Advertisement

AIMS‌ ಕಾಸರಗೋಡಿನಲ್ಲಿ ಸ್ಥಾಪಿಸುವಂತೆ ಆಗ್ರಹಿಸಿ ಬದಿಯಡ್ಕದಲ್ಲಿ ವ್ಯಾಪಾರಿಗಳಿಂದ ಸಹಿ ಸಂಗ್ರಹ

07:23 PM Sep 16, 2020 | mahesh |

ಬದಿಯಡ್ಕ: ಕೇಂದ್ರ ಸರಕಾರದಿಂದ ನಿಯಂತ್ರಿಸಲ್ಪಡುವ ವಿಶ್ವ ದರ್ಜೆಯ ಆರೋಗ್ಯ ವ್ಯವಸ್ಥೆಯಾದ “ಏಮ್ಸ್‌’ ಕಾಸರಗೋಡು ಜಿಲ್ಲೆಯಲ್ಲೇ ಸ್ಥಾಪಿಸಲ್ಪಡಬೇಕು. ಎಂಡೋಸಲ್ಫಾನ್‌ ಬಾಧಿತ ಪ್ರದೇಶವಾದ ಕಾಸರಗೋಡು ಜಲ್ಲೆಯ ಜನತೆಗೆ ಇದು ಅನುಕೂಲವಾಗಬೇಕು ಎಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಎಸ್‌.ಎನ್‌. ಮಯ್ಯ ಬದಿಯಡ್ಕ ಹೇಳಿದರು.

Advertisement

ಏಮ್ಸ್‌ ಸಂಸ್ಥೆ ಕಾಸರಗೋಡು ಜಿಲ್ಲೆಗೆ ಎಂಬ ಘೋಷಣೆಯೊಂದಿಗೆ ಬದಿಯಡ್ಕ ಬಸ್‌ ನಿಲ್ದಾಣದ ಸಮೀಪದಲ್ಲಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ವತಿಯಿಂದ ನಡೆದ ಸಹಿ ಸಂಗ್ರಹ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆವಿವಿಇಎಸ್‌ ಬದಿಯಡ್ಕ ಯೂನಿಟ್‌ ಅಧ್ಯಕ್ಷ ಕುಂಜಾರು ಮುಹಮ್ಮದ್‌ ಹಾಜಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ಹಮೀದ್‌ ಕಾರ್ಯಕ್ರಮ ನಿರೂಪಿಸಿದರು. ಬದಿಯಡ್ಕ ಪೇಟೆಯಲ್ಲಿ ಸಹಿ ಸಂಗ್ರಹಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next