ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ನ ಕ್ವೀನ್ಸ್ ನಗರದಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ಗುಂಡಿಟ್ಟು ಕೊಲ್ಲಲಾಗಿದೆ.
ಸತ್ನಮ್ ಸಿಂಗ್(31) ಮೃತ ವ್ಯಕ್ತಿ. ಆತ ಇತ್ತೀಚೆಗೆ ತನ್ನ ಸ್ನೇಹಿತನೊಬ್ಬನಿಂದ ಕಾರೊಂದನ್ನು ಪಡೆದಿದ್ದ.
ಶನಿವಾರ ಮಧ್ಯಾಹ್ನ 3.45ರ ಸಮಯಕ್ಕೆ ತಾನು ವಾಸವಿದ್ದ ಮನೆಯ ಸನಿಹದ ರಸ್ತೆಯಲ್ಲಿ ಕಾರಿನೊಳಗೆ ಕುಳಿತಿದ್ದ.
ಆಗ ಇನ್ನೊಂದು ಕಾರಿನಲ್ಲಿ ಬಂದ ದುಷ್ಕರ್ಮಿಯೊಬ್ಬ ಸತ್ನಮ್‌ನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.
Related Articles
ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಆರೋಪ : ಮಲಯಾಳಂ ನಟ ವಿಜಯ್ ಬಾಬು ಬಂಧನ
ಕೊಲೆಗಾರ ಕಾರಿನ ಮಾಲೀಕನನ್ನು ಕೊಲೆ ಮಾಡಲು ಯೋಜನೆ ಹಾಕಿ, ಗೊತ್ತಿಲ್ಲದೆ ಸತ್ನಮ್ ಅನ್ನು ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.