Advertisement

ಕಾರ್ಮಿಕರಿಗೂ ಎಲ್ಲ ರೀತಿಯ ಸೌಲಭ್ಯಗಳು ದೊರೆಯಲಿ : ಶಾಸಕ ಸಿದ್ದು ಸವದಿ

07:50 PM May 01, 2022 | Team Udayavani |

ರಬಕವಿ-ಬನಹಟ್ಟಿ; ರೈತರಂತೆ ನೇಕಾರ ಕಾರ್ಮಿಕರಿಗೂ ಹಾಗೂ ಇನ್ನೂಳಿದ ಕಾರ್ಮಿಕರಿಗೆ ಎಲ್ಲ ರೀತಿಯ ಸೌಲಭ್ಯಗಳು ದೊರೆಯುವಂತಾಗಲಿ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ನಾನು ಆಗ್ರಹಿಸುತ್ತೇನೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

Advertisement

ಅವರು ಸ್ಥಳೀಯ ಈಶ್ವರಲಿಂಗ ಮೈದಾನದಲ್ಲಿ ಕಾರ್ಮಿಕರ ದಿನಾಚರಣೆಯ ನಿಮಿತ್ತವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತ ಸಮ್ಮಾನ ಯೋಜನೆಯಂತೆ ನೇಕಾರ ಸಮ್ಮಾನ ಯೋಜನೆಯ ಅಡಿಯಲ್ಲಿ ನೇಕಾರರಿಗೆ ರೂ. ಮೂರು ಸಾವಿರ ನೀಡಲಾಗುತ್ತಿದ್ದು, ಈಗ ಅದನ್ನು ರೂ. ಐದು ಸಾವಿರಕ್ಕೆ ಹೆಚ್ಚಿಸಲು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದೇನೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ಸಂಘಟಿತ ಮತ್ತು ಅಸಂಘಟಿತ ಎಲ್ಲ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ದೊರೆಯುವಂತಾಗಬೇಕು. ಅಸಂಘಟಿತ ಕಾರ್ಮಿಕರನ್ನು ಸಂಘಟಿತ ಕಾರ್ಮಿಕ ವಲಯಕ್ಕೆ ಕರೆ ತರಬೇಕು. ಕಾರ್ಮಿಕ ಸಮೂಹದಿಂದಲೇ ದೇಶದ ಪ್ರಗತಿ ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಮಖಂಡಿಯ ಹಿರಿಯ ವಕೀಲರಾದ ಎನ್.ಎಸ್.ದೇವರವರ ಕಾರ್ಮಿಕ ಮುಖಂಡ ದಿ.ಮಲ್ಲಿಕಾರ್ಜುನ ಜುಮನಾಳ ಕುರಿತು ಮಾತನಾಡಿದರು.

Advertisement

ಕಾರ್ಮಿಕ ಜಯಂತಿಯ ನಿಮಿತ್ತವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

ಹಿಪ್ಪರಗಿಯ ಸಂಗಮೇಶ್ವರ ಮಠದ ಪ್ರಭು ಬೆನ್ನಾಳೆ ಮಹಾರಾಜರು, ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ವೇದಿಕೆಯ ಮೇಲೆ ನಗರಸಭೆಯ ಅಧ್ಯಕ್ಷ ಸಂಜಯ ತೆಗ್ಗಿ, ಸಾಹಿತಿ ಸಿದ್ಧರಾಜ ಪೂಜಾರಿ, ಶಿವಲಿಂಗ ಟಿರಕಿ, ಸಂಗಪ್ಪ ಕುಂದಗೋಳ, ನಿಂಗಪ್ಪ ಜುಮನಾಳ, ಪ್ರಭು ಕೋಪರ್ಡೆ, ಸುರೇಶ ಕಾಡದೇವರ, ಶ್ರೀಶೈಲ ಮೇಣಿ, ಸತ್ಯಪ್ಪ ಮಗದುಮ್ ಇದ್ದರು.

ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡರಾದ ಸದಾಶಿವ ಮುಂಡಗನೂರ, ಮಹಾಂತೇಶ ಬಸಪ್ಪಗೋಳ, ನಜೀರ್ ಜಮಾದಾರ, ಶಶಿಕಾಂತ ಬಾಬಾನಗರ, ಶಂಕರ ಕೊಣ್ಣೂರ, ಕುಮಾರ ಪಾವಟೆ, ಭೀಮಪ್ಪ ನಾವಿ ಮತ್ತು ವಿಜಯ ಚಿಂಚಖಂಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next