Advertisement

ಪೂಜೆ ನಾನೇ ಮಾಡುವೆ ಎಂದಿದ್ದ ಸಿದ್ದು ನಾಪತ್ತೆ 

06:20 AM Oct 14, 2018 | |

ಹಾವೇರಿ: ದಸರಾದಲ್ಲಿ ಜೆಡಿಎಸ್‌ ಶಾಸಕರೇ ತುಂಬಿದ್ದಾರೆ. ಮತ್ತೂಂದು ದಸರಾ ಪೂಜೆ ನಾನೇ ಮಾಡುತ್ತೇನೆಂದು ಹೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕಾಣುತ್ತಿಲ್ಲ. ಅವರನ್ನು ಹುಡುಕಬೇಕಾಗಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದರು.

Advertisement

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇನ್ನೊಂದು ದಸರಾ ಪೂಜೆಯನ್ನು ನಾನೇ ಮಾಡುತ್ತೇನೆ ಎಂದಿದ್ದರು. ಈಗ ಅವರು ಎಲ್ಲಿದ್ದಾರೋ ಗೊತ್ತಿಲ್ಲ. ಅವರನ್ನು ಹುಡುಕಬೇಕಾಗಿದೆ. ಕಾಂಗ್ರೆಸ್‌ ಈಗ ಪ್ರಾದೇಶಿಕ ಪಕ್ಷದ ಸ್ಥಿತಿಗೆ ಬಂದಿದೆ. ಹೀಗಾಗಿ, ದೇಶದಲ್ಲಿ ನಮಗೊಂದು ಪ್ರತಿಪಕ್ಷ ಬೇಕಾಗಿದೆ. ಮಹಾಮೈತ್ರಿಯಿಂದ ಮಾಯಾವತಿ, ಅಖೀಲೇಶ್‌ ಯಾದವ್‌ ಹೊರಬಿದ್ದಿದ್ದಾರೆ. ರಾಹುಲ್‌ ಗಾಂಧಿ ದೇಶದೆಲ್ಲೆಡೆ ಓಡಾಡಲಿ. ಒಳ್ಳೆಯ ವಿರೋಧ ಪಕ್ಷ ಇರಬೇಕು ಎಂಬುದು ನಮ್ಮ ಆಸೆ ಎಂದರು.

ಶಿವಮೊಗ್ಗ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳೇ ಇಲ್ಲ. ಕಾಂಗ್ರೆಸ್‌ನವರಿಗೆ ವಯಸ್ಸಾಗಿದೆ, ಜತೆಗೆ ಹಣ ಇಲ್ಲ. ಹೀಗಾಗಿ ಚುನಾವಣೆಗೆ ನಿಲ್ಲಲು “ನಾ ಒಲ್ಲೆ, ನೀ ಒಲ್ಲೆ’ ಎನ್ನುತ್ತಿದ್ದಾರೆ. ದೇವೇಗೌಡರು ಮಧು ಬಂಗಾರಪ್ಪನನ್ನು ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಆದರೆ, ಅವರು ನಾಮಪತ್ರ ಸಲ್ಲಿಸುವ ಕೊನೆ ದಿನದವರೆಗೂ ವಿದೇಶಿ ಪ್ರವಾಸದಲ್ಲಿದ್ದಾರೆ. ಹಾಗಾಗಿ, ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ವೈ ಪುತ್ರ ರಾಘವೇಂದ್ರ ಗೆಲುವು ಖಚಿತ. ಇನ್ನೆರಡು ತಿಂಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಅ ಧಿಕಾರಕ್ಕೆ ಬರುವುದು ಖಚಿತ. ಬಿಎಸ್‌ವೈ ಮುಖ್ಯ ಮಂತ್ರಿ ಯಾಗುವುದು ನಿಶ್ಚಿತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next