Advertisement

ವ್ಯವಸ್ಥೆ ಹಾಳು ಮಾಡಿದ ಸಿದ್ದು: ಸಚಿವೆ ಶೋಭಾ ಕರಂದ್ಲಾಜೆ

11:34 PM Feb 22, 2023 | Team Udayavani |

ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ತಕ್ಷಣವೇ ಟಿಪ್ಪು ಜಯಂತಿ ಆಚರಣೆ ಜಾರಿ ಮಾಡಿ ತಪ್ಪು ಮಾಡಿದರು. ಇಸ್ಲಾಂ ಧರ್ಮದಲ್ಲಿ ವ್ಯಕ್ತಿ ಪೂಜೆ ಮಾಡೋದಿಲ್ಲ. ಇನ್ನು ಶಾಲಾ ಮಕ್ಕಳಲ್ಲಿ ಜಾತಿ ತಂದಿಟ್ಟರು. ವೀರಶೈವ ಧರ್ಮ ಒಡೆಯೋಕೆ ನೋಡಿದರು. ಇಡೀ ವ್ಯವಸ್ಥೆಯನ್ನೇ ಹಾಳು ಮಾಡುವ ಕೆಲಸಕ್ಕೆ ಮುಂದಾದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯ ಸರಕಾರದಿಂದ ಪಿಎಫ್‌ಐ ಬ್ಯಾನ್‌ ಆಗಿದೆ. ಆದರೆ ಹಿಂದೆ ಮಂಗಳೂರು, ಬೆಂಗಳೂರು, ಮೈಸೂರಿನ ಜೈಲಿನಲ್ಲಿದ್ದ ಪಿಎಫ್‌ಐ ಕಾರ್ಯಕರ್ತರನ್ನು ಸಿದ್ದರಾಮಯ್ಯ ಸರ್ಕಾರ ಬಿಡುಗಡೆ ಮಾಡಿತು. ಮುಸ್ಲಿಂ ಮತಗಳ ಓಲೈಕೆಗೆ ಕಾಂಗ್ರೆಸ್‌ ರಾಜಕಾರಣ ಮಾಡುತ್ತ ಬಂದಿದೆ. ನಾವು ಓಲೈಕೆ ರಾಜಕಾರಣ ಮಾಡಲ್ಲ. ಶಾದಿಭಾಗ್ಯ ಒಂದು ವರ್ಗಕ್ಕೆ ಯಾಕೆ ಕೊಟ್ಟರು. ಓಲೈಕೆ, ಧರ್ಮದ ರಾಜಕಾರಣ ಮಾಡೋದು ಕಾಂಗ್ರೆಸ್‌ನವರು ಎಂದರು.

ಸಿದ್ದರಾಮಯ್ಯ ಕುರಿತ ಸಚಿವ ಅಶ್ವತ್ಥ ನಾರಾಯಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ನೂರಕ್ಕೆ ನೂರು ತಪ್ಪು. ಆ ರೀತಿ ಯಾರೂ ಹೇಳಬಾರದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಅವಕಾಶವಿದೆ. ಅವರವರ ಪಕ್ಷ, ಅವರವರ ಸಿದ್ಧಾಂತದ ಮೇಲೆ ಮಾತನಾಡಬೇಕು. ಸಿದ್ಧಾಂತದ ಆಧಾರದ ಮೇಲೆ ಪಕ್ಷ ಕಟ್ಟಬೇಕು. ಸಚಿ ವರು ಮಾತನಾಡಿದ್ದು ತಪ್ಪು. ನಮ್ಮ ಪಕ್ಷದಲ್ಲಿ ಇಂತಹ ಸಿದ್ಧಾಂತ ಇಲ್ಲ ಎಂದರು.

ಐಎಎಸ್‌-ಐಪಿಎಸ್‌ ಅಧಿಕಾರಿಗಳ ಮಧ್ಯದ ಹೇಳಿಕೆಗಳು, ಆರೋಪಗಳು ಸರಿಯಲ್ಲ ಎಂದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರಕಾರವಿದೆ. ಅಭಿವೃದ್ಧಿ ಕೆಲಸಕ್ಕೆ ಡಬಲ್‌ ಇಂಜನ್‌ ಸರಕಾರ ಬರಬೇಕೆಂದು ಮೋದಿ ಹೇಳಿದ್ದಾರೆ. ಹಿಂದೆ ಭಾರತದ ಪ್ರಧಾನಿ ವಿದೇಶಕ್ಕೆ ಹೋದರೆ ಸಾಲಕ್ಕಾಗಿ-ಭಿಕ್ಷೆಗಾಗಿ ಬರುತ್ತಿದ್ದಾರೆ ಎನ್ನುತ್ತಿದ್ದರು. ಆದರೀಗ ಭಾರತ ಪ್ರಬಲವಾಗಿದೆ ಎಂದರು.

ಸಂಸದರ ನಿಧಿಯನ್ನು ಆಸ್ಪತ್ರೆಯ ಉನ್ನತೀಕರಣಕ್ಕೆ ಬಳಸಿಕೊಳ್ಳಲಾಗಿದೆ. ಕೃಷಿ ಬಜೆಟ್‌ ಯುಪಿಎ ಸರಕಾರದಲ್ಲಿ 23 ಸಾವಿರ ಕೋಟಿ ರೂಪಾಯಿ ಇತ್ತು. ಈಗ ಬಜೆಟ್‌ನಲ್ಲಿ 1.25 ಲಕ್ಷ ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಕೃಷಿ-ಮೂಲಭೂತ ಸೌಲಭ್ಯಕ್ಕೆ ಲಕ್ಷ ಕೋಟಿ ನೀಡಲಾಗಿದೆ. ಎಂಎಸ್‌ಪಿ ದರ ಹೆಚ್ಚಳ ಮಾಡಲಾಗಿದೆ. ರಸಗೊಬ್ಬರಕ್ಕೆ ಹೆಚ್ಚಿನ ಸಬ್ಸಿಡಿ ನೀಡಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next