Advertisement

ಸಿದ್ಧಾರ್ಥ ಚಿತ್ರಮಂದಿರ ಇನ್ನು ನೆನಪು ಮಾತ್ರ

03:01 PM Apr 21, 2021 | Team Udayavani |

ಮಂಡ್ಯ: ಆಗಿನ ಡಾ.ರಾಜ್‌ಕುಮಾರ್‌, ಡಾ.ವಿಷ್ಣುವರ್ಧನ್‌,ಡಾ.ಅಂಬರೀಷ್‌, ರವಿಚಂದ್ರನ್‌, ಶಿವರಾಜ್‌ಕುಮಾರ್‌,ಪುನೀತ್‌, ಸುದೀಪ್‌, ದರ್ಶನ್‌, ಯಶ್‌ ಸೇರಿದಂತೆ ನಾಯಕನಟರ ಚಿತ್ರಗಳು ಶತ ದಿನೋತ್ಸವ ಕಂಡಿದ್ದ ಸಿದ್ಧಾರ್ಥ ಚಿತ್ರಮಂದಿರ ಈಗ ನೆನಪು ಮಾತ್ರ. ಕೊರೊನಾ ಸಂಕಷ್ಟ ಹಾಗೂ ಪ್ರೇಕ್ಷಕರ ಕೊರತೆಯಿಂದ ಮಂಡ್ಯದ ಸುಭಾಷ್‌ನಗರದ ಹೃದಯ ಭಾಗದ ಅವಳಿ ಚಿತ್ರಮಂದಿರಗಳಾದ ಸಂಜಯ ಹಾಗೂ ಸಿದ್ಧಾರ್ಥ ಚಿತ್ರಮಂದಿರಗಳಪೈಕಿ ಸಿದ್ಧಾರ್ಥ ಚಿತ್ರಮಂದಿರ ನೆಲಸಮಗೊಂಡಿದ್ದು,ಮಾಲ್‌ ನಿರ್ಮಾಣಕ್ಕೆ ಮಾಲಿಕರು ಮುಂದಾಗಿದ್ದಾರೆ.

Advertisement

ರಾಜ್‌, ಶಂಕರ್‌, ವಿಷ್ಣು, ಅಂಬಿ ಚಿತ್ರಗಳೇ ಹೆಚ್ಚುಪ್ರದರ್ಶನ: ಸಿದ್ಧಾರ್ಥ ಚಿತ್ರಮಂದಿರದಲ್ಲಿ ಡಾ.ರಾಜ್‌ಕುಮಾರ್‌, ಶಂಕರ್‌ನಾಗ್‌, ವಿಷ್ಣುವರ್ಧನ್‌, ಅಂಬರೀಷ್‌ಸಿನಿಮಾಗಳೇ ಬಹುತೇಕ ಹೆಚ್ಚು ಪ್ರದರ್ಶನ ಕಂಡಿದ್ದವು.ಎಲ್ಲವೂ ಸೂಪರ್‌ ಹಿಟ್‌ ಚಿತ್ರಗಳು. ವರ್ಷಕ್ಕೆ ಡಾ.ರಾಜ್‌ಕುಮಾರ್‌ ಅವರ ಮೂರು ಚಿತ್ರ ಪ್ರದರ್ಶನ ಕಾಣುತ್ತಿದ್ದವು.

ಎಲ್ಲರವೂ 100 ದಿನಕ್ಕಿಂತಲೂ ಹೆಚ್ಚು ಪ್ರದರ್ಶನ ಕಂಡಿವೆ.ರಾಜ್‌ಕುಮಾರ್‌, ಶಂಕರ್‌ನಾಗ್‌, ವಿಷ್ಣುವರ್ಧನ್‌,ಅಂಬರೀಷ್‌ ಚಿತ್ರಗಳ ಪ್ರದರ್ಶನ ಮಾಡಲು ಚಿತ್ರಮಂದಿರಗಳಿಗೆ ಪೈಪೋಟಿ ಎದುರಾಗಿದ್ದರೂ, ಹೆಚ್ಚುಚಿತ್ರಗಳು ಸಿದ್ಧಾರ್ಥ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿವೆ

ಶತದಿನೋತ್ಸವ ಕಂಡ ದಿಗ್ಗಜರ ಚಿತ್ರಗಳು

ಡಾ.ರಾಜ್‌ಕುಮಾರ್‌, ಶಂಕರ್‌ನಾಗ್‌, ಡಾ.ವಿಷ್ಣುವರ್ಧನ್‌, ಡಾ.ಅಂಬರೀಷ್‌, ರವಿಚಂದ್ರನ್‌,ಶಿವರಾಜ್‌ಕುಮಾರ್‌ ಸೇರಿದಂತೆ ಆಗಿನ ದಿಗ್ಗಜರಸಿನಿಮಾಗಳು ಹಾಗೂ ಈಗಿನ ಪುನೀತ್‌, ದರ್ಶನ್‌,ಸುದೀಪ್‌, ಯಶ್‌ರಂಥ ಸ್ಟಾರ್‌ ನಟರ ಚಿತ್ರಗಳು ಶತದಿನೋತ್ಸವ ಕಂಡಿವೆ.

Advertisement

ಶ್ರೀನಿವಾಸ ಕಲ್ಯಾಣ,ಇಂದ್ರಜಿತ್‌, ಒಡಹುಟ್ಟಿದವರು, ಆನಂದ್‌, ಸುಪ್ರಭಾತ, ರಾಮಾಚಾರಿ, ನಾಗರಹಾವು, ಯಜಮಾನ,ಕೋಟಿಗೊಬ್ಬ, ಗಜ, ಮೈ ಆಟೋಗ್ರಾಫ್‌, ಮೌರ್ಯ,ರಾಜಾಹುಲಿ, ಕಿರಾತಕ, ತಮಿಳಿನ ರಜನಿಕಾಂತ್‌ನಟನೆಯ ಪಡಿಯಪ್ಪ 5 ವಾರ ಪ್ರದರ್ಶನ ಕಂಡಿತ್ತು.ಈ ಹಿಂದೆ ಯಾವುದೇ ಸಿನಿಮಾ ಬಿಡುಗಡೆಯಾದರೆ,ಕುಟುಂಬ ಸಮೇತರಾಗಿ ಬಂದು ಚಿತ್ರ ವೀಕ್ಷಿಸುತ್ತಿದ್ದರು.ರಾಜ್‌ಕುಮಾರ್‌, ಶಂಕರ್‌ನಾಗ್‌, ವಿಷ್ಣುವರ್ಧನ್‌,ಅಂಬರೀಷ್‌ ಅವರ ಚಿತ್ರಗಳಿಗೆ ಮಹಿಳೆಯರು ಹೆಚ್ಚಿನಸಂಖ್ಯೆಯಲ್ಲಿ ಬರುತ್ತಿದ್ದರು.

ಈಗ ಆ ವಾತಾವರಣವಿಲ್ಲ.ಈಗೇನಿದ್ದರೂ ವಿದ್ಯಾರ್ಥಿಗಳು, ಮಧ್ಯ ವಯಸ್ಕಪ್ರೇಕ್ಷಕರ ಮೇಲೆ ಚಿತ್ರಮಂದಿರಗಳು ಅವಲಂಬಿತವಾಗಿವೆ ಎನ್ನುತ್ತಾರೆ ಮಾಲಿಕರಾದ ಮಹೇಶ್‌.

ಟಿವಿ, ಒಟಿಟಿ, ಅಮೆಜಾನ್‌ನಿಂದ ಚಿತ್ರಮಂದಿರಗಳು ಖಾಲಿ

ಒಂದು ಸ್ಟಾರ್‌ ನಟನ ಚಿತ್ರ ಬಿಡುಗಡೆಯಾದರೆ 100 ದಿನ ಪ್ರದರ್ಶನ ಕಾಣುತ್ತಿತ್ತು. ಆದರೆ, ಇಂದು ಬಿಡುಗಡೆಯಾದ ಎರಡೇವಾರಕ್ಕೆ ಟಿವಿ, ಒಟಿಟಿ, ಅಮೆಜಾನ್‌ಗೆ ನೀಡುತ್ತಿರುವು ದರಿಂದಚಿತ್ರಮಂದಿರಗಳಿಗೆ ಜನ ಬರುತ್ತಿಲ್ಲ. ಪ್ರತಿದಿನ 5ರಿಂದ 10 ಮಂದಿಪೇಕ್ಷಕರಿರುತ್ತಾರೆ. ಇದರಿಂದ ಚಿತ್ರಮಂದಿರಗಳು ಖಾಲಿಯಾಗಿರುತ್ತವೆ. ಆರ್ಥಿಕ ಸಂಕಷ್ಟ ಸರಿದೂಗಿಸಲು ಕಷ್ಟವಾಗುತ್ತಿದೆ.

ಕೊರೊನಾ ಸಂಕಷ, ಪ್ರೇಕ್ಷಕರ ಕೊರತೆ

ಪ್ರಸ್ತುತ ದಿನಗಳಲ್ಲಿ ಕೊರೊನಾ ಸಂಕಷ್ಟ ಒಂದೆಡೆಯಾದರೆ, ಪ್ರೇಕ್ಷಕರಕೊರತೆ ಮತ್ತೂಂದೆಡೆ ಕಾಡುತ್ತಿದೆ. ಚಿತ್ರಮಂದಿರ ಚಿಕ್ಕದಾಗಿರುವುದರಿಂದ ದೊಡ್ಡ ಬಜೆಟ್‌ನ ಸ್ಟಾರ್‌ ನಟರ ಸಿನಿಮಾಗಳನ್ನು ಕೊಡಲುನಿರ್ಮಾಪಕರು ಹಿಂದೇಟು ಹಾಕುತ್ತಾರೆ. ಹಿಂದೆ ಒಂದು ಸಿನಿಮಾನೂರು ದಿನ, 25 ವಾರ, ಒಂದು ವರ್ಷದವರೆಗೂ ಪ್ರದರ್ಶನಕಾಣುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಕಳೆದವರ್ಷದಿಂದ ಕೊರೊನಾದಿಂದ ಪ್ರೇಕ್ಷಕರ ಕೊರತೆ ಹೆಚ್ಚಾಗಿದೆ.

ನಮಗೂ ನೋವಿದೆ: ಮಾಲಿಕಕೊರೊನಾ ಸಂಕಷ್ಟ ಹಾಗೂ ಪ್ರೇಕ್ಷಕರಕೊರತೆಯಿಂದ ಚಿತ್ರಮಂದಿರ ತೆರವುಗೊಳಿಸಿ,ಮಾಲ್‌ ಮಾಡಲು ಮುಂದಾಗಿದ್ದೇವೆ.ಡಾ.ರಾಜ್‌ಕುಮಾರ್‌ ಅವರ ಕಾಲದಿಂದಲೇಬೆಳ್ಳಿ ಪರದೆಗಳು ಹುಟ್ಟಿಕೊಂಡವು. ದಿಗ್ಗಜರಸಿನಿಮಾಗಳಿಂದ ನಾವೆಲ್ಲರೂ ಈ ಮಟ್ಟಕ್ಕೆಬೆಳೆಯಲು ಸಾಧ್ಯವಾಗಿದೆ. ಆದರೆ, ಪ್ರಸ್ತುತದಿನಗಳಲ್ಲಿ ಆ ಪರಿಸ್ಥಿತಿ ಇಲ್ಲ. ಹೀಗಾಗಿ ಬದಲಾವಣೆ ಮಾಡಲುಮುಂದಾಗಿದ್ದೇನೆ. ಚಿತ್ರಮಂದಿರ ನೆಲಸಮ ಮಾಡುತ್ತಿರುವುದು ನೋವುತಂದಿದೆ. ಆದರೆ ಕಾಲಕ್ಕೆ ತಕ್ಕಂತೆ ನಾವೂ ಬದಲಾಗಬೇಕಿದೆ ಎಂದುಸಿದ್ಧಾರ್ಥ ಚಿತ್ರಮಂದಿರ ಮಾಲಿಕರಾದ ಮಹೇಶ್‌ ತಿಳಿಸಿದ್ದಾರೆ.

 

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next