Advertisement

ಆ್ಯಪಲ್‌ಗಾಗಿ ಸಿಗ್ನಲ್‌ ಅಪ್‌ಡೇಟ್‌

12:48 PM Jan 15, 2021 | Team Udayavani |

ಕ್ಯಾಲಿಫೋರ್ನಿಯಾ: ಕೆಲವು ದಿನಗಳಿಂದ ನಿತ್ಯ 10 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳಿಗೆ ಸಾಕ್ಷಿಯಾಗುತ್ತಾ ವಾಟ್ಸ್‌ಆ್ಯಪ್‌ಗೆ ಬೆವರಿಳಿಸುತ್ತಿರುವ ಸಿಗ್ನಲ್‌ ಈಗ ಆ್ಯಪಲ್‌ನ ಐಒಎಸ್‌ ಆವೃತ್ತಿಗಾಗಿಯೇ ಹೊಸ ಅಪ್‌ಡೇಟ್‌ ಬಿಡುಗಡೆ ಮಾಡಿದೆ. ಸಿಗ್ನಲ್‌ನ 5.2 ಆವೃತ್ತಿಯು ಹತ್ತಾರು ಹೊಸ ಬದಲಾವಣೆಗಳನ್ನು, ಹೊಸ ಆಯ್ಕೆಗಳನ್ನು ನೀಡುತ್ತಿದೆ.

Advertisement

ಮುಖ್ಯವಾಗಿ ಐಫೋನ್‌ ಹಾಗೂ ಐಪ್ಯಾಡ್‌ಗಳಲ್ಲಿ ಗುಂಪು ಕರೆಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸುವ, ಏಕಕಾಲದಲ್ಲಿ ಹಲವರಿಗೆ ಸಂದೇಶ ಕಳುಹಿಸುವ ಆಯ್ಕೆಯ ಜತೆಗೆ ಹಾಗೂ ವೀಡಿಯೋ ಕರೆಗಳ ಗುಣಮಟ್ಟವನ್ನೂ ಸುಧಾರಿಸಲಾಗಿದೆ. ಇನ್ನು ಐಫೋನ್‌ಗಾಗಿ ಬಿಡುಗಡೆಯಾಗಿರುವ ಸಿಗ್ನಲ್‌ನ ಈ ಅಪ್‌ಡೇಟ್‌ ಆ್ಯಪ್‌ನೊಳಗೇ ವಿವಿಧ ಅಟ್ಯಾಚ್‌ಮೆಂಟ್‌ಗಳನ್ನು ತೆರೆಯುವ ಆಯ್ಕೆ ನೀಡಿದೆ.

ಸಿಗ್ನಲ್‌ ಅಷ್ಟೇ ಅಲ್ಲದೇ, ಟೆಲಿಗ್ರಾಂ ಆ್ಯಪ್‌ನ ಬಳಕೆದಾರರ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಜನವರಿ 7ರಂದು ಫೇಸ್‌ಬುಕ್‌ ಮಾಲಕತ್ವದ ವಾಟ್ಸ್‌ಆ್ಯಪ್‌ ನೂತನ ಪ್ರೈವೆಸಿ ಪಾಲಿಸಿಯನ್ನು ಬಿಡುಗಡೆ ಮಾಡಿದಾಗ, ಗೌಪ್ಯತೆ, ಡಾಟಾ ಟ್ರ್ಯಾಕಿಂಗ್‌ನ ವಿಚಾರದಲ್ಲಿ ಬಳಕೆದಾರರಲ್ಲಿ ಆತಂಕ ಸೃಷ್ಟಿಯಾದದ್ದೇ ಪರ್ಯಾಯ ಆ್ಯಪ್‌ಗ್ಳ ಬೆಳವಣಿಗೆಗೆ ಕಾರಣ. ಇದಾದ ಅನಂತರ, ಈಗ ವಾಟ್ಸ್‌ಆ್ಯಪ್‌ ತಾನು ಬಳಕೆದಾರರ ಸಂದೇಶಗಳ ಮೇಲೆ ಕಣ್ಣಿಟ್ಟಿಲ್ಲ, ಅವರ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದೆಯಾದರೂ, ಜನರು ಪರ್ಯಾಯ ಆ್ಯಪ್‌ಗ್ಳತ್ತ ಮುಖ ಮಾಡುತ್ತಿರುವುದು ನಿಂತಿಲ್ಲ. ಗಮನಾರ್ಹ ಸಂಗತಿಯೆಂದರೆ, ವಾಟ್ಸ್‌ಆ್ಯಪ್‌ ಸ್ಥಾಪಕರಲ್ಲಿ ಒಬ್ಬರಾಗಿದ್ದ ಬ್ರಯಾನ್‌ ಆ್ಯಕ್ಟನ್‌ ಅವರೇ ಸಿಗ್ನಲ್‌ನ ಸಹಸ್ಥಾಪಕರಲ್ಲಿ ಒಬ್ಬರು. ತಾವೇ ಸೃಷ್ಟಿಸಿದ್ದ ಸಂಸ್ಥೆಗೆ ಈಗ ಅವರೇ ಸವಾಲು ಎಸೆಯುತ್ತಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next