Advertisement

ಕೆರೆಯಂತಾಗುವ ಸಿದ್ಧಾಪುರ ಕಾಲೇಜ್‌

04:44 PM Sep 08, 2022 | Team Udayavani |

ಸಿದ್ದಾಪುರ: ಗ್ರಾಮದ ಸರಕಾರಿ ಸಂಯುಕ್ತ ಪಪೂ ಕಾಲೇಜು (ಹೈಸ್ಕೂಲ್‌) ಆವರಣ ಮಳೆಗಾಲದ ನಾಲ್ಕು ತಿಂಗಳ ಕಾಲ ಸಂಪೂರ್ಣ ಜಲಾವೃತವಾಗಿ ಕೆರೆಯಂಗಳದಂತಾಗುತ್ತದೆ. ಈ ಸ್ಥಿತಿ ಬಗ್ಗೆ ಇಲ್ಲಿವರೆಗೆ ಆಡಳಿತ ನಡೆಸಿದ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಗಮನ ಹರಿಸದೇ ಇರುವುದು ವಿಪರ್ಯಾಸ.

Advertisement

ಗ್ರಾಮದಲ್ಲಿ 1994ರಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಮೊದಲಿಗೆ ಸರಕಾರಿ ಪ್ರೌಢಶಾಲೆ ಆರಂಭವಾಯಿತು. ಕೆಲ ವರ್ಷಗಳ ಬಳಿಕ ಇದೇ ಆವರಣದಲ್ಲಿ ಸರಕಾರಿ ಪಪೂ ಕಾಲೇಜು ಆರಂಭವಾಗಿದ್ದರಿಂದ ಸರಕಾರಿ ಸಂಯುಕ್ತ ಪಪೂ ಕಾಲೇಜು ಆಗಿ ಮರು ನಾಮಕರಣಗೊಂಡಿತು. ಇದೆ ಆವರಣದಲ್ಲೇ ಕಸ್ತೂರಿಬಾ ಗಾಂಧಿ ಮೈನಾರಿಟಿ ವಿದ್ಯಾರ್ಥಿನಿಯರ ವಸತಿ ಶಾಲೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯ ಸೇರಿಕೊಂಡಂತೆ ಒಟ್ಟು ಸಾವಿರಾರು ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಿದೆ.

1994ರಿಂದ ಶಾಲೆ ಆರಂಭವಾದಾಗಿನಿಂದ ಇಂತಹದ್ದೆ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳು, ಶಿಕ್ಷಕರು ಕೆಸರು ನೀರಿನಲ್ಲೇ ಎದ್ದು, ಬಿದ್ದು ಕೊಠಡಿ ಪ್ರವೇಶಿಸಬೇಕು. ಆವರಣದಲ್ಲಿ ನಿತ್ಯ ನಡೆಯಬೇಕಾಗಿದ್ದ ಪ್ರಾರ್ಥನೆ ನಡೆಯದಂತಾಗಿದೆ.

ಸಣ್ಣ ಗಟಾರು: ಸಂಗ್ರಹಗೊಂಡ ನೀರನ್ನು ಹೊರ ಕಳಿಸಲು ಒಂದೇ ಸಣ್ಣ ಗಟಾರ್‌ ಇದೆ. ಈ ಸಣ್ಣ ಗಟಾರ ಮೂಲಕವೇ ನೀರು ಹೊಗಬೇಕು. ಕೆಲವೊಮ್ಮೆ ಇದು ಬಂದಾಗಿರುತ್ತದೆ. ಆಗ ಮಳೆ ಭೂಮಿಯಲ್ಲಿ ಇಂಗುವವರೆಗೂ ನೀರು ಕಡಿಮೆಯಾಗಲ್ಲ. ಸಂಬಂ ಧಿಸಿದ ಜನಪ್ರತಿನಿಧಿ ಗಳು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒತ್ತಾಯಿಸಿದ್ದಾರೆ.

ಇದಕ್ಕೆ ಶಾಶ್ವತ ಪರಿಹಾರ ಅಂದ್ರೆ ಡ್ರೈನೆಜ್‌ ಮಾಡಬೇಕು ಅಥವಾ ಆವರಣ ತುಂಬ ಮಣ್ಣು ಹಾಕಬೇಕು. ಡ್ರೈನೇಜ್‌ ಮಾಡಲು ಅನುಮತಿ ಸಿಕ್ಕಿಲ್ಲ. ಮಣ್ಣು ಹಾಕಲು ಸುಮಾರು 20 ಲಕ್ಷಕ್ಕೂ ಅಧಿಕ ವೆಚ್ಚವಾಗುತ್ತದೆ. ಅಷ್ಟೊಂದು ಅನುದಾನ ಗ್ರಾಪಂಯಿಂದ ಕೊಡಲು ಬರುವುದಿಲ್ಲ. ಹೀಗಾಗಿ ತಾಪಂ ಇಒ ಅವರಿಗೆ ಇಲ್ಲಿಯ ಸಮಸ್ಯೆ ಗಮನಕ್ಕೆ ತರಲಾಗಿದೆ. ಅವರು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಉತ್ತಮವಾಗಿ ಸ್ಪಂದಿಸಿದ್ದಾರೆ.  –ಸಾಯಿನಾಥ, ಸಿದ್ದಾಪುರ ಗ್ರಾಪಂ ಪಿಡಿಒ

Advertisement

ಶಿಕ್ಷಣ ಇಲಾಖೆಯಿಂದ ಮೈದಾನ ಸೇರಿದಂತೆ ಇತರ ಅಭಿವೃದ್ಧಿ ಕೆಲಸ ಕೈಗೊಳ್ಳುವುದಕ್ಕೆ ಯಾವುದೇ ವಿಶೇಷ ಅನುದಾನವಿಲ್ಲ. ಗ್ರಾಪಂನಿಂದ ನರೇಗಾದಡಿ ಮೈದಾನ ಅಭಿವೃದ್ಧಿ ಮಾಡಬೇಕಾಗುತ್ತದೆ. ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ತಾಪಂ ಇಒ ಅವರ ಗಮನಕ್ಕೆ ತಂದು ಮೈದಾನ ಅಭಿವೃದ್ಧಿಪಡಿಸಲು ಗಮನ ಹರಿಸುತ್ತೇನೆ.  –ಸೋಮಶೇಖರಗೌಡ ಪಾಟೀಲ, ಬಿಇಒ, ಗಂಗಾವತಿ

ಶಾಲೆ ಆರಂಭವಾದಾಗಿನಿಂದಲೂ ಪ್ರತಿ ಮಳೆಗಾಲದಲ್ಲೂ ಇದೇ ಪರಿಸ್ಥಿತಿ ಎದುರಾಗುತ್ತದೆ. ಈ ಬಗ್ಗೆ ಸಾಕಷ್ಟು ಬಾರಿ ಗ್ರಾಪಂಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ನಿಮ್ಮ ಇಲಾಖೆ ಮೇಲಾ ಧಿಕಾರಿಗಳಿಗೆ ಪತ್ರ ಬರೆದುಕೊಳ್ಳಿ ಎಂದು ಉತ್ತರಿಸುತ್ತಾರೆ. –ಖಾಸಿಂಸಾಬ್‌, ಉಪ ಪ್ರಾಚಾರ್ಯ

-ಸಿದ್ದನಗೌಡ ಹೊಸಮನಿ

Advertisement

Udayavani is now on Telegram. Click here to join our channel and stay updated with the latest news.

Next