Advertisement

ಸಿದ್ದು ಸರ್ಕಾರದ ಸಾಲಮನ್ನಾಕ್ಕೆ ಒತ್ತಾಯ

07:14 AM Jan 19, 2019 | Team Udayavani |

ಆಳಂದ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 2017-18ನೇ ಸಾಲಿನಲ್ಲಿ ಕೈಗೊಂಡ ಸಾಲಮನ್ನಾ ಹಣವನ್ನು ರೈತರ ಖಾತೆಗಳಿಗೆ ವಿಳಂಬ ಮಾಡದೇ ಕೂಡಲೇ ಜಮಾ ಮಾಡಬೇಕು ಎಂದು ಆಗ್ರಹಿಸಿ ಕರವೇ (ನಾರಾಯಣಗೌಡ ಬಣದ) ಪ್ರತಿಭಟನೆ ನಡೆಸಿತು.

Advertisement

ಪಟ್ಟಣದ ಡಿಸಿಸಿ ಬ್ಯಾಂಕ್‌ ಶಾಖೆ ಎದುರು ಶುಕ್ರವಾರ ಕರವೇ ತಾಲೂಕು ಅಧ್ಯಕ್ಷ ಲಕ್ಷ್ಮೀಕಾಂತ ಉದನೂರ ನೇತೃತ್ವದಲ್ಲಿ ಕಾರ್ಯಕರ್ತರು, ರೈತರು ಭಾಗವಹಿಸಿ ಕೂಡಲೇ ಮನ್ನಾ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿನ ಅನೇಕ ಸಹಕಾರಿ ಸಂಘಗಳು ಹಾಗೂ ಡಿಸಿಸಿ ಬ್ಯಾಂಕ್‌ ಶಾಖೆಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ 2017-18ನೇ ಸಾಲಿನಲ್ಲಿ ರೈತರ ಸಾಲಮನ್ನಾ ಮಾಡಿ ಹಣವನ್ನು ವರ್ಗಾವಣೆ ಮಾಡಿದರೂ ಬ್ಯಾಂಕ್‌ ಶಾಖೆಗಳ ವ್ಯವಸ್ಥಾಪಕರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ಆಕ್ರೋಶ ವ್ಯಕ್ತಪಡಿಸಿದರು.

ಸಾಲಮನ್ನಾ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡದೇ ಅನೇಕ ಬಾರಿ ಮೌಖೀಕವಾಗಿ ಮನವಿ ಮಾಡಿದರೂ ವ್ಯವಸ್ಥಾಪಕರು ಕ್ರಮ ಕೈಗೊಳ್ಳದೆ ಇರುವುದು ಅನುಮಾನಕ್ಕೆ ಎಡೆಮಾಡಿದೆ ಎಂದರು.

ತಾಲೂಕಿನ ಸರಸಂಬಾ, ಮುನ್ನಹಳ್ಳಿ, ಕೋಡಲಹಂಗರಗಾ, ರುದ್ರವಾಡಿ ಹಾಗೂ ರಿ ಇನ್ನಿತರ ಗ್ರಾಮಗಳಲ್ಲಿನ ರೈತರು ತಮ್ಮ ಖಾತೆಗೆ ಹಣ ಬಂದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಈ ಕುರಿತು ಎರಡ್ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ರಸ್ತೆ ತಡೆ ಸೇರಿದಂತೆ ಉಗ್ರ ಸ್ವರೂಪದ ಹೋರಾಟಕ್ಕೆ ನಡೆಸಲಾಗುವುದು ಎಂದು ಪ್ರತಿಭಟನಾ ನಿರತರು ಎಚ್ಚರಿಸಿದರು. ಪಿಎಸ್‌ಐ ಬಸವರಾಜ ರಂಜಳಕರ್‌ ಮಧ್ಯಸ್ಥಿಕೆಯಿಂದ ಬ್ಯಾಂಕ್‌ ಮೇಲ್ವಿಚಾರಕ ಚನ್ನಾರೆಡ್ಡಿ ಪಾಟೀಲಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಚನ್ನಾರೆಡ್ಡಿ, ಈಗಾಗಲೇ ಸಾಲಮನ್ನಾ ಪ್ರಕ್ರಿಯೆ ಚಾಲ್ತಿಯಲಿದ್ದು, ತಾಂತ್ರಿಕ ತೊಂದರೆಯಿಂದ ವಿಳಂಬವಾಗುತ್ತಿದೆ. ಎಲ್ಲ ಖಾತೆಗಳಿಗೆ ಸಾಲ ಮನ್ನಾ ಅನ್ವಯಿಸುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಾಲಾವಕಾಶ ನೀಡಬೇಕು ಎಂದು ಕೋರಿದರು. ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

Advertisement

ಮುಖಂಡ ಪ್ರಭುಲಿಂಗ ಬಿ. ಪೊಲೀಸ್‌ ಪಾಟೀಲ, ಆನಚಿದರಾಯ ಎಲ್‌. ಶೆಟ್ಟಿ, ಇಕ್ಬಾಲ್‌ ಬಿಲಗುಂದಿ, ಜಿಡಗಾ ಗ್ರಾಪಂ ಮಾಜಿ ಅಧ್ಯಕ್ಷ ಕಂಟು ಆರ್‌. ರಾಠೊಡ, ಶ್ರೀಶೈಲ ಮಲ್ಕಣ್ಣಾ, ಶರಣಬಸಪ್ಪ ಸಿದ್ರಾಮಪ್ಪಾ ಸಂಜುಕುಮಾರ ಮಲ್ಲಿನಾಥ ಇನ್ನಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next