ಮಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರದ ಬೃಹತ್ ರಜತ ದ್ವಾರಕ್ಕೆ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಭಕ್ತರು ನೀಡಿದ ಅಂದಾಜು 170 ಕೆಜಿ ಬೆಳ್ಳಿಯನ್ನು ಶ್ರೀ ಕಾಶೀ ಮಠಾಧೀಶರಾದ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರು ಸೋಮವಾರ ಸಮರ್ಪಿಸಿದರು.
ಅಯೋಧ್ಯೆಗೆ ಚಿತ್ರೈಸಿದ ಶ್ರೀಗಳನ್ನು ಗೌರವಪೂರ್ವಕವಾಗಿ ಸ್ವಾಗತಿಸಿ, ನಿರ್ಮಾಣ ಹಂತದಲ್ಲಿರುವ ದೇವಸ್ಥಾನದ ಯೋಜನಾ ಕೆಲಸ ಕಾರ್ಯಗಳನ್ನು ಅಯೋಧ್ಯಾ ರಾಮಜನ್ಮಭೂಮಿ ಟ್ರಸ್ಟ್ ಪ್ರಮುಖ ರಾದ ಗೋಪಾಲ್ ಹಾಗೂ ಪದಾಧಿಕಾರಿಗಳು ವಿವರಿಸಿದರು. ಶ್ರೀರಾಮ ಲಲ್ಲಾನ ದರ್ಶನ ಪಡೆದ ಶ್ರೀಗಳು ಆಶೀರ್ವಚನ ನೀಡಿದರು.
ಶ್ರೀ ಕಾಶೀ ಮಠದಿಂದ ಅಯೋಧ್ಯೆಯಲ್ಲಿ ಅನ್ನದಾನದ ಸೇವೆ ನಡೆಯುತ್ತಿದ್ದು, ನಿತ್ಯ ಭಕ್ತರು ಪ್ರಸಾದ ಸ್ವೀಕರಿಸುತ್ತಿದ್ದಾರೆ. ಸುಕೃತೀಂದ್ರ ಸೇವಾ ಪ್ರತಿಷ್ಠಾನ ಕಾರ್ಯಕ್ರಮವನ್ನು ಆಯೋಜಿಸಿದೆ.