ವಿಜಯಪುರ: ಸಿದ್ದೇಶ್ವರ ಶ್ರೀಗಳ ಆಶಯದಂತೆ ನಗರದಲ್ಲಿರುವ ಜ್ಞಾನಯೋಗಾಶ್ರಮದಲ್ಲಿ ಶ್ರೀಗಳ ಅಂತ್ಯ ಸಂಸ್ಕಾರಕ್ಕಾಗಿ ನಿರ್ಮಿಸಿದ್ದ ತಾತ್ಕಾಲಿಕ ಚಿತಾಕಟ್ಟೆಯನ್ನು ತೆರವುಗೊಳಿಸಲಾಗಿದೆ. ಭಾನುವಾರ ಬೆಳಿಗ್ಗೆ ಪೂಜೆ ಸಲ್ಲಿಸಿ ತಾತ್ಕಾಲಿ ಚಿತಾಕಟೆಯನ್ನು ತೆರವುಗೊಳಿಸಲಾಯಿತು.
ಸಿದ್ದೇಶ್ವರ ಶ್ರೀಗಳು ಅಂತಿಮ ಆಶಯದಂತೆ ಅವರ ಲಿಖಿತ ಅಭಿವಂದನಾ ಪತ್ರದಲ್ಲಿ ಸೂಚಿಸಿದಂತೆ, ತಮ್ಮ ಕಾಲಾನಂತರದಲ್ಲಿ ತಮ್ಮ ಹೆಸರಿನಲ್ಲಿ ಯಾವುದೇ ಮಠ, ಸ್ಮಾರಕ, ಮಂದಿರ ನಿರ್ಮಾಣ ಮಾಡಬಾರದು ಎಂಬ ಆಶಯ ವ್ಯಕ್ತಪಡಿಸಿದ್ದರು.
ಶ್ರೀಗಳ ಆಶಯದಂತೆ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ಅಂತ್ಯ ಸಂಸ್ಕಾರದ ಚಿತೆಗಾಗಿ ನಿರ್ಮಿಸಿದ್ದ ತಾತ್ಕಾಲಿಕ ಚಿತಾಕಟ್ಟೆಯನ್ನು ತೆರವುಗೊಳಿಸಲಾಗಿದೆ. ಶನಿವಾರ ಶ್ರೀಗಳ ಚಿತಾಭಸ್ಮವನ್ನು ಕೂಡಲಸಂಗಮದ ತ್ರಿವೇಣಿ ಸಂಗಮ ಹಾಗೂ ಅರಬ್ಬಿ ಸಮುದ್ರದಲ್ಲಿ ಲೀನ ಮಾಡಿದ ಬಳಿಕ, ಆಶ್ರಮದ ಸಾಧಕ-ಸಂತರ ಸಮ್ಮುಖದಲ್ಲಿ ಭಾನುವಾರ ಚಿತಾಕಟ್ಟೆಯನ್ನು ತೆರವುಗೊಳಿಸಿ, ಸ್ವಚ್ಛಗೊಳಿಸಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಸ್ಪರ್ಧೆ ಹಿನ್ನೆಲೆ: ಕೋಲಾರಕ್ಕೆ ಕಾಂಗ್ರೆಸ್ ಸಮಿತಿ ಉಸ್ತುವಾರಿ ನೇಮಕ