Advertisement
ಉತ್ತರ ಸಿಕ್ಕಿಂನಲ್ಲಿ ಬುಧವಾರ ಲೊನಾಕ್ ಸರೋವರದಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ತೀಸ್ತಾ ನದಿಯ ಜಲಾನಯನ ಪ್ರದೇಶದಲ್ಲಿ ಹಠಾತ್ ಪ್ರವಾಹ ಉಂಟಾಗಿ ಸಂಭವಿಸಿದ ದುರಂತದಲ್ಲಿ ನಾಪತ್ತೆಯಾಗಿರುವವರಿಗಾಗಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.
Related Articles
Advertisement
ಮೇಘತ ಸ್ಪೋಟದ ತೀವ್ರತೆಗೆ ಕೆಸರು ಮಣ್ಣಿನಡಿ ದೊಡ್ಡ ದೊಡ್ಡ ವಾಹನಗಳುಸಿಲುಕಿಕೊಂಡಿವೆ, ಮೇಘಸ್ಫೋಟದಿಂದಾಗಿ 22 ಸೇನಾ ಸಿಬ್ಬಂದಿ ಸೇರಿದಂತೆ 103 ಮಂದಿ ನಾಪತ್ತೆಯಾಗಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ವಿ ಬಿ ಪಾಠಕ್ ತಿಳಿಸಿದ್ದಾರೆ.
ಸಿಕ್ಕಿರುವ 18 ಮೃತದೇಹಗಳಲ್ಲಿ ನಾಲ್ವರನ್ನು ‘ಸೇನಾ ಜವಾನರು’ ಎಂದು ಗುರುತಿಸಲಾಗಿದೆ ಎಂದು ನೆರೆಯ ಪಶ್ಚಿಮ ಬಂಗಾಳ ಸರ್ಕಾರ ಹೇಳಿದೆ. ಅಲ್ಲದೆ ಗಾಯಗೊಂಡವರು ಸಿಕ್ಕಿಂನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ನಡುವೆ ಉತ್ತರ ಸಿಕ್ಕಿಂನ ಲಾಚೆನ್, ಲಾಚುಂಗ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಸಿಲುಕಿರುವ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ಸೇನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Goregaon: 7 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ: 7 ಮೃತ್ಯು, 40ಕ್ಕೂ ಹೆಚ್ಚು ಮಂದಿಗೆ ಗಾಯ