ಮಣಿಪಾಲ: ಕರಾವಳಿಯಲ್ಲಿ ಮನೆಮಾತಾಗಿರುವ ಜನಮನದ ಜೀವನಾಡಿ ಉದಯವಾಣಿ ದಿನಪತ್ರಿಕೆಯ ಅಂತರ್ಜಾಲ ತಾಣದ ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬರ್ ಒಂದು ಲಕ್ಷ (1.12 ಲಕ್ಷ)ದಾಟಿರುವುದಕ್ಕೆ ಸಿಲ್ವರ್ ಪ್ಲೇ ಬಟನ್ ಗೌರವ ಸಂದಿದೆ.
ಇದನ್ನೂ ಓದಿ:ಆರ್ ಎಸ್ಎಸ್ ನ ಸರಕಾರ್ಯವಾಹರಾಗಿ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆಯ್ಕೆ
ಈ ಸಂದರ್ಭದಲ್ಲಿ ಉದಯವಾಣಿ ಅಂತರ್ಜಾಲ ತಾಣದ ಯೂಟ್ಯೂಬ್ ಚಾನೆಲ್ ಗೆ ಸಿಲ್ವರ್ ಪ್ಲೇ ಬಟನ್ ಗೌರವ ಸಂದಿರುವುದಕ್ಕೆ ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿ. ಕಾರ್ಯನಿರ್ವಾಹಕ ನಿರ್ದೇಶಕ ಟಿ. ಗೌತಮ್ ಪೈ ಅವರು ಉದಯವಾಣಿ ಡಿಜಿಟಲ್ ತಂಡವನ್ನು ಅಭಿನಂದಿಸಿದರು.
ಉದಯವಾಣಿ ಅಂತರ್ಜಾಲ ತಾಣದ ಯೂಟ್ಯೂಬ್ ಚಾನೆಲ್ ಅನ್ನು ಪ್ರೋತ್ಸಾಹಿಸಿದ ಓದುಗರಿಗೆ ಗೌತಮ್ ಪೈ ಅವರು ಅಭಿನಂದನೆ ಸಲ್ಲಿಸಿದರು. ಅಲ್ಲದೇ ಇನ್ನಷ್ಟು ಉತ್ತಮವಾದ ವಿಡಿಯೋವನ್ನು ನೀಡುವ ಮೂಲಕ ಆದಷ್ಟು ಶೀಘ್ರವಾಗಿ ಗೋಲ್ಡನ್ ಪ್ಲೇ ಬಟನ್ ಗೌರವ ಲಭಿಸುವಂತಾಗಲಿ ಎಂದು ಶುಭಹಾರೈಸಿದರು.
“ಸಿಲ್ವರ್ ಪ್ಲೇ ಬಟನ್ “ ಗೌರವ ಉದಯವಾಣಿ ಅಂತರ್ಜಾಲ ತಾಣದ ಯೂಟ್ಯೂಬ್ ಚಾನೆಲ್ ಗೆ ಮತ್ತೊಂದು ಮೈಲಿಗಲ್ಲಾಗಿದ್ದು, ತಂಡದ ಶ್ರಮಕ್ಕೆ ತಕ್ಕ ಬೆಲೆ ಲಭಿಸಿದಂತಾಗಿದೆ. ಮುಂದೆಯೂ ಉತ್ತಮ ಅಭಿರುಚಿಯ ವಿಡಿಯೋಗಳ ಮೂಲಕ ಹೆಚ್ಚು ಜನರು ನಮ್ಮ ಯೂಟ್ಯೂಬ್ ವೀಕ್ಷಿಸುವಂತಾಗಲಿ ಎಂದು ಮಣಿಪಾಲ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ (ಎಂಎಂಎನ್ ಎಲ್) ನ ಮುಖ್ಯಕಾರ್ಯನಿರ್ವಹಣಾಧಿಕಾರಿ(ಸಿಇಒ) ವಿನೋದ್ ಕುಮಾರ್ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಎಂಡಿಎನ್ ಎಲ್ ಮುಖ್ಯಸ್ಥ ಹರೀಶ್ ಭಟ್ ಹಾಗೂ ಉದಯವಾಣಿ ಅಂತರ್ಜಾಲ ತಾಣದ ಟೀಮ್ ಸದಸ್ಯರು ಹಾಜರಿದ್ದರು.