Advertisement

ವಿಷಗಾಳಿ ಆಸ್ಪತ್ರೆ ಸೇರಿದ ಸಿಡ್ಲ್

07:50 PM Dec 27, 2019 | Lakshmi GovindaRaj |

ಆಸ್ಟ್ರೇಲಿಯದಲ್ಲಿ ಹಿಂದೆಂದೂ ಕಾಣದ ರಣಭೀಕರ ಕಾಡ್ಗಿಚ್ಚಿನಿಂದ ಭಾರೀ ನಷ್ಟವಾಗಿದೆ. ಈ ನಷ್ಟ ಅಲ್ಲಿ ನಡೆಯುತ್ತಿರುವ ಕ್ರಿಕೆಟ್‌ ಕೂಟಗಳಿಗೂ ತಟ್ಟಿದೆ. ಆತಿಥೇಯ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ 3ನೇ ಟೆಸ್ಟ್‌ಗೂ ಮಾಲಿನ್ಯದ ಬಿಸಿ ತಟ್ಟಿದೆ. ಜತೆಗೆ ಕ್ಯಾನ್‌ ಬೆರಾದಲ್ಲಿ ನಡೆದ ಸಿಡ್ನಿ ಥಂಡರ್ ಹಾಗೂ ಅಡಿಲೇಡ್‌ ಸ್ಟ್ರೈಕರ್ ನಡುವಿನ ಪಂದ್ಯಕ್ಕೂ ದಟ್ಟವಾದ ಹೊಗೆ ಆವರಿಸಿದ್ದರಿಂದ ಪಂದ್ಯಕ್ಕೆ ಅಡಚಣೆಯಾಗಿತ್ತು.

Advertisement

ಅಷ್ಟೇ ಆದರೆ ಪರವಾಗಿಲ್ಲ, ಆಟಗಾರರಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ. ತಕ್ಷಣ ಆಟಗಾರರು ಪೆವಿಲಿಯನ್‌ಗೆ ನಿರ್ಗಮಿಸಿದರು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗ ಪೀಟರ್‌ ಸಿಡ್ಲ್ ಕೂಡ ಭಾಗವಹಿಸಿದ್ದರು. ಸಿಡ್ಲ್ ಹೊಗೆ ಗಾಳಿ ಸೇವಿಸಿದ್ದರಿಂದ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಗೆ ಮಿಶ್ರತ ವಾತಾವರಣದಲ್ಲಿ ಆಡುವುದು ಬೇಡ ಎಂದಿದ್ದರೂ ಪಂದ್ಯ ಮುಂದುವರಿಸಿರುವುದಕ್ಕೆ ಟೀಕೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next