Advertisement
1. ಆಲೂಗಡ್ಡೆ ಮಸಾಲೆಬೇಕಾಗುವ ಸಾಮಗ್ರಿ: ಸಣ್ಣ ಗಾತ್ರದ ಆಲೂಗಡ್ಡೆ- 8-10, ಒಣಮೆಣಸು-5, ಉದ್ದಿನ ಬೇಳೆ-2 ಚಮಚ, ಕಡಲೆ ಬೇಳೆ-1 ಚಮಚ, ಕಾಳುಮೆಣಸು-1 ಚಮಚ, ಜೀರಿಗೆ, ಸಾಸಿವೆ, ಇಂಗು- ಸ್ವಲ್ಪ, ಈರುಳ್ಳಿ-1 ದೊಡ್ಡದು, ಎಣ್ಣೆ- 3 ಚಮಚ, ಉಪ್ಪು-ರುಚಿಗೆ, ಕೊತ್ತಂಬರಿ ಸೊಪ್ಪು, ಕರಿಬೇವು ಸ್ವಲ್ಪ.
Related Articles
ಬೇಕಾಗುವ ಸಾಮಗ್ರಿ: ಟೊಮೇಟೊ-5, ಈರುಳ್ಳಿ-2, ಬೆಲ್ಲ- 1 ಸಣ್ಣತುಂಡು, ಬೆಳ್ಳುಳ್ಳಿ, ಒಣಮೆಣಸು-4, ಹುಣಸೆ ಹುಳಿ- ಲಿಂಬೆಗಾತ್ರದಷ್ಟು, ಕೊತ್ತಂಬರಿ-1 ಚಮಚ, ಜೀರಿಗೆ- ಅರ್ಧ ಚಮಚ, ಮೆಂತೆ- ಕಾಲು ಚಮಚ, ಸಾಸಿವೆ, ಕೊತ್ತಂಬರಿ ಸೊಪ್ಪು, ಕರಿಬೇವಿನಸೊಪ್ಪು, ಅಡುಗೆ ಎಣ್ಣೆ -3 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಇಂಗು.
Advertisement
ಮಾಡುವ ವಿಧಾನ: ಒಣಮೆಣಸು, ಕೊತ್ತಂಬರಿ, ಜೀರಿಗೆ, ಮೆಂತ್ಯೆ ಮತ್ತು ಸಾಸಿವೆಯನ್ನು ಹುರಿದು, ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಟ್ಟುಕೊಳ್ಳಿ. ಈರುಳ್ಳಿ ಮತ್ತು ಟೊಮೇಟೊವನ್ನು ಸಣ್ಣದಾಗಿ ಹೆಚ್ಚಿಡಿ. ನಂತರ ಬಾಣಲೆಗೆ ಒಂದು ಚಮಚ ಅಡುಗೆ ಎಣ್ಣೆ ಹಾಕಿ, ಹೆಚ್ಚಿಟ್ಟ ಈರುಳ್ಳಿಯನ್ನು ಸ್ವಲ್ಪ ಹೊತ್ತು ಹುರಿದು, ಹೆಚ್ಚಿಟ್ಟ ಟೊಮೇಟೊವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು, ಸ್ವಲ್ಪ ಹುಣಸೆ ರಸವನ್ನು ಸೇರಿಸಿ, ಮತ್ತೂಂದು ಬಾಣಲೆಗೆ ಹಾಕಿ ಬೇಯಲು ಇಡಿ. ಮಿಶ್ರಣ ಬೇಯುತ್ತ ಬರುತ್ತಿದ್ದಂತೆ, ಒಂದು ತುಂಡು ಬೆಲ್ಲವನ್ನು ಹಾಕಿ. ಬೆಲ್ಲ ಕರಗಿದ ನಂತರ, ಬೆಳ್ಳುಳ್ಳಿ ಹಾಕಿ ಸ್ವಲ್ಪ ಹೊತ್ತು ಬೇಯಿಸಿ. ಈಗ ಇದಕ್ಕೆ ಈಗಾಗಲೇ ಪುಡಿ ಮಾಡಿಟ್ಟಿರುವ ಮಸಾಲ ಮತ್ತು ಉಪ್ಪು ಹಾಕಿ. ಸಾಸಿವೆ, ಇಂಗು, ಕರಿಬೇವು, ಕೊತ್ತಂಬರಿ ಸೊಪ್ಪನ್ನು ಹಾಕಿ ಒಗ್ಗರಣೆ ಮಾಡಿ, ಬೇಯಿಸಿಟ್ಟ ಟೊಮೇಟೊಗೆ ಸೇರಿಸಿದರೆ ಚಟ್ನಿ ರೆಡಿ.
3. ಹಾಗಲಕಾಯಿ ಪಲ್ಯಬೇಕಾಗುವ ಸಾಮಗ್ರಿ: ಹೆಚ್ಚಿದ ಹಾಗಲಕಾಯಿ -1 ಕಪ್, ಹುಣಸೆಹಣ್ಣು – ಲಿಂಬೆ ಗಾತ್ರದಷ್ಟು, ಬೆಲ್ಲ -1 ತುಂಡು, ಈರುಳ್ಳಿ -2, ಒಣಮೆಣಸು- 6, ಕೊತ್ತಂಬರಿ- 3 ಚಮಚ, ಜೀರಿಗೆ-2 ಚಮಚ, ಸಾಸಿವೆ, ಉದ್ದಿನ ಬೇಳೆ -1 ಚಮಚ, ಉಪ್ಪು-ರುಚಿಗೆ, ಬೆಳ್ಳುಳ್ಳಿ, ಅಡುಗೆ ಎಣ್ಣೆ. ಮಾಡುವ ವಿಧಾನ: ಹೆಚ್ಚಿದ ಹಾಗಲಕಾಯಿಗೆ ಸ್ವಲ್ಪ ಉಪ್ಪು ಬೆರೆಸಿ, ಕೈಯಿಂದ ಚೆನ್ನಾಗಿ ಹಿಸುಕಿ ಕಹಿ ತೆಗೆಯಿರಿ. ಸ್ವಲ್ಪ ನೀರು ಹಾಕಿ ಹೆಚ್ಚಿದ ಈರುಳ್ಳಿ ಮತ್ತು ಹಾಗಲಕಾಯಿಯನ್ನು ಬೇಯಲು ಇಡಿ. ಇದಕ್ಕೆ ಹುಣಸೆ ರಸ, ಬೆಲ್ಲ ಮತ್ತು ಉಪ್ಪನ್ನು ಸೇರಿಸಿ, ದೊಡ್ಡ ಉರಿಯಲ್ಲಿ ಬೇಯಿಸಿ. ನಂತರ ಬಾಣಲೆಯಲ್ಲಿ ಒಣಮೆಣಸು, ಕೊತ್ತಂಬರಿ, ಜೀರಿಗೆ, ಸಾಸಿವೆ, ಉದ್ದಿನ ಬೇಳೆ ಹಾಕಿ ಚೆನ್ನಾಗಿ ಹುರಿದು, ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಈಗ ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಬೆಳ್ಳುಳ್ಳಿಯನ್ನು ಹೊಂಬಣ್ಣ ಬರುವವರೆಗೆ ಹುರಿಯಿರಿ. ಇದಕ್ಕೆ ಪುಡಿ ಮಾಡಿಟ್ಟ ಮಸಾಲೆ ಹಾಕಿ ಚೆನ್ನಾಗಿ ಹುರಿಯಿರಿ. ಈಗ ಬೇಯಿಸಿದ ಹಾಗಲಕಾಯಿ ಮಿಶ್ರಣವನ್ನು ಇದಕ್ಕೆ ಸೇರಿಸಿ, ಸಣ್ಣ ಉರಿಯಲ್ಲಿ ಬೇಯಿಸಿ. – ಸುಮನಾ ಆಚಾರ್