Advertisement

ಸಿಕ್ಖರಿಗೆ ಶಸ್ತ್ರಾಸ್ತ್ರ ತರಬೇತಿ ಸಿಗಲಿ; ಅಕಾಲ್‌ ತಖ್ತ್ ನ ಮುಖ್ಯಸ್ಥ ಹರ್‌ಪ್ರೀತ್‌ ಆಗ್ರಹ

12:15 AM Jun 07, 2022 | Team Udayavani |

ಚಂಡೀಗಢ‌: “ಸಿಕ್ಖ್ ಸಮುದಾಯದ ಮೇಲೆ ಅನ್ಯ ಧರ್ಮಗಳಿಂದ ಪರೋಕ್ಷ ದಾಳಿಗಳು ಆರಂಭವಾಗಿದ್ದು, ಅವುಗಳಿಂದ ಸಿಕ್ಖ್ ಧರ್ಮವನ್ನು ರಕ್ಷಿಸಿಕೊಳ್ಳಲು ಎಲ್ಲ ಸಿಕ್ಖ್ ಯುವಕರು ಸಾಂಪ್ರದಾಯಿಕ ಶಸ್ತ್ರಾಭ್ಯಾಸವನ್ನು ಮಾಡಬೇಕು.

Advertisement

ಸಿಕ್ಖ್ ಸಮುದಾಯದ ಎಲ್ಲ ಧರ್ಮಗುರುಗಳು ತಾವಿರುವ ಹವಾನಿ ಯಂತ್ರಿತ ಕೊಠಡಿಗಳಿಂದ ಹೊರಬಂದು ಸಿಕ್ಖ್ ಯುವಕರ ತರಬೇತಿಗೆ ಮುಂದಾಗಬೇಕು” ಎಂದು ಸಿಕ್ಖರ ಪರಮೋತ್ಛ ಧಾರ್ಮಿಕ ಪೀಠವಾದ ಅಕಾಲ್‌ ತಖ್ತ್ ನ ಮುಖ್ಯಸ್ಥ ಗಿಯಾನಿ ಹರ್‌ಪ್ರೀತ್‌ ಸಿಂಗ್‌ ಆಗ್ರಹಿಸಿದ್ದಾರೆ.

ಖಲಿಸ್ಥಾನಿ ಉಗ್ರರಿಂದ ಅಮೃತ ಸರದ ಸ್ವರ್ಣ ಮಂದಿರವನ್ನು ವಿಮುಕ್ತಗೊಳಿಸಲು 1984ರಲ್ಲಿ ನಡೆಸಲಾಗಿದ್ದ “ಆಪರೇಷನ್‌ ಬ್ಲೂ ಸ್ಟಾರ್‌’ ಕಾರ್ಯಾಚರಣೆಯ 38ನೇ ವಾರ್ಷಿಕೋತ್ಸವ ಸಮಾರಂಭ ದಲ್ಲಿ ಅವರು ಮಾತನಾಡಿದರು.

“ನಮ್ಮ ಹಳ್ಳಿಗಳಲ್ಲಿ ಇಂದು ಚರ್ಚ್‌ಗಳು ತಲೆ ಎತ್ತುತ್ತಿವೆ. ಅನ್ಯ ಧರ್ಮೀಯರು ಸಿಕ್ಖರ ವಿರುದ್ಧ ಪ್ರಾಬಲ್ಯ ಸಾಧಿಸುವುದನ್ನು ತಡೆಯಲು ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ಅತ್ಯವಶ್ಯಕ” ಎಂದು ಪ್ರತಿಪಾದಿಸಿದರು.
ಇದೇ ವೇಳೆ ದೇಶದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರೂ ವಿರುದ್ಧ ವಾಗ್ಧಾಳಿ ನಡೆಸಿದ ಹರ್‌ಪ್ರೀತ್‌ ಸಿಂಗ್‌, ನೆಹರೂ ಆಡಳಿತಾ ವಧಿಯಲ್ಲಿ ಸಿಕ್ಖ್ ವಿರೋಧಿ ನೀತಿಗಳನ್ನೇ ಜಾರಿಗೆ ತಂದರು. ಅದರ ಪರಿ ಣಾಮ, ಸಿಕ್ಖರು ಆರ್ಥಿಕ, ಸಾಮಾಜಿಕ  ಹಾಗೂ ರಾಜಕೀಯವಾಗಿ ಪ್ರಬಲರಾ ಗಲು ಸಾಧ್ಯವಾಗಲೇ ಇಲ್ಲ ಎಂದರು.

ಖಲಿಸ್ಥಾನ ಪರ ಘೋಷಣೆ?
ಈ ಸಮಾರಂಭದಲ್ಲಿ ಖಲಿಸ್ಥಾನ ಪರ ಘೋಷಣೆಗಳನ್ನು ಕೂಗಲಾಯಿತು ಎಂಬ ಆರೋಪಗಳು ಕೇಳಿಬಂದಿವೆ. ಹರ್‌ಪ್ರೀತ್‌ ಸಿಂಗ್‌ ಅವರು ತಮ್ಮ ಭಾಷಣದಲ್ಲಿ ಇಂಥ ಘೋಷಣೆ ಕೂಗಿದ್ದು, ಸಭಿಕರೂ ದನಿಗೂ ಡಿಸಿದರು ಎನ್ನಲಾಗಿದೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next