Advertisement
ಪಶ್ಚಿಮ ಕರಾವಳಿಯಲ್ಲಿ ಮೇ 31 ಆ ವರ್ಷದ ಮೀನುಗಾರಿಕೆಗೆ ಕೊನೆಯ ದಿನ. ಬಳಿಕ 61 ದಿನಗಳ ಕಾಲ ನಿಷೇಧ ಇರುತ್ತದೆ. 2015ರಲ್ಲಿ ಕೇಂದ್ರ ಸರಕಾರವು ಪಶ್ಚಿಮ ಕರಾವಳಿಗೆ ಏಕರೂಪದ 2 ತಿಂಗಳ ನಿಷೇಧ ವಿಧಿಸಿ ಆದೇಶ ಹೊರಡಿಸಿತ್ತು. ಕರ್ನಾಟಕ, ಗೋವಾ, ಕೇರಳ, ಗುಜರಾತ್, ಮಹಾರಾಷ್ಟ್ರ ದಲ್ಲಿಯೂ ಇದೇ ನಿಯಮವಿದೆ. ಆದರೆ ಈ ಬಾರಿ ಲಾಕ್‌ಡೌನ್‌ನಿಂದಾಗಿ ಮೇ 31ರ ಮುನ್ನವೇ ಮೀನುಗಾರಿಕಾ ಋತು ಕೊನೆಗೊಳ್ಳುವ ಲಕ್ಷಣ ಕಾಣುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಎಪ್ರಿಲ್‌ನಿಂದ ಮೀನುಗಾರಿಕೆಗೆ ನಿಷೇಧ ಹೇರಿದ್ದು, ದೇಶದ ವಿವಿಧ ಭಾಗಗಳ ಹೆಚ್ಚಿನ ಮೀನುಗಾರ ಕಾರ್ಮಿಕರು ಊರುಗಳಿಗೆ ತೆರಳಿ ದ್ದಾರೆ. ಬಂದರಿನಲ್ಲಿ ಬಾಕಿಯಾಗಿರುವ ತಮಿಳುನಾಡು, ಕೇರಳ ಮೂಲದ ಕೆಲವರು ತಮ್ಮ ಊರುಗಳಿಗೆ ತೆರಳುವ ತವಕ ದಲ್ಲಿದ್ದಾರೆ. ಒಂದು ವೇಳೆ ಮೇ ಮೊದಲ ವಾರದಲ್ಲಿ ಲಾಕ್‌ಡೌನ್ ಕೊನೆಗೊಂಡರೂ ಬಾಕಿ ಉಳಿಯುವ 20 ದಿನಗಳಿಗಾಗಿ ದೂರದ ಊರುಗಳಿಂದ ಕಾರ್ಮಿಕರು ಮರಳುವುದು ಅನುಮಾನ.
ಇಲಾಖೆಯ ಅಂಕಿ-ಅಂಶದ ಪ್ರಕಾರ, ದ.ಕ. ಜಿಲ್ಲೆಯಲ್ಲಿ ಕಳೆದ 8 ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅತೀಹೆಚ್ಚು ಪ್ರಮಾಣದ ಮೀನು ಲಭಿಸಿದೆ. ಜಿಲ್ಲೆಯಲ್ಲಿ 2019-20ರ ಅವಧಿಯಲ್ಲಿ ಮಾರ್ಚ್‌ವರೆಗೆ ಒಟ್ಟು 1,71,692 ಟನ್ ಮೀನು ದೊರಕಿದೆ. ಇದು ಸಾರ್ವಕಾಲಿಕ ದಾಖಲೆ. ಉಡುಪಿ ಜಿಲ್ಲೆಯಲ್ಲಿಯೂ 1,21,479 ಟನ್ ಸಿಕ್ಕಿರುವುದು ಇನ್ನೊಂದು ದಾಖಲೆ. ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ಪ್ರಕಾರ, “ಕಳೆದ ಕೆಲವು ತಿಂಗಳಿಗೆ ಹೋಲಿಸಿದರೆ ಮೀನುಗಾರಿಕೆ ಬೋಟ್‌ಗಳ ಸಂಖ್ಯೆ ಹೆಚ್ಚಳವಾಗಿದೆ. ಕೆಲವು ಬೋಟ್
ಗಳಲ್ಲಿ ತಂತ್ರಜ್ಞಾನವೂ ಬದಲಾಗಿದೆ. ಮೀನು ಲಭಿಸುವ ಪ್ರಮಾಣ ಹೆಚ್ಚಾದರೂ ಬೋಟ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ಲಭ್ಯ ಮೀನುಗಳು ಹಂಚಿಹೋಗುತ್ತವೆ. ಹಾಗಾಗಿ ಮೀನುಗಾರರ ಲಾಭಾಂಶ ಕಡಿಮೆಯಿದೆ. ಹಮಾಮಾನ ವೈಪರೀತ್ಯ, ಕರ್ಫ್ಯೂ, ಬಂದ್, ಕೋವಿಡ್ ಮೊದಲಾದ ಕಾರಣಗಳಿಂದ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ’ ಎನ್ನುತ್ತಾರೆ ಅವರು.
– ಹರೀಶ್ ಕುಮಾರ್, ಮೀನುಗಾರಿಕಾ ಉಪನಿರ್ದೇಶಕರು, ದ.ಕ.