ಚೆನ್ನೈ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿರುವ ಭಾರತದ ಯಶಸ್ವಿ ಸ್ಕ್ವಾಷ್ ಆಟಗಾರ್ತಿಯರಾದ ಜೋತ್ಸ್ನಾ ಚಿನ್ನಪ್ಪ ಮತ್ತು ದೀಪಿಕಾ ಪಳ್ಳಿಕಲ್ ಅವರು ಚೆನ್ನೈಗೆ ಆಗಮಿಸಿದಾಗ ಹಾರ್ದಿಕವಾಗಿ ಸ್ವಾಗತಿಸಲಾಯಿತು.
ವನಿತೆಯರ ಡಬಲ್ಸ್ ಸ್ಪರ್ಧೆಯಲ್ಲಿ ಜೋತ್ಸ್ನಾ ಮತ್ತು ದೀಪಿಕಾ ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ದೀಪಿಕಾ ಈ ಮೊದಲು ಮಿಕ್ಸೆಡ್ ಡಬಲ್ಸ್‌ನಲ್ಲಿ ಸೌರವ್ ಘೋಷಲ್ ಜತೆಗೂಡಿ ಬೆಳ್ಳಿಯ ಪದಕ ಜಯಿಸಿದ್ದರು.
ನಾಲ್ಕು ವರ್ಷಗಳ ಹಿಂದಿನ ಸಾಧನೆಯ ಆಲೋಚನೆ ಪಂದ್ಯದ ವೇಳೆ ಮನಸ್ಸಿಗೆ ಬಂದಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಸ್ಕ್ವಾಷ್ ಆಟದಲ್ಲಿ ಗಮನಾರ್ಹ ಬದಲಾವಣೆಯಾಗಿವೆ. ಗ್ಲಾಸೊYàದಲ್ಲಿ ನಾವು ಚಿನ್ನ ಜಯಿಸಿದ್ದೆವು. ಅದನ್ನು ಈ ಬಾರಿ ಉಳಿಸಿಕೊಳ್ಳಲು ನಾವು ಪ್ರಯತ್ನಿಸಿದ್ದೆವು. ಆದರೆ ಯಶಸ್ಸು ಸಾಧಿಸಲು ಆಗಲಿಲ್ಲ ಎಂದು ಜೋತ್ಸ್ನಾ ತಿಳಿಸಿದರು.
ಆಗಸ್ಟ್‌ನಲ್ಲಿ ನಡೆಯುವ ಏಶ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲಲು ಕಠಿನ ಪ್ರಯತ್ನ ನಡೆಸಲಿದ್ದೇವೆ. ಕಾಮನ್‌ವೆಲ್ತ್ ಗೇಮ್ಸ್‌ನ ಪದಕ ಗೆಲುವು ಇದಕ್ಕೆ ಸ್ಫೂರ್ತಿ ನೀಡಲಿದೆ ಎಂದವರು ಹೇಳಿದರು. ಬರಿಗೈಯಲ್ಲಿ ಬಾರದಿರುವುದು ನಮಗೆ ಸಮಾಧಾನವನ್ನುಂಟು ಮಾಡಿದೆ ಎಂದು ದೀಪಿಕಾ ಹೇಳಿದರು.
ಪದಕ ವಿಜೇತ ತಮಿಳುನಾಡಿನ ಆಟಗಾರರಿಗೆ ಮುಖ್ಯಮಂತ್ರಿ ಕೆ. ಪಲನಿಸ್ವಾಮಿ ನಗದು ಬಹುಮಾನ ಪ್ರಕಟಿಸಿದ್ದಾರೆ. ಜೋತ್ಸ್ನಾ ಚಿನ್ನಪ್ಪ (30 ಲಕ್ಷ ರೂ.), ದೀಪಿಕಾ ಪಳ್ಳಿಕಲ್ (60 ಲಕ್ಷ ರೂ.) ಮತ್ತು ಸೌರವ್ ಘೋಷಲ್ ಅವರಿಗೆ 30 ಲಕ್ಷ ರೂ. ನೀಡಲಾಗುತ್ತದೆ. ಟೇಬಲ್ ಟೆನಿಸ್ ಆಟಗಾರರಾದ ಶರತ್ ಕಮಲ್, ಜಿ. ಸತಿಯನ್ ಅವರಿಗೆ ನಗದು ಬಹುಮಾನ ನೀಡಲಾಗುತ್ತದೆ.