Advertisement
ಆ್ಯಂಕ್ಲೆಟ್ ಅಥವಾ ಕಾಲ್ಗೆಜ್ಜೆ ಇದು ಅಪ್ಪಟ ದೇಶಿರೂಪದ ಆಭರಣವಾಗಿದೆ. ಆ್ಯಂಕ್ಲೆಟ್ ತಯಾರಿಕೆಯಲ್ಲಿ ಕಲಾವಿದನ ಕೈಚಳಕವೇ ಮುಖ್ಯವಾಗುತ್ತದೆ. ಸದ್ಯದಲ್ಲಿ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿ ಈ ಕಾಲ್ಗೆಜ್ಜೆ ಬಹುಬೇಡಿಕೆಯಿದೆ. ಹಾಗಾಗಿ ಈ ಕಾಲ್ಗೆಜ್ಜೆಯ ವೈಶಿಷ್ಟ್ಯದ ಬಗ್ಗೆ ತಿಳಿಯುವುದು ಕೂಡ ಅಷ್ಟೇ ಮುಖ್ಯ.
ಯುವತಿಯರು ಸಿಂಗಲ್ ಆ್ಯಂಕ್ಲೆಟ್‌ನ್ನು ಜೀನ್ಸ್ ಪ್ಯಾಂಟ್, ಲೆಹಂಗಾ, ಸಿಂಪಲ್ ಕುರ್ತಿ, ಶಾರ್ಟ್ ಪ್ಯಾಂಟ್‌ನ ಜತೆ ಇದನ್ನು ಧರಿಸುತ್ತಾರೆ. ಸಿಂಗಲ್ ಆ್ಯಂಕ್ಲೆಟ್‌ನ ಇನ್ನೊಂದು ವೈಶಿಷ್ಟéಎಂದರೆ ಇದರಲ್ಲೂ ನಾನಾ ಪ್ರಕಾರಗಳನ್ನು ಕಾಣಬಹುದು. ನಮ್ಮ ಪ್ರೀತಿ ಪಾತ್ರರಾದವರ ಹೆಸರನ್ನು ಹೊಂದಿಕೊಂಡಂತೆ (ಲವ್, ಅಮ್ಮ) ಎಂಬ ಅಕ್ಷರಗಳ ಲೆಟರ್ ಆ್ಯಂಕ್ಲೆಟ್, ಹಗುರಭಾರದ ಸ್ಟೈಲಿಶ್ ಆ್ಯಂಡ್ ಸಿಂಪಲ್ ಲುಕ್ ನೀಡುವ ಚಾರ್ಮ್ ಆ್ಯಂಕ್ಲೆಟ್, ಕಲರ್‌ಫುಲ್ ಮಣಿಗಳನ್ನು ಮನೆಯಲ್ಲಿಯೇ ಪೋಣಿಸಲು ಸಾಧ್ಯವಿರುವ ಸ್ಟ್ರಿಂಗ್ ಆ್ಯಂಕ್ಲೆಟ್, ಹವಳ ಮಣಿಗಳಿಂದಲೇ ಕಾಲಿಗೆ ತಂಪಿನ ಅನುಭವ ನೀಡುವ ಕ್ರಿಸ್ಟೆಲ್ ಆ್ಯಂಕ್ಲೆಟ್ ಹೀಗೆ ನಾನಾ ಪ್ರಕಾರಗಳಲ್ಲಿ ಸಿಂಗಲ್ ಆ್ಯಂಕ್ಲೇಟ್‌ನ್ನು ಕಾಣಬಹುದು.
Related Articles
Advertisement
ನಮ್ಮ ಸಂಪ್ರದಾಯದ ಪ್ರತೀಕದಂತಿರುವ ಕಾಲ್ಗೆಜ್ಜೆ ಆಧುನಿಕ ಕಾಲಘಟ್ಟದಲ್ಲಿ ಇನ್ನೆಲ್ಲೋ ಮರೆಯಾಯಿತು ಅಂದುಕೊಳ್ಳುವಾಗಲೇ ವಿನೂತನ ರೂಪದೊಂದಿಗೆ ಮತ್ತೆ ನಮ್ಮನ್ನು ಅದರತ್ತ ಆಕರ್ಷಿಸುವಲ್ಲಿ ಕ್ರಿಯಾಶೀಲತೆಯ ಅಂಶಗಳು ಅಡಗಿದೆ ಅಂದರೂ ತಪ್ಪಾಗಲಾರದು.
ರಾಧಿಕಾ, ಕುಂದಾಪುರ