Advertisement

ನವಪಂಜಾಬ್‌ ನಿರ್ಮಾಣಕ್ಕೆ ಸಿಧು ಮನವಿ

12:30 AM Oct 18, 2021 | Team Udayavani |

ಹೊಸದಿಲ್ಲಿ: ಹಲವಾರು ಗೊಂದಲ, ಗೋಜಲುಗಳ ನಡುವೆ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ಗಾದಿಗೆ ಮತ್ತೆ ಬಂದು ಕುಳಿತುಕೊಂಡ ನವಜೋತ್‌ ಸಿಂಗ್‌ ಸಿಧು, ಪಕ್ಷದ ರಾಷ್ಟ್ರೀಯ ಅಧ್ಯಕ್ಷೆಯಾದ ಸೋನಿಯಾ ಗಾಂಧಿಯವರಿಗೆ ಪತ್ರವೊಂದನ್ನು ಬರೆದಿದ್ದಾರೆ.

Advertisement

ಅದರಲ್ಲಿ, ಪಂಜಾಬ್‌ ಪುನರುತ್ಥಾನಕ್ಕೆ ಅಡ್ಡಿಯಾಗಿರುವ 18 ಸಾಮಾಜಿಕ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದಾರೆ. “ಪಂಜಾಬ್‌ ಅಭಿವೃದ್ಧಿಗೆ ಮಾರಕವಾಗಿರುವ ಈ ಸಾಮಾಜಿಕ ಪೀಡೆಗಳನ್ನು ಮಟ್ಟ ಹಾಕದೇ ಇದ್ದರೆ, ನಾವು (ಕಾಂಗ್ರೆಸ್‌) ಜನರ ವಿಶ್ವಾಸ ವನ್ನು ಗೆಲ್ಲಲು ಸಾಧ್ಯವಿಲ್ಲ, ಹಾಗಾಗಿ, ಪಂಜಾಬ್‌ನಲ್ಲಿರುವ ಕಾಂಗ್ರೆಸ್‌ ಸರಕಾರಕ್ಕೆ ಈ 18 ಅಡಚಣೆಗಳನ್ನು ತೊಡೆದು ಹಾಕಲು ಸೂಚನೆ ನೀಡಬೇಕು ಎಂದು ಸೋನಿಯಾ ಗಾಂಧಿಯವರಲ್ಲಿ ಕೋರಿದ್ದಾರೆ.

ಜತೆಗೆ 2022ರ ಚುನಾವಣೆ ಹೊತ್ತಿಗೆ ಪಂಜಾಬ್‌ನಲ್ಲಿ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಿ, ಮಾದರಿ ಪಂಜಾಬ್‌ ಪರಿಕಲ್ಪನೆಯಡಿಯಲ್ಲೇ ಚುನಾವಣೆ ಎದುರಿಸುವಂತಾಗಬೇಕು’ ಎಂದು ಆಶಿಸಿದ್ದಾರೆ. ಪತ್ರದ ಒಂದು ಪ್ರತಿ  ಯನ್ನು ಟ್ವಿಟರ್‌ನಲ್ಲೂ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ನ್ಯಾಯ ವಿಲೇವಾರಿ, ಪಂಜಾಬ್‌ನಾದ್ಯಂತ ಇರುವ ಮಾದಕವಸ್ತುಗಳ ಕಾಟ ನಿರ್ಮೂಲನೆ, ಕೃಷಿ ಸಂಬಂಧಿ ಸಮಸ್ಯೆ ಗಳನ್ನು ನಿವಾರಣೆ, ಯುವಕರಿಗೆ ಉದ್ಯೋ ಗಾವಕಾಶ ಹೆಚ್ಚಳ, ಅಕ್ರಮ ಮರಳು ಗಣಿಗಾರಿಕೆ ಮಟ್ಟ ಹಾಕುವುದು, ಹಿಂದು ಳಿದ ವರ್ಗಗಳಿಗಾಗಿ ಅಭಿವೃದ್ಧಿ ಕಾರ್ಯ ಕ್ರಮಗಳ ಜಾರಿ ಇತ್ಯಾದಿಗಳ ಬಗ್ಗೆ ಸಿಧು ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next