ್ತಿಗಳು ಸೋಮವಾರ ಮಾರುಕಟ್ಟೆಗೆ ಬಂದಿವೆ.

ಕಳೆದ ವರ್ಷದಿಂದ ಗೌರಿ ಗಣೇಶ ಹಬ್ಬದ ಸಡಗರಕ್ಕೆ ಕೋವಿಡ್‌-19ಅಡ್ಡಿಯಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೋವಿಡ್‌ ನಿಯಮ ಸ್ವಲ್ಪ ಸಡಿಲಿಕೆ ಆಗಿರುವ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ತಯಾರಕರು ನಿರಾಳರಾಗಿ ಮೂರ್ತಿಗಳನ್ನು ಮಾರುಕಟ್ಟೆಗೆ ತಂದಿದ್ದಾರೆ.

ಹಿಂದೂ ಧರ್ಮದಲ್ಲಿ ಗೌರಿ-ಗಣೇಶ ಹಬ್ಬಮಹಿಳೆಯರು ಮತ್ತು ಯುವಕ – ಯುವತಿಯರ ಅಚ್ಚು ಮೆಚ್ಚಿನ ಹಬ್ಬ ಪ್ರತಿ ವರ್ಷ ಗಣೇಶೋತ್ಸವವನ್ನು
ವಿಶೇಷ ರೀತಿಯಲ್ಲಿ ಆಚರಿಸುವುದು ಸಂಪ್ರದಾಯ. ಈ ವರ್ಷವೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಿದೆ. ಆದರೆ
ಹಲವು ಷರತ್ತು ಹಾಕಿದೆ.4 ಅಡಿಗಳ ಗಣೇಶ ಮೂರ್ತಿಗಳನ್ನು ಮಾತ್ರ ಸಾರ್ವ ಜನಿಕವಾಗಿ ಪ್ರತಿಷ್ಠಾಪಿಸಲು ಅವಕಾಶ ನೀಡಿದೆ. ಇದರಿಂದ ದೊಡ್ಡ ಗಣೇಶ ಮೂರ್ತಿಗಳನ್ನು ಕೇಳದ ಪರಿಸ್ಥಿತಿ ಎದುರಾಗಿದೆ. ಹಬ್ಬದಲ್ಲಿ ಮಾರಾಟ ಮಾಡಲು ತಯಾರಾಗಿರುವ ಗಣೇಶ ಮೂರ್ತಿಗಳಿಗೆ ಸೋಮವಾರದಿಂದ ಬೇಡಿಕೆ ಬರಲಾರಂಭಿಸಿದೆ. ಈ ಮೂಲಕ ಸಂಕಷ್ಟದಲ್ಲಿದ ª ಕುಂಬಾರÃ ‌ ಮುಖದಲ್ಲಿ ಸ್ವಲ್ಪ ಹರ್ಷ ಮೂಡಿದೆ.

ಇದನ್ನೂ ಓದಿ:ಟೆಲಿಕಾಂ ವಲಯದಲ್ಲಿ ಕ್ರಾಂತಿ ಮಾಡಿದ ‘ಜಿಯೋ’ಗೆ ಈಗ ಐದು ವರ್ಷ!

Advertisement

ನಗರದಿಂದ ಹಿಡಿದು ಹಳ್ಳಿಯ ವರೆಗೆ ಎಲ್ಲಾ ಕಡೆ ಸಾರ್ವಜನಿಕ ಗಣೇಶೋತ್ಸವಗಳು ನಡೆಯುತ್ತವೆ. ನಗರದಲ್ಲಿ ಪ್ರತಿಬೀದಿಬೀದಿಯಲ್ಲಿ ಗಣೇಶಮೂರ್ತಿಯನ್ನುಪ್ರತಿಷ್ಠಾಪಿಸಿ ಪೂಜಿಸಿ ಭವ್ಯ ಮೆರವಣಿಗೆ ಮಾಡಿ ಗಣೇಶ ಮೂರ್ತಿ ವಿಸರ್ಜನೆ ಮಾಡುವುದಕ್ಕೆ ಕಡಿವಾಣ ಬಿದ್ದಿದೆ. ಊರಿಗೆ
ಒಂದು ವಾರ್ಡ್‌ಗೆ ಒಂದರಂತೆ ಗಣೇಶ ಪ್ರತಿಷ್ಠಾಪಿಸಲು ಅವಕಾಶ ನೀಡಿದ್ದು ಅನಾದಿ ಕಾಲದಿಂದಲೂ ಮೂರ್ತಿ ಪ್ರತಿಷ್ಠಾಪನೆ ಸಾಂಪ್ರದಾಯ ನಡೆದುಕೊಂಡು ಬಂದಿದೆ.

ಗಣೇಶ ಹಬ್ಬದಲ್ಲಿ ಸಾವಿರಾರು ಗಣೇಶ ಮೂರ್ತಿಗಳ ಮಾರಾಟ ಸ್ವಲ್ಪ ಹಿನ್ನಡೆಯಾಗಲಿದೆ. ಈ ಹಬ್ಬಕ್ಕಾಗಿಯೇ ಗಣೇಶನ ಮೂರ್ತಿ ತಯಾರಕರು 10 ತಿಂಗಳಿನಿಂದ ಬಗೆ ಬಗೆಯ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿ ಸಾವಿರಾರು ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ.
ಅಲ್ಲದೇ, ಈ ಬಾರಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಇದ್ದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆಗೆ ಒತ್ತು ನೀಡುತ್ತಿದ್ದಾರೆ.

ಸೋಮವಾರ ಕಲ್ಪತರು ನಾಡಿನ ಪ್ರಮುಖ ರಸ್ತೆಗಳಲ್ಲಿ ವಿವಿಧ ರೀತಿಯ ಗಣೇಶ ಮೂರ್ತಿಗಳು, ಚಿಕ್ಕ ಗಣೇಶನಿಂದ ಹಿಡಿದು4 ಅಡಿ,6 ಅಡಿ ಗಾತ್ರದ ಗಣೇಶನವರೆಗೆಮಾರಾಟಕ್ಕೆ ಮಾರುಕಟ್ಟೆಗೆ ಬಂದಿವೆ. ಆದರೆ ಗಣೇಶ ಮೂರ್ತಿಗಳ ಬೆಲೆ ಸ್ವಲ್ಪ ಏರಿಕೆಯಾಗಿದೆ.

ಡೀಸಿ ವೈ.ಎಸ್‌.ಪಾಟೀಲ್‌ ಹೇಳಿದ್ದೇನು?
-ಕನಿಷ್ಠ ಜನಸಂಖ್ಯೆಯೊಂದಿಗೆ ಗಣೇಶೋತ್ಸವ ಆಚರಿಸಿ
– ರಾಸಾಯನಿಕ ಬಣ್ಣ, ಬಣ್ಣದ ಗಣೇಶ ಮೂರ್ತಿಗಳ ಮಾರಾಟ ಮಾಡಬಾರದು
– ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ 2 ಅಡಿ ಮೀರದಂತೆ ಮೂರ್ತಿ ಪ್ರತಿಷ್ಠಾಪಿಸಿ
– ಪಾರಂಪರಿಕ ಗಣೇಶೋತ್ಸವಕ್ಕಾಗಿ ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆಯಬೇಕು
– ಗರಿಷ್ಠ 5 ದಿನಗಳಿಗಿಂತ ಹೆಚ್ಚು ದಿನ ಗಣೇಶ ಚತುರ್ಥಿ ಆಚರಿಸುವಂತಿಲ್ಲ

ಕೋವಿಡ್‌ ಹಿನ್ನೆಲೆಯಲ್ಲಿ ನಿಯಮ ಅನುಸರಿಸಿ ಸಾರ್ವಜನಿಕವಾಗಿ ಗಣೇಶೋತ್ಸವಕ್ಕೆ ಸರ್ಕಾರ ಅವಕಾಶ ಮಾಡಿದೆ. ಅದು ಸ್ವಾಗತಾರ್ಹ. ನಿಯಮಾನುಸಾರ ಎಲ್ಲರೂ ಹಬ್ಬ ಆಚರಿಸಬೇಕು. ಹೆಚ್ಚು ಜನಸೇರಿಸಿ ಕೊರೊನಾ 3ನೇ ಅಲೆ ಬಾರದ ಹಾಗೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ.
– ಮಹೇಶ್‌, ನಾಗರಿಕ

-ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next