Advertisement

ಜೂ. ವಿಶ್ವಕಪ್‌ ಶೂಟಿಂಗ್‌: ಭಾರತಕ್ಕೆ ಅಗ್ರಸ್ಥಾನ

11:36 PM May 19, 2022 | Team Udayavani |

ಹೊಸದಿಲ್ಲಿ: ಜರ್ಮನಿಯಲ್ಲಿ ನಡೆದ ಐಎಸ್‌ಎಸ್‌ಎಫ್ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಅಗ್ರಸ್ಥಾನದ ಗೌರವ ಸಂಪಾದಿಸಿದೆ.

Advertisement

ಗುರುವಾರದ 50 ಮೀ. ರೈಫ‌ಲ್‌ ಸ್ಪರ್ಧೆಯಲ್ಲಿ ಸಿಫ್ತ್ ಕೌರ್‌ ಶರ್ಮ-ಸೂರ್ಯಪ್ರತಾಪ್‌ ಸಿಂಗ್‌ ಜೋಡಿ ಬೆಳ್ಳಿ ಪದಕ ಗೆದ್ದು ಈ ಎತ್ತರ ತಲುಪಿತು.

ಫೈನಲ್‌ನಲ್ಲಿ ಶರ್ಮ-ಸಿಂಗ್‌ ಜೋಡಿ ಪೋಲೆಂಡ್‌ ಶೂಟರ್ ವಿರುದ್ಧ ಸೋತು ಚಿನ್ನವನ್ನು ತಪ್ಪಿಸಿಕೊಂಡಿತು.

ಭಾರತ ಒಟ್ಟು 33 ಪದಕಗಳಿಗೆ ಗುರಿ ಇರಿಸಿತು. 13 ಚಿನ್ನ, 15 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಇದು ಒಳಗೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next