Advertisement
ಗುರುವಾರ ನಗರದ ಎ.ಐಟಿ ವೃತ್ತದ ತರಳುಬಾಳು ಭವನದ ಆವರಣದಲ್ಲಿ ಆಯೋಜಿಸಿದ್ದ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಯವರ 2ನೇವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಾಡಿನಲ್ಲಿ ಲಕ್ಷಾಂತರ ಜನರಿಗೆ ಮಠದಲ್ಲಿ ನಿರಂತರವಾಗಿಅನ್ನದಾಸೋಹ, ಜ್ಞಾನ ದಾಸೋಹದ ಮೂಲಕ ನಾಡಿನ ಸಮೃದ್ಧಿಗಾಗಿ ಶ್ರಮಿಸಿದ ಶ್ರೀ ಶಿವಕುಮಾರ ಸ್ವಾಮೀಜಿಗಳ ಬದುಕು ನಮ್ಮೆಲ್ಲರಿಗೂಆದರ್ಶ. ಬಸವಣ್ಣನವರ ತತ್ವ, ಚಿಂತನೆಗಳನ್ನು ಪರಿಪಾಲಿಸುವ ಮೂಲಕ ಜಾತಿ, ಧರ್ಮ, ಬೇಧವಿಲ್ಲದೇ ಎಲ್ಲಾ ವರ್ಗದ ಮಕ್ಕಳಿಗೂ ಉಚಿತವಾಗಿ ಶಿಕ್ಷಣ ನೀಡುವ ಮೂಲಕ ನಾಡಿಗೆ ಮಾದರಿಯಾದವರು ಎಂದರು.
Related Articles
Advertisement
ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ. ತಮ್ಮಯ್ಯ ಮಾತನಾಡಿ, 12ನೇ ಶತಮಾನದ ಬಸವಣ್ಣನವರ ವಚನಗಳ ರೂಪವನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದ ಶ್ರೀಗಳು ಸದಾಕಾಲ ಅಜರಾಮರ ಎಂದ ಅವರು, ನಗರದ ಹಿರೇಮಗಳೂರಿನಿಂದ ಎ.ಐ.ಟಿ ವೃತ್ತದವರೆಗೆ ರೂ.28ಕೋಟಿ ವೆಚ್ಚದಲ್ಲಿ ನಾಲ್ಕುಪಥದ ರಸ್ತೆ ನಿರ್ಮಾಣವಾಗಲಿದ್ದು ಮುಂದಿನ ದಿನಗಳಲ್ಲಿ ಆ ರಸ್ತೆಗೆ ಸಿದ್ಧªಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಹೆಸರಿಸಡಲು ನಿರ್ಧರಿಸಲಾಗಿದ್ದು ಈ ಬಗ್ಗೆ ನಗರಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು.
ಬೀಕನಹಳ್ಳಿ ಗ್ರಾಪಂ ಸದಸ್ಯ ಮಂಜೇಗೌಡ ಮಾತನಾಡಿ, ರಾಜ್ಯದ ಸಮೃದ್ಧಿಗಾಗಿ ನಿರಂತರ ಧ್ಯಾನ, ಆಧ್ಯಾತ್ಮದ ಮೂಲಕ ಪ್ರಾರ್ಥಿಸಿದ ಶ್ರೀಗಳು ಸದಾ ಕಾಲ ನಮ್ಮೆಲ್ಲರ ಮನದಲ್ಲಿ ನೆಲೆಸಿದ್ದಾರೆ ಎಂದರು. ಸಾಹಿತಿ ಹಾಗೂ ಉಪನ್ಯಾಸಕ ತಿಪ್ಪೇರುದ್ರಪ್ಪ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ಬಸವರಾಜ್, ರಾಜಶೇಖರ್, ಡಾ| ಮುರಳೀಧರ್, ಮಂಜುನಾಥ್, ಚಂದ್ರಪ, ರಾಜಣ್ಣಇದ್ದರು. ಭಾರತಿ ಶಿವರುದ್ರಪ್ಪ ಸ್ವಾಗತಿಸಿದರು. ಭರತ್ ನಿರೂಪಿಸಿದರು.
ಇದನ್ನೂ ಓದಿ : ರಾಜ್ಯದಲ್ಲಿ ಈವರೆಗೆ 1.38 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ: ಡಾ.ಕೆ.ಸುಧಾಕರ್