Advertisement
ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಮಲ್ಲಣ್ಣ ಮೂಲಿಮನಿ, ಡಆ.ಅರವಿಂದ ಪಾಟೀಲ ಭಾನುವಾರ ಬೆಳಿಗ್ಗೆ ಗಂಜಿ ಸೇವಿಸಿದ್ದು, ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಸಹಜ ಉಸಿರಾಟವಿದ್ದು, ನಾಡಿ ಬಡಿತ, ರಕ್ತದ ಒತ್ತಡವೆಲ್ಲ ಸಹಜವಾಗಿದೆ.ಶನಿವಾರ ಆಕ್ಸಿಜನ್ ಕಡಿಮೆಯಾಗಿತ್ತು, ಇದೀಗ ಸಹಜವಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
Related Articles
Advertisement
ಈ ಕುರಿತು ಜ್ಞಾನಯೋಗಾಶ್ರಮದ ಭಕ್ತರಿಗೆ ಸಂದೇಶ ನೀಡಿರುವ ಸುತ್ತೂರು ಶ್ರೀಗಳು, ಸಿದ್ಧೇಶ್ವರ ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಪಲ್ಸ್‍ರೇಟ್ ಸಾಮಾನ್ಯಾಗಿದ್ದು, ರಕ್ತದ ಒತ್ತಡವೂ ಸಹಜ ಸ್ಥಿತಿಯಲ್ಲಿದೆ. ಆಹಾರ ಸೇವನೆ ನಿರಾಕರಿಸುತ್ತಿರುವ ಕಾರಣ ಸಮಸ್ಯೆ ನಿಶಕ್ತಿ ಇದೆ ಎಂದು ವಿವರಿಸಿದ್ದಾರೆ.
ಶ್ರೀಗಳ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ವೈದ್ಯಕೀಯ ಪಂಡಿತರ ಜೊತೆಗೆ ಚರ್ಚೆ ನಡೆಸಿದ್ದೇವೆ. ಆರೋಗ್ಯ ಸ್ಥಿರ ಊಹಾಪೂಹ ಬೇಡ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಶ್ರೀಗಳ ಆರೋಗ್ಯ ವಿಚಾರಿಸಲು ಬಂದಿದ್ದಾಗ ಜಿಲ್ಲಾಡಳಿತಕ್ಕೆ ವಿಶೇಷ ಕಾಳಜಿ ತೋರಲು ಸೂಚಿಸಿದ್ದಾರೆ. ಪರಿಣಾಮ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳಂಥ ಉನ್ನತ ಮಟ್ಟದ ಅಧಿಕಾರಿಗಳ ಓಡಾಟ ಒಂದು ಸಾಮಾನ್ಯ ಪ್ರಕ್ರಿಯೆ ಅಷ್ಟೇ ಎಂದು ಸಮಜಾಯಿಸಿ ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಖುದ್ದು ದರ್ಶನ ಪಡೆದು, ಶ್ರೀಗಳ ಆರೋಗ್ಯ ವಿಚಾರಿಸಿದ್ದು, ಪ್ರಧಾನಿ ಮೋದಿ ಅವರೂ ಶ್ರೀಗಳ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಲು ಹೇಳಿದ್ದಾರೆ. ದರ್ಶನದ ಬಳಿಕ ಶ್ರೀಗಳ ಚೈತನ್ಯ ಕಂಡು ತಮಗೆ ಖುಷಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದರು.
ಆಹಾರ ಸೇವನೆಗೆ ನಿರಾಕರಿಸುತ್ತಿರುವ ಶ್ರೀಗಳು ಹೆಚ್ಚಿನ ಚಿಕಿತ್ಸೆಗೂ ಒಪ್ಪುತ್ತಿಲ್ಲ. ಹೀಗಾಗಿ ಸಹಜವಾಗಿ ನಿಶಕ್ತತೆ ಕಂಡು ಬಂದಿದೆ. ಇದರ ಹೊರತಾಗಿ ಶ್ರೀಗಳ ಆರೋಗ್ಯದಲ್ಲಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಶಿವರಾತ್ರಿ ದೇಶಿಕೇಂದ್ರರು ಸ್ಪಷ್ಟಪಡಿಸಿದ್ದಾರೆ.
ಸಿಎಂ ಸೂಚನೆ ಮೇರೆಗೆ ಜಿಲ್ಲಾಡಳಿತ ನಿಗಾ : ಡಿಸಿ ಸ್ಪಷ್ಟನೆಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಜಿಲ್ಲಾಡಳಿತ ಆಶ್ರಮದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಲು ಆಗಮಿಸಿದ್ದಾರೆ. ಹೀಗಾಗಿ ವದಂತಿ ಹಬ್ಬಿಸಬೇಡಿ ಎಂದು ಜಿಲ್ಲಾಧಿಕಾರಿ ಡಾ.ವಿ.ಬಿ.ದಾನಮ್ಮನವರ ಮನವಿ ಮಾಡಿದ್ದಾರೆ. ಕೆಲವು ಮಾಧ್ಯಮಗಳಲ್ಲಿ ತಪ್ಪು ಸಂದೇಶ ಬಂದಿರುವುದರಿಂದ ಈ ಸ್ಪಷ್ಟೀಕರಣ ನೀಡುತ್ತಿದ್ದೇವೆ. ಶ್ರೀಗಳ ಆರೋಗ್ಯದ ವಿಷಯದಲ್ಲಿ ತಪ್ಪು ಸಂದೇಶ ಬೇಡ.ಶನಿವಾರ ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಶ್ರೀಗಳ ದರ್ಶನ ಪಡೆದು, ಆರೋಗ್ಯ ವಿಚಾರಿಸಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿಗಳ ಶ್ರೀಗಳ ಆರೋಗ್ಯದ ಬಗ್ಗೆ ನಿಗಾ ಇರಿಸಿದ್ದು, ಸರ್ಕಾರಕ್ಕೆ ಮಾಹಿತಿ ನೀಡಲು ಆಶ್ರಮಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಹೀಗಾಗಿ ಜಿಲ್ಲಾಡಳಿತದ ಅಧಿಕರಿಗಳ ಭೇಟಿಗೆ ತಪ್ಪು ಅರ್ಥ ಕಲ್ಪಿಸಿಕೊಳ್ಳಬೇಡಿ ಎಂದು ಭಕ್ತರಲ್ಲಿ ಮನವಿ ಮಾಡಿದ್ದಾರೆ. ಸುಳ್ಳುಸುದ್ದಿ ನಂಬಬೇಡಿ: ಎಸ್ಪಿ
ಆತಂಕದಲ್ಲಿರುವ ಭಕ್ತರು ಜ್ಞಾನಯೋಗಾಶ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಹೀಗಾಗಿ ವಾಹನ ದಟ್ಟಣೆ, ಜನಸಂದಣಿಯನ್ನು ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಹೀಗಾಗಿ ಸುಳ್ಳುಸುದ್ದಿ ನಂಬಬೇಡಿ ಎಂದು ಎಸ್ಪಿ ಆನಂದಕುಮಾರ ಸ್ಪಷ್ಟಪಡಿಸಿದ್ದಾರೆ. ಸುಳ್ಳು ಸುದ್ದಿಗಳಿಂದಾಗಿ ತಪ್ಪು ಸಂದೇಶಗಳು ಹರಿದಾಡಿ ಭಕ್ತರಲ್ಲಿ ಆತಂಕ ಮನೆ ಮಾಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತು ಆಗಮಿಸುತ್ತಿರುವ ಕಾರಣ ಸಂಚಾರ ಸಮಸ್ಯೆ ಸೃಷ್ಟಿಯಾಗಿದ್ದು, ಅದನ್ನು ನಿಯಂತ್ರಿಸಲು ಭಕ್ತರ ಅನುಕೂಲಕ್ಕಾಗಿ ಸಹಜವಾಗಿ ಪೊಲೀಸ್ ಬಲವನ್ನು ಹೆಚ್ಚಿಸಲಾಗಿದೆ. ಇದರ ಹೊರತಾಗಿ ಭಕ್ತರು ಆತಂಕ ಪಡುವ ಯಾವುದೇ ಬೆಳವಣಿಗೆ ನಡೆದಿಲ್ಲ. ಶ್ರೀಗಳು ಆರೋಗ್ಯವಾಗಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.