Advertisement

ಬಿಜೆಪಿಯಲ್ಲಿ ವೈಲೆಂಟ್ ಸೃಷ್ಟಿಸಿದ ಸೈಲೆಂಟ್ ಸುನೀಲ್

10:09 AM Nov 29, 2022 | Team Udayavani |

ಬೆಂಗಳೂರು: ಬಿಜೆಪಿ ಸಂಸದರು ಹಾಗೂ ಶಾಸಕರ ಜತೆಗೆ ರೌಡಿ ಸೈಲೆಂಟ್ ಸುನೀಲ್ ವೇದಿಕೆ ಹಂಚಿಕೊಂಡಿರುವ ವಿಚಾರ ಈಗ ಬೇರೆ ಬೇರೆ ಚರ್ಚೆಗೆ ಕಾರಣವಾಗಿದ್ದು, ಸಂಘ- ಪರಿವಾರದ ಹಿನ್ನೆಲೆಯ ವ್ಯಕ್ತಿಯೊಬ್ಬರ ಸಹಕಾರದಿಂದ ಈ ರಕ್ತದಾನ ಶಿಬಿರ ಆಯೋಜಿಸಲಾಗಿತ್ತೆಂಬ ಸಂಗತಿ ಬೆಳಕಿಗೆ ಬಂದಿದೆ. ಅದೆಲ್ಲದಕ್ಕಿಂತ ಹೆಚ್ಚಾಗಿ ಬಿಜೆಪಿ ಸಂಸದರು ಹಾಗೂ ಶಾಸಕರು ಸುನೀಲ್ ಸಮರ್ಥನೆಗೆ ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಇದಕ್ಕೆ ಪೂರಕವಾಗಿ ದಿಲ್ಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಸುನೀಲ್ ಜತೆ ತಮ್ಮ ಪಕ್ಷದ ಸಂಸದರು ಹಾಗೂ ಶಾಸಕರು ವೇದಿಕೆ ಹಂಚಿಕೊಂಡಿರುವುದನ್ನು ಸಮರ್ಥಿಸಿಕೊಳ್ಳುವ ರೀತಿ ಮಾತನಾಡಿದ್ದಾರೆ. ಕಾಂಗ್ರೆಸ್ ಗೆ ತಿರುಗೇಟು ಕೊಡುವ ಭರದಲ್ಲಿ ಕಾಂಗ್ರೆಸ್ ನಲ್ಲಿ ಎಷ್ಟು ರೌಡಿ ಶೀಟರ್ ಗಳು ಇದ್ದಾರೆ ಎಂಬುದನ್ನು ಲೆಕ್ಕ ಹಾಕಿಕೊಳ್ಳಲಿ ಎಂದು ಹೇಳಿದ್ದಾರೆ. ತಮ್ಮ ಈ ಹೇಳಿಕೆ ಸಮಾಜದಲ್ಲಿ ಎಂಥ ಸಂದೇಶ ನೀಡುತ್ತದೆ ಎಂಬ ಅರಿವಿದೆಯೇ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ನಿನ್ನೆ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸಚಿವ ಅಶ್ವತ್ಥ ನಾರಾಯಣ ಅವರು ಸೈಲೆಂಟ್ ಸುನೀಲ್ ಪರ ಮಾತನಾಡಿದ್ದರು. ಶಾಸಕ ಉದಯ ಗರುಡಾಚಾರ್ ಅವರಂತೂ ಸುನೀಲ್ ನನ್ನ ಸ್ನೇಹಿತ. ಆತ ಹಲವು ವರ್ಷಗಳಿಂದ ಗೊತ್ತು. ಆದರೆ ಆತನೇ ‘ಸೈಲೆಂಟ್ ಸುನೀಲ್’ ಎಂಬುದು ಗೊತ್ತಿರಲಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ:ಮದುವೆ ಮನೆಯಲ್ಲಿ ನೃತ್ಯ, ಡಿಜೆ ಹಾಕುವಂತಿಲ್ಲ, ಪಟಾಕಿ ಹೊಡೆಯುವಂತಿಲ್ಲ!

ಇದೆಲ್ಲದಕ್ಕೂ ತೇಪೆ ಹಾಕುವ ರೀತಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ‘ಆ ವ್ಯಕ್ತಿಯ ಹಿನ್ನೆಲೆ ಗೊತ್ತಿಲ್ಲ. ಪಕ್ಷಕ್ಕೆ ಸೇರಿಸಿಕೊಳ್ಳುವ ಸಂದರ್ಭದಲ್ಲಿ ಆತನ ಹಿನ್ನೆಲೆ ವಿಶ್ಲೇಷಣೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ‌ ಆದಾಗಿಯೂ ಸೈಲೆಂಟ್ ಸುನೀಲ್ ಪ್ರಕರಣ ಬಿಜೆಪಿಗೆ ಅತೀವ ಮುಜುಗರ ತಂದಿದೆ.

Advertisement

ರೌಡಿ ಬೆಕ್ಕಿನ ಕಣ್ಣು ರಾಜೇಂದ್ರ‌ ಕೊಲೆ ಪ್ರಕರಣದ ಬಳಿಕ ಬೆಂಗಳೂರು ಭೂಗತ ಜಗತ್ತಿನಲ್ಲಿ ಬೆಳಕಿಗೆ ಬಂದಿದ್ದ ಸುನೀಲ್ ವಿರುದ್ಧ 17 ಪ್ರಕರಣ ದಾಖಲಾಗಿತ್ತು. ಕಡಬಗೆರೆ ಸೀನ ಪ್ರಕರಣದಲ್ಲಿ ಬಿಜೆಪಿಯ ಪ್ರಬಲ ರಾಜಕಾರಣಿಯ ಜತೆ ಈತನ ಹೆಸರು ಥಳುಕು ಹಾಕಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next