Advertisement

ಅಕ್ಕಿ ಪ್ರಮಾಣ ಕತ್ತರಿ ಪ್ರಸ್ತಾಪಕ್ಕೆ ಸಿದ್ದು ಗರಂ

10:01 AM Jan 17, 2020 | Team Udayavani |

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ನೀಡು ತ್ತಿರುವ ಅಕ್ಕಿ ಪ್ರಮಾಣವನ್ನು ಕಡಿಮೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ನವ ದೆಹಲಿಯಲ್ಲಿ ಮಾತನಾಡಿ, ಅನ್ನಭಾಗ್ಯ ಯೋಜನೆ ಬಡವರಿಗಾಗಿ ಮಾಡಿರುವ ಯೋಜನೆ. 2.40 ಲಕ್ಷ ಕೋಟಿ ಬಜೆಟ್‌ನಲ್ಲಿ 4 ಸಾವಿರ ಕೋಟಿ ವೆಚ್ಚ ಮಾಡಲು ಸಾಧ್ಯವಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರ ಅಕ್ಕಿ ಕಡಿತ ಮಾಡಿದರೆ, ರಾಜ್ಯದ ಬಡವರು ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ. ನಮ್ಮ ಸರ್ಕಾರ ಬಂದಿದ್ದರೆ 10 ಕೆ.ಜಿ. ಅಕ್ಕಿ ಕೊಡುತ್ತಿದ್ದೆವು. ಬಡವರಿಗೆ ಉಚಿತ ಅಕ್ಕಿ ನೀಡಿದ್ದರಿಂದಲೇ ಪ್ರವಾಹ ಬಂದರೂ ಬಡವರು ಗುಳೆ ಹೋಗಲಿಲ್ಲ ಎಂದು ಹೇಳಿದರು.

ಅನ್ಯಭಾಗ್ಯ ಅಕ್ಕಿ 5 ಕೆ.ಜಿ.ಗೆ ಇಳಿಕೆ?: ಆಹಾರ ಇಲಾಖೆಯಿಂದ ಅನ್ನಭಾಗ್ಯ ಯೋಜನೆಯಲ್ಲಿ ನೀಡು ತ್ತಿರುವ ಅಕ್ಕಿ ಪ್ರಮಾಣ ಕಡಿಮೆ ಮಾಡುವ ಬಗ್ಗೆ ಸರ್ಕಾರ ವಿಸ್ತೃತ ಮಾಹಿತಿ ಪಡೆದುಕೊಂಡಿದ್ದು, ಅಕ್ಕಿ ಬದಲು ಎಣ್ಣೆ ಹಾಗೂ ತೊಗರಿ ಬೇಳೆ ಮತ್ತು ಉಪ್ಪು ನೀಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ತಕ್ಷಣ ಘೋಷಣೆ ಮಾಡಿ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಂತ್ಯೋದಯ ಕಾರ್ಡ್‌ ಹೊಂದಿರುವವರಿಗೆ ಪ್ರತಿ ಕುಟುಂಬಕ್ಕೆ 35 ಕೆ.ಜಿ. ಅಕ್ಕಿ ಹಾಗೂ ಬಿಪಿಎಲ್‌ ಕಾರ್ಡ್‌ದಾರರಿಗೆ ಪ್ರತಿ ವ್ಯಕ್ತಿಗೂ 7 ಕೆ.ಜಿ.ಯಂತೆ ಕುಟುಂಬದ ಎಲ್ಲ ಸದಸ್ಯರಿಗೂ ಉಚಿತ ಅಕ್ಕಿ ನೀಡಲಾಗುತ್ತಿದೆ.

ಉಳಿತಾಯದ ಲೆಕ್ಕಾಚಾರ: ರಾಜ್ಯ ಸರ್ಕಾರ ಉಚಿತ ವಾಗಿ ಏಳು ಕೆ.ಜಿ. ನೀಡುವ ಅಕ್ಕಿಯಲ್ಲಿ ಕೇಂದ್ರ ಸರ್ಕಾರ 5 ಕೆ.ಜಿ ಅಕ್ಕಿಯನ್ನು 3 ರೂ. ದರದಲ್ಲಿ ನೀಡುತ್ತದೆ. ಉಳಿದ 2 ಕೆ.ಜಿ. ಅಕ್ಕಿಯನ್ನು ರಾಜ್ಯ ಸರ್ಕಾರವೇ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 23 ರೂ. ನಂತೆ ಖರೀದಿಸಿ ಫ‌ಲಾನುಭವಿಗಳಿಗೆ ಉಚಿತವಾಗಿ ನೀಡುತ್ತಿದೆ.

Advertisement

ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸುವ 2 ಕೆ.ಜಿ. ಅಕ್ಕಿಯನ್ನು ಕಡಿಮೆ ಮಾಡಿದರೆ ರಾಜ್ಯ ಸರ್ಕಾರಕ್ಕೆ ವಾರ್ಷಿಕ ಸುಮಾರು 2 ಸಾವಿರ ಕೋಟಿ ರೂ. ಉಳಿಯಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ರಾಜ್ಯದಲ್ಲಿ 1.18 ಕೋಟಿ ಬಿಪಿಎಲ್‌ ಕಾರ್ಡ್‌ದಾ ರ ರಿದ್ದು, 7 ಕೆ.ಜಿ. ಅಕ್ಕಿ ನೀಡಿದರೆ ಪ್ರತಿ ವರ್ಷ 3,800 ಕೋಟಿ ರೂ. ವೆಚ್ಚವಾಗುತ್ತದೆ.

ಐದು ಕೆ.ಜಿ. ಅಕ್ಕಿ ನೀಡಿದರೆ ಇಲಾಖೆಗೆ ಪ್ರತಿ ತಿಂಗಳು 63 ಕೋಟಿ ರೂ. ವೆಚ್ಚವಾಗುತ್ತಿದ್ದು, ವಾರ್ಷಿಕ ಸುಮಾರು 756 ಕೋಟಿ ಮಾತ್ರ ವೆಚ್ಚವಾಗುತ್ತದೆ. ಅಕ್ಕಿ ಜತೆಗೆ ತೊಗರಿ ನೀಡಲು ತೀರ್ಮಾನಿಸಿದರೆ ಪ್ರತಿ ಕೆ.ಜಿ. ತೊಗರಿಗೆ ಮಾರುಕಟ್ಟೆಯಲ್ಲಿ 80 ಕೆ.ಜಿ. ದೊರೆಯುತ್ತಿದ್ದರೂ, ಪಡಿತರ ವ್ಯವಸ್ಥೆಯಡಿ ಸರ್ಕಾರ ತೊಗರಿ ಬೇಳೆ 38 ರೂ.ಗೆ ನೀಡುವ ಬಗ್ಗೆ ಆಲೋಚನೆ ನಡೆಸಿದೆ.

ಈ ಯೋಜನೆಗೆ ಸುಮಾರು ವಾರ್ಷಿಕ 600 ಕೋಟಿ ರೂ. ಹೆಚ್ಚುವರಿ ಹೊರೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ತಾಳೆ ಎಣ್ಣೆ ಹಾಗೂ ಉಪ್ಪು ನೀಡುವ ಬಗ್ಗೆಯೂ ಚಿಂತಿಸಿದ್ದು, ಪ್ರತಿ ಲೀಟರ್‌ ಎಣ್ಣೆಗೆ 45 ರೂ. ಹಾಗೂ ಪ್ರತಿ ಕೆ.ಜಿ. ಉಪ್ಪಿಗೆ 6 ರೂ.ದರದಲ್ಲಿ ನೀಡುವ ಬಗ್ಗೆ ಆಹಾರ ಇಲಾಖೆ ಮಟ್ಟದಲ್ಲಿ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next