Advertisement

ನಾಮದೇವ ಸಿಂಪಿ ಸಮಾಜದ ಅಭಿವೃದ್ಧಿಗಾಗಿ ಬದ್ಧ : ಶಾಸಕ ಸಿದ್ದು ಸವದಿ

06:40 PM May 15, 2022 | Team Udayavani |

ರಬಕವಿ-ಬನಹಟ್ಟಿ: ನಾಮದೇವ ಸಿಂಪಿ ಸಮಾಜದ ಹಿರಿಯರು ಸಮಾಜದ ಅಭಿವೃದ್ಧಿಗಾಗಿ ಯಾವುದೆ ಕೆಲಸವನ್ನು ಹೇಳಿದರೂ ಅದನ್ನು ನಿರ್ವಹಿಸಲು ಸದಾ ಬದ್ಧನಾಗಿರುತ್ತೇನೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

Advertisement

ಭಾನುವಾರ ಅವರು ಸ್ಥಳೀಯ ಭದ್ರನವರ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯ ಮಟ್ಟದ ಬೃಹತ್ ವಧು ವರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ವಧು ವರರ ಸಮಾವೇಶದ ಜೊತೆಗೆ ಸಮಾಜದ ಸಮಾವೇಶ, ಸಮಾಜದ ಯುವಕರ ಸಮಾವೇಶಗಳು ಮತ್ತು ಸಮಾಜದ ಅಭವೃದ್ಧಿಯ ಚಿಂತನೆಗಳು ನಡೆಯಬೇಕು. ಸಂಘಟನೆಯಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ.

ನಾಮದೇವಿ ಸಿಂಪಿ ಸಮಾಜದವರು ಭಕ್ತಿ, ಸೇವೆ, ಸ್ನೇಹಮಯ ಸಹೋದರ ಭಾವನೆಯನ್ನು ಹೊಂದಿದವರರಾಗಿದ್ದೀರಿ. ಕೇವಲ ತಾವಷ್ಟೆ ಬೆಳೆಯದೆ ಇತರೆ ಸಮಾಜದ ಸಹಾಯಕ್ಕೂ ನಾಮದೇವ ಸಿಂಪಿ ಸಮಾಜದವರು ನಿಲ್ಲುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಗುರುಸಿದ್ಧೇಶ್ವರ ಸ್ವಾಮೀಜಿ ನುಡಿದರು.

ಕಾರ್ಯಕ್ರಮದಲ್ಲಿ ಹಿರೇಮಠದ ಶರಣಬಸವ ಶಿವಾಚಾರ್ಯರು, ಮಾಜಿ ಸಚಿವೆ ಉಮಾಶ್ರೀ, ಡಾ.ಪದ್ಮಜೀತನಾಡಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಕೋಪರ್ಡೆ ಮಾತನಾಡಿದರು. ಕೊಲ್ಲಾಪುರದ ಗುರುಬಾಪುಸಾ ಬಾಳಕೃಷ್ಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

Advertisement

ಇದನ್ನೂ ಓದಿ :ರಾಯಚೂರು: ವೈಟಿಪಿಎಸ್‌ನಲ್ಲಿ ಬೆಲ್ಟ್ ಗೆ ಸಿಲುಕಿ ಕಾರ್ಮಿಕ ಸಾವು

ವೇದಿಕೆಯ ಮೇಲೆ ಸಮಾಜದ ಗೌರವಾಧ್ಯಕ್ಷ ಪ್ರಭು ಕೋಪರ್ಡೆ, ಅಧ್ಯಕ್ಷ ಸದಾಶಿವ ಗೊಂದಕರ್, ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ ಖಮೀತಕರ್, ಬ್ರಿಜೇಶ ಕೋಪರ್ಡೆ, ಮಧಾವಾನಂದ ಕೋಪರ್ಡೆ ಇದ್ದರು.

ಗೀತಾ ಎಸ್. ಪ್ರಾರ್ಥಿಸಿದರು. ಡಾ.ಗೀತಾ ಗೊಂದಕರ್ ನಿರೂಪಿಸಿದರು. ಸುರೇಶ ಕೋಪರ್ಡೆ ವಂದಿಸಿದರು.

ಕಾರ್ಯಕ್ರಮದಲ್ಲಿ ಶ್ರೀಹರಿ ಪಿಸ್ಸೆ, ಮೇಘರಾಜ ಮಾಳವದೆ, ವಿವೇಕಾನಂದ ಭಸ್ಮೆ, ಡಾ, ಶ್ರೀನಾಥ ಖಮೀತಕರ್, ದೀಪಕ ಬಕರೆ, ಶ್ರೀಧರ ಪಾಸ್ತೆ, ಲಕ್ಷ್ಮಣ ಹುಲ್ಯಾಳ, ಶಿಲ್ಪಾ ಕೋಪರ್ಡೆ, ಸತ್ಯವಾನ ಬಕರೆ ಸೇರಿದಂತೆ ರಾಜ್ಯ ಹಾಗೂ ನೆರೆಯ ಮಹಾರಾಷ್ಟ್ರದಿಂದ ಆಗಮಿಸಿದ ನಾಮದೇವ ಸಿಂಪಿ ಸಮಾಜದ ಬಾಂಧವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next